Kangana Ranaut: “ಮಿಟ್ಟಿ ಮೇ ಮಿಲಾ ದೂಂಗಾ” ವೀಡಿಯೋ ವೈರಲ್, ಯೋಗಿಯನ್ನು ಹಾಡಿ ಹೊಗಳಿದ ನಟಿ ಕಂಗನಾ

|

Updated on: Apr 14, 2023 | 1:45 PM

ನನ್ನ ಅಣ್ಣ ಯೋಗಿ ಆದಿತ್ಯನಾಥ್ ಅವರನ್ನು ನಾನು ಇಷ್ಟಪಡುವಷ್ಟು ಬೇರೆ ಯಾರು ಇಷ್ಟಪಡಲು ಸಾಧ್ಯವಿಲ್ಲ ಎಂದು ಕಂಗನಾ ರಣಾವತ್ ಅವರು ಫೆಬ್ರವರಿ 25ರಂದು ಮುಖ್ಯಮಂತ್ರಿ ಯೋಗಿ ನೀಡಿದ ಹೇಳಿಕೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

Kangana Ranaut: ಮಿಟ್ಟಿ ಮೇ ಮಿಲಾ ದೂಂಗಾ ವೀಡಿಯೋ ವೈರಲ್, ಯೋಗಿಯನ್ನು ಹಾಡಿ ಹೊಗಳಿದ ನಟಿ ಕಂಗನಾ
ಸಾಂದರ್ಭಿಕ ಚಿತ್ರ
Follow us on

ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಮಾಫಿಯಾಕ್ಕೆ ಸಂಬಂಧಿಸಿದಂತೆ ಹಲವು ಆರೋಪಿಗಳನ್ನು ಎನ್‌ಕೌಂಟರ್‌ ಮಾಡಿದ ಘಟನೆ ನಡೆದಿದೆ. ಇದಕ್ಕಿಂತ ಮೊದಲು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಯೋಗಿ ಆದಿತ್ಯನಾಥ್ (Yogi Adityanath) ಅವರ ಮಿಟ್ಟಿ ಮೇ ಮಿಲಾ ದೂಂಗಾ (ಮಣ್ಣಿನೊಳಗೆ ಮಣ್ಣು ಮಾಡುತ್ತೇನೆ) ಎಂಬ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟ್ರೆಂಡಿಂಗ್ ಆಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಟಿ ಕಂಗನಾ ರಣಾವತ್ (Kangana Ranaut) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ಅವರನ್ನು ಹಾಡಿ ಹೊಗಳಿದ್ದಾರೆ. ಉಮೇಶ್ ಪಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅತೀಕ್ ಅಹ್ಮದ್ ಅವರ ಮಗ ಅಸದ್ ಮತ್ತು ಆತನ ಸಹಚರನನ್ನು ಪೊಲೀಸ್ ಎನ್‌ಕೌಂಟರ್‌ ಮಾಡಿದ್ದಾರೆ. ನನ್ನ ಅಣ್ಣ ಯೋಗಿ ಆದಿತ್ಯನಾಥ್ ಅವರನ್ನು ನಾನು ಇಷ್ಟಪಡುವಷ್ಟು ಬೇರೆ ಯಾರು ಇಷ್ಟಪಡಲು ಸಾಧ್ಯವಿಲ್ಲ ಎಂದು ಕಂಗನಾ ರಣಾವತ್ ಅವರು ಫೆಬ್ರವರಿ 25ರಂದು ಮುಖ್ಯಮಂತ್ರಿ ಯೋಗಿ ನೀಡಿದ ಹೇಳಿಕೆಯ ವೀಡಿಯೊವನ್ನು ಹಂಚಿಕೊಂಡು ಈ ಮಾತುಗಳನ್ನು ಟ್ವಿಟರ್​​ನಲ್ಲಿ ಟ್ವೀಟ್ ಮಾಡಿದ್ದಾರೆ.

2005ರಲ್ಲಿ ಬಿಎಸ್‌ಪಿ ಶಾಸಕರೊಬ್ಬರ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್‌ ಪಾಲ್‌ ಅವರನ್ನು ನಿರ್ಲಜ್ಜವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರುವರಿ 25ರಂದು ಯೋಗಿ, ಸಮಾಜವಾದಿ ಪಕ್ಷವು ಮಾಫಿಯಾಗಳನ್ನು ಪೋಷಿಸುತ್ತಿದೆ ಎಂದು ಆರೋಪಿಸಿ ಈ ಎಲ್ಲ ದುಷ್ಟರನ್ನು ನಾನು ನಾಶ ಮಾಡುತ್ತೇನೆ ಎಂದು ವಿಧಾನಸಭೆಯಲ್ಲಿ ಪ್ರತಿಜ್ಞೆ ಮಾಡಿದರು.

ಮಾಫಿಯಾಲದಲ್ಲಿ ಹೆಚ್ಚು ಹೆಸರು ಕೇಳಿ ಬರುತ್ತಿರುವುದು ಸಮಾಜವಾದಿ ಪಕ್ಷದ ಸಂಸದರದ್ದು. ಇದು ದುಷ್ಟರನ್ನು ಬೆಳೆಸುತ್ತಿದೆ, ಖಂಡಿತವಾಗಿ ನಾನು ಅವರ ಬೆನ್ನು ಮುರಿಯುವ ಕೆಲಸ ಮಾಡುತ್ತೇನೆ ಎಂದು ಯೋಗಿ ವಿಧಾನ ಸಭೆಯಲ್ಲಿ ಹೇಳಿದರು. ಕಂಗನಾ ಶೇರ್ ಮಾಡಿರುವ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗಿ ಅವರ ಭಾಷಣವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:Kangana Ranaut Twitter: ಟ್ವಿಟರ್​ಗೆ ಮರಳಿದ ಕಂಗನಾ ರಣಾವತ್​; ಖಾತೆ ಪುನಃ ಸಿಕ್ಕ ಬಳಿಕ ಖುಷಿ ಹಂಚಿಕೊಂಡ ನಟಿ

ಏ.13ರಂದು ಅತೀಕ್ ಅಹ್ಮದ್ ಅವರ ಪುತ್ರ ಅಸದ್ ಮತ್ತು ಇನ್ನೊಬ್ಬ ಆರೋಪಿ ಗುಲಾಮ್ ಎನ್‌ಕೌಂಟರ್‌ ಮಾಡಲಾಗಿತ್ತು. ಇಬ್ಬರು ಕೂಡ ಉಮೇಶ್ ಪಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾಗಿದ್ದರು. ಇವರನ್ನು ಕಂಡುಹಿಡಿದರವರಿಗೆ 5 ಲಕ್ಷ ಬಹುಮಾನ ನೀಡಲಾಗುವುದು ಎಂದು ಉತ್ತರಪ್ರದೇಶದ ಪೊಲೀಸರು ಹೇಳಿದ್ದರು.

Published On - 12:46 pm, Fri, 14 April 23