BIG BREAKING: ಮೊಹಮ್ಮದ್ ಜುಬೇರ್ ವಿರುದ್ಧ ಯುಪಿಯಲ್ಲಿ ದಾಖಲಾಗಿರುವ ಎಲ್ಲಾ ಪ್ರಕರಣಗಳಿಗೆ ಜಾಮೀನು
ಮೊಹಮ್ಮದ್ ಜುಬೇರ್ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದಾನೆ.
ದೆಹಲಿ: ಕಳೆದ ತಿಂಗಳು ಬಂಧನಕ್ಕೊಳಗಾಗಿದ್ದ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ (Alt News co-founder) ಮತ್ತು ಫ್ಯಾಕ್ಟ್ ಚೆಕರ್ ಮೊಹಮ್ಮದ್ ಜುಬೇರ್ (Mohammed Zubair) ಅವರ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ಪಡೆದ ನಂತರ ಬಿಡುಗಡೆಯಾಗಲಿದ್ದಾರೆ. ಎಲ್ಲಾ ಎಫ್‌ಐಆರ್‌ಗಳಲ್ಲಿ(FIR) ಅವರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ. ಇದು ಕಾನೂನಿನ ಒಂದು ಸೆಟ್ ತತ್ವವಾಗಿದೆ ಬಂಧನದ ಅಧಿಕಾರವನ್ನು ಮಿತವಾಗಿ ಅನುಸರಿಸಬೇಕು. ಪ್ರಸ್ತುತ ಪ್ರಕರಣದಲ್ಲಿ ಅವರನ್ನು ನಿರಂತರ ಬಂಧನದಲ್ಲಿ ಇರಿಸಲು ಮತ್ತು ಅಂತ್ಯವಿಲ್ಲದ ಶಿಕ್ಷೆಗೆ ಒಳಪಡಿಸಲು ಯಾವುದೇ ಸಮರ್ಥನೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಬಗ್ಗೆ ಒಟ್ಟಾರೆ ತನಿಖೆ ಅಗತ್ಯವಿದೆ ಎಂದು ಹೇಳಿದ ನ್ಯಾಯಾಲಯ 6 ಎಫ್ಐಆರ್ ಗಳನ್ನು ಒಟ್ಟುಗೂಡಿಸಿದ್ದು ಎಲ್ಲ ಪ್ರಕರಣಗಳನ್ನು ಉತ್ತರ ಪ್ರದೇಶದಿಂದ ದೆಹಲಿಗೆ ವರ್ಗಾಯಿಸಿದೆ. ಪ್ರಕರಣಗಳನ್ನು ದೆಹಲಿ ಹೈಕೋರ್ಟ್ಗೆ ವರ್ಗಾಯಿಸಬೇಕು ಎಂದು ಜುಬೇರ್ ಮನವಿ ಮಾಡಿದ್ದರು. ಎಫ್ಐಐಆರ್ಗಳನ್ನು ದೆಹಲಿಗೆ ವರ್ಗಾಯಿಸುವ ಆದೇಶವು ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಲ್ಲ ಪ್ರಕರಣಗಳಿಗೆ ಅನ್ವಯ ಆಗಲಿದೆ. ಇನ್ಮುಂದೆ ಜುಬೇರ್ ವಿರುದ್ದ ದಾಖಲಾಗುವ ದೂರಿಗೂ ಇದು ಅನ್ವಯಿಸುತ್ತದೆ.
ಜುಬೇರ್ನ್ನು ಬಂಧಮುಕ್ತಗೊಳಿಸುವಂತೆ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಎಎಸ್ ಬೋಪಣ್ಣ ಅವರ ನ್ಯಾಯಪೀಠ ಆದೇಶಿಸಿದೆ.
ಸೀತಾಪುರ್, ಲಖೀಂಪುರ್ ಖೇರಿ, ಮುಜಾಫರ್ ನಗರ್ , ಗಾಜಿಯಾಬಾದ್ ನಲ್ಲಿ ತಲಾ ಒಂದು ಮತ್ತು ಹಾಥರಸ್ ನಲ್ಲಿ ಎರಡು ಪ್ರಕರಣಗಳು ಜುಬೇರ್ ವಿರುದ್ಧ ದಾಖಲಾಗಿದೆ. ಸುದ್ದಿನಿರೂಪಕರ ಬಗ್ಗೆ ಅಣಕವಾಡಿದ, ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪ ಮತ್ತು ದೇವರ ಬಗ್ಗೆ ಪ್ರಚೋದನಾತ್ಮಕ ವಿಷಯ ಟ್ವೀಟ್ ಮಾಡಿದ ಆರೋಪ ಜುಬೇರ್ ಮೇಲಿದೆ.
ದೆಹಲಿಯಲ್ಲಿ ದಾಖಲಾಗಿರುವ ಏಳನೇ ಪ್ರಕರಣದಲ್ಲಿ ಜುಬೇರ್ ಗೆ ಈಗಾಗಲೇ ಜಾಮೀನು ಸಿಕ್ಕಿದೆ.
Published On - 2:51 pm, Wed, 20 July 22