ಆರ್ಎಸ್ಎಸ್ಗೆ ಮುಸ್ಲಿಮರು ಕೂಡ ಸೇರಬಹುದೇ? ಮೋಹನ್ ಭಾಗವತ್ ಹೇಳಿದ್ದೇನು?
ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಮುಸ್ಲಿಮರು ಕೂಡ ಸೇರಬಹುದೇ ಎಂದು ಜನರು ಕೇಳಿರುವ ಪ್ರಶ್ನೆಗೆ ಆರ್‌ಎಸ್‌ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ನೇರವಾಗಿ ಉತ್ತರಿಸಿದ್ದಾರೆ. ಆರ್ಎಸ್ಎಸ್ನಲ್ಲಿ ಯಾವುದೇ ಬ್ರಾಹ್ಮಣರನ್ನು ಪ್ರತ್ಯೇಕವಾಗಿ ಗುರುತಿಸುವುದಿಲ್ಲ, ಯಾವುದೇ ಮುಸ್ಲಿಮರನ್ನು ಅನುಮತಿ ಆಧಾರದ ಮೇಲೆ ಸೇರಿಸಿಕೊಳ್ಳುವುದಿಲ್ಲ, ಅಥವಾ ಪ್ರತ್ಯೇಕ ಗುರುತಿನೊಂದಿಗೆ ಸಂಘಕ್ಕೆ ಸೇರಿಸಿಕೊಳ್ಳುವುದಿಲ್ಲ, ಜನರನ್ನು ಹಿಂದೂಗಳಾಗಿ ಮಾತ್ರ ಸ್ವೀಕರಿಸಲಾಗುತ್ತದೆ.

ನವದೆಹಲಿ, ನವೆಂಬರ್ 10: ಮುಸ್ಲಿಮರು ಕೂಡ ಆರ್ಎಸ್ಎಸ್ಗೆ ಸೇರಬಹುದೇ ಎನ್ನುವ ಪ್ರಶ್ನೆಗೆ ಆರ್‌ಎಸ್‌ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ (Mohan Bhagwat)ಅಚ್ಚರಿಯ ಉತ್ತರ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಅವರು ಕೂಡ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಭಾಗವತ್ಗೆ ಆಸಕ್ತಿದಾಯಕ ಪ್ರಶ್ನೆಯನ್ನು ಕೇಳಲಾಯಿತು. ಅವರ ಉತ್ತರ ಎಲ್ಲರಿಂದ ಚಪ್ಪಾಳೆ ಗಿಟ್ಟಿಸಿತ್ತು.
ಆರ್ಎಸ್ಎಸ್ನಲ್ಲಿ ಯಾವುದೇ ಬ್ರಾಹ್ಮಣರನ್ನು ಪ್ರತ್ಯೇಕವಾಗಿ ಗುರುತಿಸುವುದಿಲ್ಲ, ಯಾವುದೇ ಮುಸ್ಲಿಮರನ್ನು ಅನುಮತಿ ಆಧಾರದ ಮೇಲೆ ಸೇರಿಸಿಕೊಳ್ಳುವುದಿಲ್ಲ, ಅಥವಾ ಪ್ರತ್ಯೇಕ ಗುರುತಿನೊಂದಿಗೆ ಸಂಘಕ್ಕೆ ಸೇರಿಸಿಕೊಳ್ಳುವುದಿಲ್ಲ, ಜನರನ್ನು ಹಿಂದೂಗಳಾಗಿ ಮಾತ್ರ ಸ್ವೀಕರಿಸಲಾಗುತ್ತದೆ.
ಆದ್ದರಿಂದ, ವಿವಿಧ ಪಂಗಡಗಳ (ಮುಸ್ಲಿಮರು, ಕ್ರಿಶ್ಚಿಯನ್ನರು ಅಥವಾ ಯಾವುದೇ ಇತರ ಪಂಗಡ) ಜನರು ಸಂಘಕ್ಕೆ ಸೇರಬಹುದು, ಆದರೆ ಅವರು ತಮ್ಮ ಪ್ರತ್ಯೇಕ ಗುರುತುಗಳನ್ನು ಬಿಡಬೇಕು. ನಿಮ್ಮ ಅನನ್ಯತೆಯನ್ನು ಸ್ವಾಗತಿಸಲಾಗುತ್ತದೆ, ಆದರೆ ನೀವು ಶಾಖೆಗೆ ಬಂದಾಗ, ನೀವು ಭಾರತ ಮಾತೆಯ ಮಗ ಮತ್ತು ಈ ಹಿಂದೂ ಸಮಾಜದ ಸದಸ್ಯರಾಗಿ ಬರುತ್ತೀರಿ ಎಂದು ಹೇಳಿದರು.
ನಾವು ಸಂಘದಲ್ಲಿ ಎಷ್ಟು ಜನರು ಇದ್ದಾರೆಂದು ಎಣಿಸುವುದಿಲ್ಲ, ಹಾಗೆಯೇ ಅವರು ಯಾರೆಂದೂ ಕೇಳುವುದಿಲ್ಲ. ನಾವೆಲ್ಲರೂ ಭಾರತ ಮಾತೆಯ ಮಕ್ಕಳು. ಸಂಘವು ಕಾರ್ಯನಿರ್ವಹಿಸುವ ವಿಧಾನ ಇದು ಎಂದರು. ಭಾರತ ಯಾವಾಗಲೂ ಪಾಕಿಸ್ತಾನದೊಂದಿಗೆ ಶಾಂತಿಯನ್ನು ಬಯಸುತ್ತದೆ, ಆದರೆ ನೆರೆಯ ದೇಶ ಅದನ್ನು ಬಯಸುವುದಿಲ್ಲ. ಪಾಕಿಸ್ತಾನವು 1971 ರಲ್ಲಿ ದಾಳಿ ಮಾಡಿ ತನ್ನ 90,000 ಸೈನ್ಯವನ್ನು ಕಳೆದುಕೊಂಡಿತು. ಸ್ಪರ್ಧಿಸುವುದು ಅಥವಾ ಹೋರಾಡುವುದಕ್ಕಿಂತ ಭಾರತದೊಂದಿಗೆ ಸಹಕರಿಸುವುದು ಉತ್ತಮ ಎಂದು ಪಾಕಿಸ್ತಾನ ಅರ್ಥಮಾಡಿಕೊಳ್ಳಬೇಕು.
ಆದರೆ ಅವರಿಗೆ ಈ ಭಾಷೆ ಅರ್ಥವಾಗುತ್ತಿಲ್ಲ. ಆದ್ದರಿಂದ ನಾವು ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಮಾತನಾಡಬೇಕು ಎಂದು ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ, ನೀತಿಗಳನ್ನು ಬೆಂಬಲಿಸುತ್ತದೆ.ಅಯೋಧ್ಯೆಯಲ್ಲಿ ರಾಮ ಮಂದಿರದ ಬೇಡಿಕೆಯನ್ನು ಬೆಂಬಲಿಸಿದ್ದರೆ, ಆರೆಸ್ಸೆಸ್ ಕಾರ್ಯಕರ್ತರು ಕಾಂಗ್ರೆಸ್ ಅನ್ನು ಸಹ ಬೆಂಬಲಿಸುತ್ತಿದ್ದರು ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ: ಮಕ್ಕಳಿಗೆ ಸಂಸ್ಕಾರ ಕಲಿಸದಿದ್ದರೆ ಲವ್ ಜಿಹಾದ್ಗೆ ಬಲಿಯಾಗಬೇಕಾಗುತ್ತೆ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
ನಾವು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ. ನಾವು ಚುನಾವಣಾ ರಾಜಕೀಯದಲ್ಲಿ ಭಾಗವಹಿಸುವುದಿಲ್ಲ. ಸಂಘವು ಸಮಾಜವನ್ನು ಒಗ್ಗೂಡಿಸಲು ಕೆಲಸ ಮಾಡುತ್ತದೆ. ನಾವು ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಬಯಸಿದ್ದೇವೆ, ಆದ್ದರಿಂದ ನಮ್ಮ ಸ್ವಯಂಸೇವಕರು ಅದರ ನಿರ್ಮಾಣಕ್ಕೆ ನಿಂತವರಿಗೆ ಮತ ಹಾಕಿದರು ಎಂದು ಅವರು ಹೇಳಿದರು. ಕರ್ನಾಟಕದಲ್ಲಿ ಆರ್‌ಎಸ್‌ಎಸ್ ನಿಷೇಧಿಸಲು ಕಾಂಗ್ರೆಸ್ ಪಕ್ಷ ಹೊರಟಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:20 am, Mon, 10 November 25




