ಭುವನೇಶ್ವರ: ಒಡಿಶಾದಲ್ಲಿ (Odisha BJP Government) ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆಯೇರಿದೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮೋಹನ್ ಚರಣ್ ಮಾಝಿ (Mohan Charan Majhi) ಅವರು ಒಡಿಶಾದ ನೂತನ ಮುಖ್ಯಮಂತ್ರಿಯಾಗಿ ಇಂದು (ಬುಧವಾರ) ಸಂಜೆ ಜನತಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ಈ ಅದ್ದೂರಿ ಸಮಾರಂಭದಲ್ಲಿ ಒಡಿಶಾ ರಾಜ್ಯಪಾಲ ರಘುಬರ್ ದಾಸ್ ಅವರು ನೂತನ ಮುಖ್ಯಮಂತ್ರಿ ಮೋಹನ್ ಮಾಝಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಇದರೊಂದಿಗೆ, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಸೋಲಿನ ನಂತರ ಬಿಜು ಜನತಾ ದಳ (ಬಿಜೆಡಿ) ಮುಖ್ಯಸ್ಥ ನವೀನ್ ಪಟ್ನಾಯಕ್ ಅವರ 24 ವರ್ಷಗಳ ಅಧಿಕಾರಾವಧಿಯು ಕೊನೆಗೊಂಡಿದೆ. ಒಡಿಶಾದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೇರಿದೆ.
ಒಡಿಶಾದಲ್ಲಿ ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿ ಮೋಹನ್ ಮಾಝಿ ಅಧಿಕಾರಕ್ಕೇರಿದ್ದಾರೆ. ಇತ್ತೀಚೆಗೆ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಮಾಝಿ ಸುಮಾರು 87,815 ಮತಗಳ ಅಂತರದಿಂದ ಕಿಯೋಂಜರ್ ಸ್ಥಾನವನ್ನು ಗೆದ್ದಿದ್ದರು. ಈ ಕ್ಷೇತ್ರದಿಂದ ಬಿಜೆಡಿಯ ಮೀನಾ ಮಾಝಿ ಅವರನ್ನು ಸೋಲಿಸಿದರು.
ಇದನ್ನೂ ಓದಿ: Mohan Charan Majhi: ಸ್ಪೀಕರ್ ಮೇಲೆ ದಾಲ್ ಎರಚಿದ್ದ ಮೋಹನ್ ಮಾಝಿ ಅವರನ್ನೇ ಒಡಿಶಾದ ಸಿಎಂ ಆಗಿ ಬಿಜೆಪಿ ಆಯ್ಕೆ ಮಾಡಿದ್ದೇಕೆ?
ಇದಕ್ಕೂ ಮುನ್ನ ಮಾತನಾಡಿದ ಮೋಹನ್ ಮಾಝಿ, ಬಿಜೆಪಿಯ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹೊಸ ಸರ್ಕಾರ ರಚನೆಯಾದ 100 ದಿನಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದಿದ್ದಾರೆ.
LIVE : ଭୁବନେଶ୍ୱର ସ୍ଥିତ ଜନତା ମଇଦାନରେ ଓଡ଼ିଶାର ନୂତନ ମୁଖ୍ୟମନ୍ତ୍ରୀ ଏବଂ ମନ୍ତ୍ରୀ ମଣ୍ଡଳର ଶପଥ ପାଠ ସମାରୋହ । https://t.co/Zb3YwVR0EM
— BJP Odisha (@BJP4Odisha) June 12, 2024
ಮಂಗಳವಾರ ನಡೆದ ಸಭೆಯಲ್ಲಿ ಒಡಿಶಾದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಅವರನ್ನು ಆಯ್ಕೆ ಮಾಡಲಾಯಿತು. 1997-2000 ವರೆಗೆ ಸರಪಂಚ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಮೋಹನ್ ಮಾಝಿ, 2000ರಲ್ಲಿ ಬಿಜೆಡಿ-ಬಿಜೆಪಿ ಮೈತ್ರಿಯೊಂದಿಗೆ ಕಿಯೋಂಜಾರ್‌ನಿಂದ ಮೊದಲ ಬಾರಿಗೆ ರಾಜ್ಯ ವಿಧಾನಸಭೆಗೆ ಆಯ್ಕೆಯಾದರು. ಅವರು 2004ರಲ್ಲಿ ಮರು ಆಯ್ಕೆಯಾದರು. 2005ರಿಂದ 2009ರವರೆಗೆ ಅವರು BJD-BJP ಸಮ್ಮಿಶ್ರ ಸರ್ಕಾರದಲ್ಲಿ ಸರ್ಕಾರದ ಉಪ ಮುಖ್ಯ ಸಚೇತಕರಾಗಿದ್ದರು. 2019ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾದರು.
ಇದನ್ನೂ ಓದಿ: ಇಂದು ಚಂದ್ರಬಾಬು ನಾಯ್ಡು, ಮೋಹನ್ ಮಾಝಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ, ಪ್ರಧಾನಿ ಮೋದಿ ಭಾಗಿ
ಇಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರ ಜೊತೆಗೆ ಇಬ್ಬರು ಉಪ ಮುಖ್ಯಮಂತ್ರಿಗಳು ಕೂಡ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಿಜೆಪಿ ನಾಯಕರಾದ ಕನಕ್ ವರ್ಧನ್ ಸಿಂಗ್ ಡಿಯೋ ಮತ್ತು ಪ್ರವತಿ ಪರಿದಾ ಒಡಿಶಾದ ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 2024ರ ವಿಧಾನಸಭಾ ಚುನಾವಣೆಯಲ್ಲಿ ಡಿಯೋ ಅವರು ಬಿಜೆಡಿಯ ಸರೋಜ್ ಕುಮಾರ್ ಮೆಹರ್ ಅವರನ್ನು ಸೋಲಿಸಿದರು. ಪರಿದಾ ನಿಮಾಪಾರಾ ಕ್ಷೇತ್ರದಲ್ಲಿ ಬಿಜೆಡಿಯ ದಿಲೀಪ್ ಕುಮಾರ್ ನಾಯಕ್ ಅವರನ್ನು 4,588 ಮತಗಳ ಅಂತರದಿಂದ ಸೋಲಿಸಿದರು.
#WATCH | Odisha CM-designate Mohan Charan Majhi, Deputy CMs-designate Kanak Vardhan Singh Deo & Pravati Parida and other leaders likely to take oath shortly bow before people and greet them from the stage at Janata Maidan, in Bhubaneswar. pic.twitter.com/SpzEVDNzX3
— ANI (@ANI) June 12, 2024
ಒಡಿಶಾದಲ್ಲಿ ಬಿಜೆಪಿಯು 2000 ಮತ್ತು 2004ರಲ್ಲಿ ಬಿಜೆಡಿಯ ಮೈತ್ರಿ ಪಾಲುದಾರರಾಗಿ ರಾಜ್ಯವನ್ನು ಆಳಿತು. ಆದರೆ, ಒಡಿಶಾದಲ್ಲಿ ಬಿಜೆಪಿ ಸ್ವಂತವಾಗಿ ಸರ್ಕಾರವನ್ನು ರಚಿಸಿದ್ದು ಇದೇ ಮೊದಲು. ಒಡಿಶಾದಲ್ಲಿ ಹೊಸ ಮುಖ್ಯಮಂತ್ರಿ ಮತ್ತು ಮಂತ್ರಿ ಮಂಡಲದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಕಾರಣದಿಂದ ಇಂದು (ಜೂನ್ 12) ಮಧ್ಯಾಹ್ನ 1 ಗಂಟೆಯ ನಂತರ ಭುವನೇಶ್ವರದಲ್ಲಿರುವ ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳು ಮತ್ತು ನ್ಯಾಯಾಲಯಗಳನ್ನು ಮುಚ್ಚಲಾಗುವುದು ಎಂದು ಒಡಿಶಾ ಸರ್ಕಾರ ಘೋಷಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:09 pm, Wed, 12 June 24