ನಿದ್ದೆ ಮಾಡ್ತಿಲ್ಲ ಎಂದು 15 ದಿನದ ಶಿಶುವನ್ನು ಫ್ರಿಡ್ಜ್ನಲ್ಲಿ ಮಲಗಿಸಿದ ತಾಯಿ
ಮಗು ನಿದ್ದೆ ಮಾಡುತ್ತಿಲ್ಲವೆಂದು 15 ದಿನದ ಶಿಶುವನ್ನು ತಾಯಿಯೊಬ್ಬಳು ಫ್ರಿಡ್ಜ್ನಲ್ಲಿ ಇಟ್ಟಿರುವ ಘಟನೆ ಮೊರಾದಾಬಾದ್ನಲ್ಲಿ ನಡೆದಿದೆ. ಹೆರಿಗೆ ನಂತರ ಮಹಿಳೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಮಹಿಳೆ ತಾನು ಮಲಗಲು ಹೋಗುವ ಮುನ್ನ ಮಗುವನ್ನು ಫ್ರಿಡ್ಜ್ನಲ್ಲಿ ಇರಿಸಿದ್ದರು. ಶಿಶುವಿನ ಕಿರುಚಾಟ ಕೇಳಿ ಅಜ್ಜಿ ಮಗುವನ್ನು ರಕ್ಷಿಸಿದರು. ಈ ಆಘಾತಕಾರಿ ಕೃತ್ಯವು ಸ್ಥಳೀಯ ಸಮುದಾಯವನ್ನು ಆತಂಕಕ್ಕೀಡು ಮಾಡಿದೆ ಮತ್ತು ಪ್ರಸವಾನಂತರದ ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಚರ್ಚೆಗಳನ್ನು ಮತ್ತೆ ಹುಟ್ಟುಹಾಕಿದೆ.

ಮೊರಾದಾಬಾದ್, ಸೆಪ್ಟೆಂಬರ್ 09: ಮಗು(Baby) ನಿದ್ದೆ ಮಾಡುತ್ತಿಲ್ಲವೆಂದು 15 ದಿನದ ಶಿಶುವನ್ನು ತಾಯಿಯೊಬ್ಬಳು ಫ್ರಿಡ್ಜ್ನಲ್ಲಿ ಇಟ್ಟಿರುವ ಘಟನೆ ಮೊರಾದಾಬಾದ್ನಲ್ಲಿ ನಡೆದಿದೆ. ಹೆರಿಗೆ ನಂತರ ಮಹಿಳೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಮಹಿಳೆ ತಾನು ಮಲಗಲು ಹೋಗುವ ಮುನ್ನ ಮಗುವನ್ನು ಫ್ರಿಡ್ಜ್ನಲ್ಲಿ ಇರಿಸಿದ್ದರು. ಶಿಶುವಿನ ಕಿರುಚಾಟ ಕೇಳಿ ಅಜ್ಜಿ ಮಗುವನ್ನು ರಕ್ಷಿಸಿದರು. ಈ ಆಘಾತಕಾರಿ ಕೃತ್ಯವು ಸ್ಥಳೀಯ ಸಮುದಾಯವನ್ನು ಆತಂಕಕ್ಕೀಡು ಮಾಡಿದೆ ಮತ್ತು ಪ್ರಸವಾನಂತರದ ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಚರ್ಚೆಗಳನ್ನು ಮತ್ತೆ ಹುಟ್ಟುಹಾಕಿದೆ.
ಕುಟುಂಬ ಸದಸ್ಯರು ಹೇಳುವಂತೆ, ತಾಯಿ ಮೊರಾದಾಬಾದ್‌ನ ಜಬ್ಬರ್ ಕಾಲೋನಿಯಲ್ಲಿ ಪತಿ ಮತ್ತು ಅತ್ತೆ ಮಾವಂದಿರೊಂದಿಗೆ ವಾಸಿಸುತ್ತಿದ್ದರು. ಸೆಪ್ಟೆಂಬರ್ 5ರಂದು ಈ ಘಟನೆ ನಡೆದಿದ್ದು, ಎಷ್ಟೊತ್ತಾದರೂ ಮಗು ಮಲಗಲಿಲ್ಲ ಎಂದು ತಾಯಿ ಶಿಶುವನ್ನು ಫ್ರಿಡ್ಜ್ನಲ್ಲಿರಿಸಿದ್ದಾರೆ.ನಂತರ ಅವಳು ತನ್ನ ಕೋಣೆಗೆ ಹಿಂತಿರುಗಿ ನಿದ್ರೆಗೆ ಜಾರಿದಳು. ಸ್ವಲ್ಪ ಸಮಯದ ನಂತರ, ಮಗುವಿನ ಅಳು ಅಜ್ಜಿಗೆ ಎಚ್ಚರಿಕೆ ನೀಡಿತು.
ಫ್ರಿಡ್ಜ್ನಲ್ಲಿ ಏನೋ ಸಪ್ಪಳ ಬರುತ್ತಿದೆ ಎಂದು ತೆರೆದು ನೋಡಿದಾಗ ಅಲ್ಲಿ ಮಗು ಇತ್ತು, ಮಗುವನ್ನು ವೈದ್ಯರ ಬಳಿಗೆ ಕರೆದೊಯ್ಯಲಾಯಿತು, ಅವರು ಮಗುವಿಗೆ ಯಾವುದೇ ಗಾಯಗಳಾಗಿಲ್ಲ ಎಂದು ದೃಢಪಡಿಸಿದರು.
ಮತ್ತಷ್ಟು ಓದಿ: Shocking News: ಆಟವಾಡುತ್ತಾ ನಾಗರಹಾವನ್ನು ಕಚ್ಚಿ ಸಾಯಿಸಿದ 1 ವರ್ಷದ ಮಗು!
ಆಕೆಯ ಕುಟುಂಬದವರು ಪ್ರಶ್ನಿಸಿದಾಗ, ಆ ಮಹಿಳೆ ಯಾವುದೇ ಆತಂಕವಿಲ್ಲದೆ, ಮಗು ನಿದ್ರೆ ಮಾಡುತ್ತಿಲ್ಲ ಹಾಗಾಗಿ ನಾನು ಅವನನ್ನು ಫ್ರಿಡ್ಜ್‌ನಲ್ಲಿ ಇಟ್ಟಿದ್ದೆ ಎಂದು ಉತ್ತರ ಕೊಟ್ಟಿದ್ದಳು.ಆಕೆಯ ಪ್ರತಿಕ್ರಿಯೆ ಕುಟುಂಬವನ್ನು ದಿಗ್ಭ್ರಮೆಗೊಳಿಸಿತು.
ಮೊದಲು ಆಕೆಯನ್ನು ಮಾಂತ್ರಿಕರ ಬಳಿ ಕರೆದೊಯ್ದಿದ್ದರು.ಅದರಿಂದ ಪ್ರಯೋಜನವಾಗದಿದ್ದಾಗ, ಸಂಬಂಧಿಕರೊಬ್ಬರ ಸೂಚನೆ ಮೇರೆಗೆ ಮನೋವೈದ್ಯರ ಬಳಿ ಕರೆದೊಯ್ಯಲಾಯಿತು.ಇದು ಹೆರಿಗೆಯ ನಂತರ ಕಾಣಿಸಿಕೊಳ್ಳಬಹುದಾದ ಅಪರೂಪದ ಆದರೆ ಗಂಭೀರವಾದ ಮಾನಸಿಕ ಅಸ್ವಸ್ಥತೆಯಾಗಿದೆ.
ಪ್ರಸವಾನಂತರದ ಅಸ್ವಸ್ಥತೆಗಳು ಸೌಮ್ಯದಿಂದ ತೀವ್ರವಾಗಿರಬಹುದು ಎಂದು ಮಾನಸಿಕ ಆರೋಗ್ಯ ತಜ್ಞರು ಹೇಳುತ್ತಾರೆ. ಅನೇಕ ಹೊಸ ತಾಯಂದಿರು ಬೇಬಿ ಬ್ಲೂಸ್ ಅನ್ನು ಅನುಭವಿಸುತ್ತಾರೆ.ಇದರಲ್ಲಿ ಮನಸ್ಥಿತಿಯಲ್ಲಿನ ಬದಲಾವಣೆಗಳು ಮತ್ತು ಕಿರಿಕಿರಿ ಸೇರಿವೆ.ಇದು ಸಾಮಾನ್ಯವಾಗಿ ಎರಡು ವಾರಗಳಲ್ಲಿ ಕಡಿಮೆಯಾಗುತ್ತದೆ.ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸುಮಾರು ಶೇಕಡ 20 ರಷ್ಟು ಮಹಿಳೆಯರು ಪ್ರಸವಾನಂತರದ ಖಿನ್ನತೆಯನ್ನು ಅನುಭವಿಸುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಗಮನಿಸುತ್ತದೆ.
ಪ್ರಸವಾನಂತರದ ಮನೋರೋಗವು 1,000 ಜನನಗಳಿಗೆ ಕೇವಲ 1 ರಿಂದ 2 ಮಹಿಳೆಯರ ಮೇಲೆ ಮಾತ್ರ ಪರಿಣಾಮ ಬೀರುತ್ತದೆ, ಆದರೆ ಪ್ರಸವಾನಂತರದ ಖಿನ್ನತೆಯು ಹೆಚ್ಚು ಸಾಮಾನ್ಯವಾಗಿದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನಡೆಸಿದ ಅಧ್ಯಯನದ ಪ್ರಕಾರ, ಭಾರತದಲ್ಲಿ ಪ್ರಸವಾನಂತರದ ಖಿನ್ನತೆಯ ಪ್ರಮಾಣ ಶೇ. 22 ರಷ್ಟು ಇದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




