ಮೋದಿಯವರ ನಾಯಕತ್ವದಲ್ಲಿ ಇದು ಅತ್ಯಂತ ಯಶಸ್ವಿ ಅಧಿಕಾರಾವಧಿ: ಪ್ರಲ್ಹಾದ್ ಜೋಶಿ

|

Updated on: Feb 10, 2024 | 8:34 PM

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ,ಉಭಯ ಸದನಗಳು ಅಂಗೀಕರಿಸಿದ ಒಟ್ಟು ಮಸೂದೆಗಳ ಸಂಖ್ಯೆ 221. ಒಟ್ಟಾರೆಯಾಗಿ, ಕೆಲವು ಅಡಚಣೆಗಳು ಮತ್ತು ಇತರ ವಿಷಯಗಳಿವೆ. ಆದರೆ ಪ್ರಧಾನಿ ಮೋದಿಯವರ (PM Modi) ನಾಯಕತ್ವದಲ್ಲಿ ಇದು ಅತ್ಯಂತ ಯಶಸ್ವಿ ಅಧಿಕಾರಾವಧಿಯಾಗಿದೆ. ಐತಿಹಾಸಿಕ ಮಸೂದೆಗಳನ್ನು ಅಂಗೀಕರಿಸಲಾಯಿತು. 17ನೇ ಲೋಕಸಭೆ ಮತ್ತು ರಾಜ್ಯಸಭೆಯ ಈಗಿನ ಸದಸ್ಯರು ನನ್ನ ಪ್ರಕಾರ ಅದೃಷ್ಟವಂತರು ಎಂದು ಹೇಳಿದ್ದಾರೆ.

ಮೋದಿಯವರ ನಾಯಕತ್ವದಲ್ಲಿ ಇದು ಅತ್ಯಂತ ಯಶಸ್ವಿ ಅಧಿಕಾರಾವಧಿ: ಪ್ರಲ್ಹಾದ್ ಜೋಶಿ
ಪ್ರಲ್ಹಾದ್ ಜೋಶಿ
Follow us on

ದೆಹಲಿ ಫೆಬ್ರುವರಿ 10: ಸಂಸತ್​​ನ ಬಜೆಟ್ ಅಧಿವೇಶನ( Parliament Budget session)ಮುಕ್ತಾಯದ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ(Pralhad Joshi) 17 ನೇ ಲೋಕಸಭೆಯ ಉತ್ಪಾದಕತೆಯನ್ನು ಶ್ಲಾಘಿಸಿದ್ದು ಇದರಲ್ಲಿ, 221 ಮಸೂದೆಗಳ ಅಂಗೀಕಾರವಾಗಿದೆ ಎಂದಿದ್ದಾರೆ. ಉಭಯ ಸದನಗಳು ಅಂಗೀಕರಿಸಿದ ಒಟ್ಟು ಮಸೂದೆಗಳ ಸಂಖ್ಯೆ 221. ಒಟ್ಟಾರೆಯಾಗಿ, ಕೆಲವು ಅಡಚಣೆಗಳು ಮತ್ತು ಇತರ ವಿಷಯಗಳಿವೆ. ಆದರೆ ಪ್ರಧಾನಿ ಮೋದಿಯವರ (PM Modi) ನಾಯಕತ್ವದಲ್ಲಿ ಇದು ಅತ್ಯಂತ ಯಶಸ್ವಿ ಅಧಿಕಾರಾವಧಿಯಾಗಿದೆ. ಐತಿಹಾಸಿಕ ಮಸೂದೆಗಳನ್ನು ಅಂಗೀಕರಿಸಲಾಯಿತು. 17ನೇ ಲೋಕಸಭೆ ಮತ್ತು ರಾಜ್ಯಸಭೆಯ ಈಗಿನ ಸದಸ್ಯರು ನನ್ನ ಪ್ರಕಾರ ಅದೃಷ್ಟವಂತರು. ಅವರು ಹಳೆಯ ಸಂಸತ್ತು ಮತ್ತು ಹೊಸ ಸಂಸತ್ತಿನಿಂದಲೂ ಕಾರ್ಯನಿರ್ವಹಿಸಬಹುದು. ಮುಂದೆ ಬರುವವರು ಹೊಸ ಸಂಸತ್ತಿನಲ್ಲಿರುತ್ತಾರೆ, ಹಿಂದೆ ಇದ್ದವರು ಹಳೆಯ ಸಂಸತ್ತಿನಲ್ಲಿ ಮಾತ್ರ ಇದ್ದರು ಎಂದಿದ್ದಾರೆ.


ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ, ನಾವು ದಾಖಲೆಯನ್ನು ರಚಿಸಿದ್ದೇವೆ, ಅತಿ ಹೆಚ್ಚು ಅನಗತ್ಯವಾದ, ಬಳಕೆಯಲ್ಲಿಲ್ಲದ ಕಾನೂನುಗಳನ್ನು ರದ್ದುಗೊಳಿಸಲಾಗುತ್ತಿದೆ. 2014 ರಿಂದ ಇಲ್ಲಿಯವರೆಗೆ 1562 ಹಳೆಯ ಮತ್ತು ಅನಗತ್ಯ ಕಾನೂನುಗಳನ್ನು ರದ್ದುಗೊಳಿಸಲಾಗಿದೆ.

ಸಂಸದೀಯ ವ್ಯವಹಾರಗಳ ಸಚಿವಾಲಯದ ಮತ್ತೊಂದು ಪ್ರಮುಖ ಸಾಧನೆಯೆಂದರೆ ರಾಷ್ಟ್ರೀಯ ಇ-ವಿಧಾನ್ ಅಪ್ಲಿಕೇಶನ್ ಮೂಲಕ ಕಾಗದರಹಿತ ಶಾಸಕಾಂಗ. ನಾವು 22 ಶಾಸಕರೊಂದಿಗೆ ಎಂಒಯುಗೆ ಸಹಿ ಹಾಕಿದ್ದೇವೆ, 12 ಸಚಿವಾಲಯಗಳು ಈಗ ಸಂಪೂರ್ಣವಾಗಿ ಕಾಗದರಹಿತವಾಗಿವೆ ಎಂದಿದ್ದಾರೆ ಜೋಶಿ.

ಮಧ್ಯಂತರ ಬಜೆಟ್ ಅಧಿವೇಶನ (ಸಂಸತ್ತಿನ) ಇಂದು ಮುಕ್ತಾಯಗೊಂಡಿದೆ. ಆರಂಭದಲ್ಲಿ, ಒಂಬತ್ತು ಸಭೆಗಳನ್ನು ಯೋಜಿಸಲಾಗಿತ್ತು ಆದರೆ 10 ಸಭೆಗಳು ನಡೆದವು. ಸ್ಪೀಕರ್ ಅವರು ಈಗಾಗಲೇ ಪ್ರಸ್ತಾಪಿಸಿದಂತೆ, ವಿಶೇಷವಾಗಿ ಈ ಅಧಿವೇಶನದ ಬಗ್ಗೆ, ಲೋಕಸಭೆಯ ಉತ್ಪಾದಕತೆ ಶೇಕಡಾ 148 ಮತ್ತು ರಾಜ್ಯಸಭೆಗೆ ಶೇಕಡಾ 137 ರಷ್ಟಿತ್ತು” ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಇದನ್ನೂ ಓದಿ:ಟ್ರಾನ್ಸ್​​ಜೆಂಡರ್​​ಗಳಿಗೆ ಗುರುತು, ಪದ್ಮ ಪ್ರಶಸ್ತಿಗಳನ್ನು ನೀಡಿದ್ದೇವೆ: ಲೋಕಸಭೆಯಲ್ಲಿ ಮೋದಿ 

ಬಜೆಟ್ ಅಧಿವೇಶನಕ್ಕೆ ತೆರೆ

ಲೋಕಸಭೆ ಕಲಾಪವನ್ನು ಶನಿವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಈಗ ಮುಕ್ತಾಯಗೊಂಡ ಬಜೆಟ್ ಅಧಿವೇಶನವು ಸಂಸತ್ತಿನ ಚುನಾವಣೆಗಳನ್ನು ಘೋಷಿಸುವ ಮೊದಲು 17 ನೇ ಲೋಕಸಭೆಯ ಕೊನೆಯ ಅಧಿವೇಶನವಾಗಿತ್ತು.ಕಳೆದ ಐದು ವರ್ಷಗಳಲ್ಲಿ 17 ಲೋಕಸಭೆಯು 222 ಮಸೂದೆಗಳನ್ನು ಅಂಗೀಕರಿಸಿದೆ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ಅಧಿವೇಶನದ ಕೊನೆಯ ದಿನದಂದು ಸದನವು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತು ಚರ್ಚಿಸಿ ನಿರ್ಣಯವನ್ನು ಅಂಗೀಕರಿಸಿತು.

ತಮ್ಮ ಸಮಾರೋಪ ಭಾಷಣದಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು ಆಡಳಿತಾರೂಢ ಪಕ್ಷ ಮತ್ತು ವಿರೋಧ ಪಕ್ಷದ ಪೀಠಗಳನ್ನು ಸಮಾನವಾಗಿ ಪರಿಗಣಿಸಿದ್ದು ಸದನದ ಘನತೆ ಕಾಪಾಡಲು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ ಎಂದರು. ನಂತರ ಬಿರ್ಲಾ ಅವರು ಸದನವನ್ನು (ಅನಿರ್ದಿಷ್ಟ ಅವಧಿಗೆ) ಮುಂದೂಡಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:22 pm, Sat, 10 February 24