AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asaduddin Owaisi: ರಾಮಮಂದಿರ ಚರ್ಚೆ; ನಾನೇನು ಬಾಬರ್, ಜಿನ್ನಾ, ಔರಂಗಜೇಬ್​​ನ ವಕ್ತಾರನೇ?: ಓವೈಸಿ

ಲೋಕಸಭೆಯಲ್ಲಿ ರಾಮಮಂದಿರ ಉದ್ಘಾಟನೆ ಕುರಿತ ಚರ್ಚೆಯಲ್ಲಿ ಮಾತನಾಡಿದ ಅಸಾದುದ್ದೀನ್ ಓವೈಸಿ, ದೇಶದ ಮುಸ್ಲಿಮರು ತಮ್ಮ ದೇಶಪ್ರೇಮವನ್ನು ಸಾಬೀತುಪಡಿಸಲು ಪದೇ ಪದೇ ಹೇಳಲಾಗುತ್ತದೆ.“ನಾನು ಬಾಬರ್, ಜಿನ್ನಾ ಅಥವಾ ಔರಂಗಜೇಬನ ವಕ್ತಾರನೇ? ನಾನು ಭಗವಾನ್ ರಾಮನನ್ನು ಗೌರವಿಸುತ್ತೇನೆ. ಆದರೆ ಹೇ ರಾಮ್ ಎಂದು ಕೊನೆಯ ಮಾತುಗಳನ್ನು ಹೇಳಿದ ವ್ಯಕ್ತಿಯನ್ನು ಕೊಂದ ನಾಥೂರಾಂ ಗೋಡ್ಸೆಯನ್ನು ನಾನು ದ್ವೇಷಿಸುತ್ತೇನೆ ಎಂದಿದ್ದಾರೆ.

Asaduddin Owaisi: ರಾಮಮಂದಿರ ಚರ್ಚೆ; ನಾನೇನು ಬಾಬರ್, ಜಿನ್ನಾ, ಔರಂಗಜೇಬ್​​ನ ವಕ್ತಾರನೇ?: ಓವೈಸಿ
ಅಸಾದುದ್ದೀನ್ ಓವೈಸಿ
ರಶ್ಮಿ ಕಲ್ಲಕಟ್ಟ
|

Updated on:Feb 10, 2024 | 7:28 PM

Share

ದೆಹಲಿ ಫೆಬ್ರುವರಿ 10: ಮೋದಿ ಸರ್ಕಾರವು (Modi government) ಕೇವಲ ಒಂದು ಸಮುದಾಯ ಮತ್ತು ಒಂದು ಧರ್ಮಕ್ಕೆ ಮಾತ್ರ ಸೇವೆ ಸಲ್ಲಿಸುತ್ತಿದೆಯೇ? ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದ (Ram mandir) ಉದ್ಘಾಟನೆ ಕಾರ್ಯಕ್ರಮವು ಒಂದು ಧರ್ಮದ ಮೇಲೆ ಇನ್ನೊಂದು ಧರ್ಮದ ವಿಜಯವೇ ಎಂದು ಅಸಾದುದ್ದೀನ್ ಓವೈಸಿ (Asaduddin Owaisi) ಶನಿವಾರ ಪ್ರಶ್ನಿಸಿದ್ದಾರೆ. ಲೋಕಸಭೆಯಲ್ಲಿ ಶನಿವಾರ ರಾಮಮಂದಿರ ಉದ್ಘಾಟನೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಓವೈಸಿ, ದೇಶದ ಮುಸ್ಲಿಮರು ತಮ್ಮ ದೇಶಪ್ರೇಮವನ್ನು ಸಾಬೀತುಪಡಿಸಲು ಪದೇ ಪದೇ ಹೇಳಲಾಗುತ್ತದೆ.“ನಾನು ಬಾಬರ್, ಜಿನ್ನಾ ಅಥವಾ ಔರಂಗಜೇಬನ ವಕ್ತಾರನೇ? ನಾನು ಭಗವಾನ್ ರಾಮನನ್ನು ಗೌರವಿಸುತ್ತೇನೆ ಆದರೆ ಹೇ ರಾಮ್ ಎಂದು ಕೊನೆಯ ಮಾತುಗಳನ್ನು ಹೇಳಿದ ವ್ಯಕ್ತಿಯನ್ನು ಕೊಂದ ನಾಥೂರಾಂ ಗೋಡ್ಸೆಯನ್ನು ನಾನು ದ್ವೇಷಿಸುತ್ತೇನೆ.2019 ರ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲೇಖಿಸಿದ ಓವೈಸಿ, ಮಸೀದಿ ಧ್ವಂಸವು ‘ಅಪಾಯಕಾರಿ ಕೃತ್ಯ’ ಎಂದು ನ್ಯಾಯಾಲಯವು ಹೇಳಿದೆ ಎಂದಿದ್ದಾರೆ.

ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಡಿಸೆಂಬರ್ 6 ರಂದು ಏನಾಗಿತ್ತೋ ಅದಕ್ಕೆ ಮೋದಿ ಸರ್ಕಾರ ಸಂಭ್ರಮಿಸಿತು  ಎಂದು ಓವೈಸಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ ರಾಜೇಂದ್ರ ಅಗರ್ವಾಲ್ ಅವರು ಡಿಸೆಂಬರ್ 6 ರಂದು ಏನಾಗಿತ್ತೋ ಅದಕ್ಕೆ ಸಂಭ್ರಮಾಚರಣೆ ಮಾಡಿಲ್ಲ. ಆದರೆ ರಾಮ ಮಂದಿರದ ಉದ್ಘಾಟನೆಯಂದು ಉತ್ಸವಾಚರಣೆ ಮಾಡಲಾಗಿದೆ. “ನೀವು ವಿದ್ವಾಂಸರು. ನಿಮಗೆ ಕಾನೂನು ಜ್ಞಾನವೂ ಇದೆ. ಎಎಸ್‌ಐ ಮತ್ತು ಸುಪ್ರೀಂ ಕೋರ್ಟ್ ಎರಡೂ ದೇವಸ್ಥಾನದ ಮೇಲೆ ಮಸೀದಿ ನಿರ್ಮಿಸಲಾಗಿದೆ ಎಂದು ಹೇಳಿತ್ತು ಎಂದಿದ್ದಾರೆ.

ಓವೈಸಿ ಬಾಬರ್ ಅವರನ್ನು ಉಲ್ಲೇಖಿಸುತ್ತಿದ್ದಂತೆ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಎದ್ದುನಿಂತು, ಸಭಾಪತಿ ಓವೈಸಿಯನ್ನು ಮಾತ್ರ ಬಾಬರ್ ಆಕ್ರಮಣಕಾರ ಎಂದು ಪರಿಗಣಿಸುತ್ತಾರೆಯೇ ಎಂದು ಕೇಳಬೇಕು ಎಂದು ಹೇಳಿದರು. ಇದಕ್ಕೆ ಓವೈಸಿ, “ನೀವು ಮೊದಲು ಪುಷ್ಯಮಿತ್ರ ಶುಂಗ ಎಂದು ನೀವು ಪರಿಗಣಿಸುತ್ತೀರಿ ಎಂದು ಹೇಳುತ್ತೀರಿ. ದೇವಾಲಯಗಳನ್ನು ಧ್ವಂಸ ಮಾಡಲು ಅವನ ಬಳಿ ಸೈನ್ಯವಿತ್ತು. ಅದನ್ನೇ ನಾನು ಪುನರುಚ್ಚರಿಸುತ್ತಿದ್ದೇನೆ. ಸ್ವಾತಂತ್ರ್ಯದ ಹಲವು ವರ್ಷಗಳ ನಂತರ ನಿಶಿಕಾಂತ್ ದುಬೆ ಜಿ ಅವರು ಅಸಾದುದ್ದೀನ್ ಓವೈಸಿ ಅವರನ್ನು ಬಾಬರ್ ಬಗ್ಗೆ ಕೇಳುತ್ತಿದ್ದಾರೆ. ನೀವು ಮಾಡಬಹುದು. ಗಾಂಧಿ, ನೇತಾಜಿ, ಜಲಿಯನ್ ವಾಲಾಬಾಗ್ ಬಗ್ಗೆ ಕೇಳಿದ್ದಾರೆ ಆದರೆ ಇಲ್ಲ, ನೀವು ನನ್ನನ್ನು ಬಾಬರ್ ಬಗ್ಗೆ ಕೇಳುತ್ತೀರಿ ಎಂದು ಓವೈಸಿ ಹೇಳಿದರು. ಮುಸ್ಲಿಮರು ತಮ್ಮ ಜೀವನ ಅಥವಾ ನ್ಯಾಯವನ್ನು ಆರಿಸಿಕೊಳ್ಳಬಹುದು ಎಂಬ ಸಂದೇಶವನ್ನು ಪ್ರಧಾನಿ ಮೋದಿ ಕಳುಹಿಸುತ್ತಿದ್ದಾರೆ ಎಂದು ಓವೈಸಿ ಹೇಳಿದರು.

ಬಾಬ್ರಿ ಮಸೀದಿ ಶಾಶ್ವತ, ಬಾಬರಿ ಮಸೀದಿ ಜಿಂದಾಬಾದ್

ಶನಿವಾರ ಲೋಕಸಭೆಯಲ್ಲಿ ಭಾವನಾತ್ಮಕ ಭಾಷಣ ಮಾಡಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಅಯೋಧ್ಯೆಯ ರಾಮಮಂದಿರ ಸ್ಥಳದಲ್ಲಿ ಬಾಬ್ರಿ ಮಸೀದಿ ಶಾಶ್ವತವಾಗಿ ಅಸ್ತಿತ್ವದಲ್ಲಿರುತ್ತದೆ ಎಂದಿದ್ದು ತಮ್ಮ ಭಾಷಣವನ್ನು ‘ಬಾಬರಿ ಮಸೀದಿ ಜಿಂದಾಬಾದ್’ ಘೋಷಣೆಯೊಂದಿಗೆ ಮುಕ್ತಾಯಗೊಳಿಸಿದರು.

ಮಸೀದಿ ಇನ್ನೂ ಅಸ್ತಿತ್ವದಲ್ಲಿದೆ ಮತ್ತು ಅದು ಇದ್ದ ಸ್ಥಳದಲ್ಲಿ ಉಳಿಯುತ್ತದೆ ಎಂಬುದು ನನ್ನ ನಂಬಿಕೆ. ಬಾಬರಿ ಮಸೀದಿ ಇತ್ತು, ಇದೆ ಮತ್ತು ಉಳಿಯುತ್ತದೆ. ಬಾಬರಿ ಮಸೀದಿಗೆ ಜಯವಾಗಲಿ, ಭಾರತಕ್ಕೆ ಜಯವಾಗಲಿ, ಜೈ ಹಿಂದ್” ಎಂದು ಓವೈಸಿ ಹೇಳಿದ್ದಾರೆ

ಅಸಾದುದ್ದೀನ್ ಓವೈಸಿ ಅವರು ತಮ್ಮ ಭಾಷಣದ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿರಾಮ ಮಂದಿರ ‘ಏಕ್ ಭಾರತ್, ಶ್ರೇಷ್ಠ ಭಾರತ’ದ ಪ್ರತೀಕ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ

ಗಲಭೆಯಾಗುತ್ತದೆ ಎಂದು ಹಲವರು ಹೇಳಿದ್ದಾರೆ: ಅಮಿತ್ ಶಾ

ರಾಮಮಂದಿರ ವಿವಾದದ ಕುರಿತು ಮಾತನಾಡಿದ ಅಮಿತ್ ಶಾ, ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದ ಮೇಲೆ ರಾಮಮಂದಿರ ಉದ್ಘಾಟನೆಯಾಗಿದೆ. ಬಹುಸಂಖ್ಯಾತರ ನಂಬಿಕೆಯನ್ನು ಸಾಕಾರಗೊಳಿಸಲು ಇಷ್ಟು ಸುದೀರ್ಘ ಕಾನೂನು ಹೋರಾಟ ನಡೆಸಿದ ದೇಶವಿಲ್ಲ ಎಂದು ಅಮಿತ್ ಶಾ ಹೇಳಿದರು. “ಭಯ್ಯಾ, ಸ್ವಾಗತ್ ಕರ್ ಲೋ. (ಸಹೋದರ, ಸ್ವಾಗತಿಸಿ) ಎಲ್ಲರೂ ಸಂಭ್ರಮಿಸುವಾಗ ಅದನ್ನು ವಿರೋಧಿಸುವುದರಲ್ಲಿ ಅರ್ಥವೇನು?” ರಾಮಮಂದಿರ ಉದ್ಘಾಟನೆ ವೇಳೆ ಗಲಭೆ ನಡೆಯುತ್ತದೆ ಎಂದು ಹಲವರು ಭಾವಿಸಿದ್ದರು ಆದರೆ ಮೋದಿ ಸರ್ಕಾರ ಯಾವುದೇ ಅಡ್ಡಿಯಾಗದಂತೆ ನೋಡಿಕೊಂಡಿದೆ ಎಂದು ಅಮಿತ್ ಶಾ ಹೇಳಿದರು.

“ಪ್ರಧಾನಿ ಮೋದಿಯವರು ಪ್ರಾಣ-ಪ್ರತಿಷ್ಠಾ ಮಾಡುವ ಅವಕಾಶವನ್ನು ಪಡೆದಾಗ, ಅವರು ಯಾವ ಆಚರಣೆಗಳನ್ನು ಮಾಡಬೇಕು ಎಂಬುದರ ಕುರಿತು ಎಲ್ಲಾ ವೀಕ್ಷಕರನ್ನು ಸಮಾಲೋಚಿಸಿದರು. ಅವರು ನೆಲದ ಮೇಲೆ ಮಲಗಿ, ಎಳ ನೀರನ್ನು ಮಾತ್ರ ಸೇವಿಸುವ ವ್ರತಾಚರಣೆ ಮಾಡಿದ್ದರು ಎಂದಿದ್ದಾರೆ ಅಮಿತ್ ಶಾ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:18 pm, Sat, 10 February 24