ಮುಂದಿನ 25 ವರ್ಷಗಳಲ್ಲಿ ನಮ್ಮ ದೇಶ ವಿಕಸಿತ ಭಾರತ ಆಗಲಿದೆ: ಪ್ರಧಾನಿ ಮೋದಿ

ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,ಮುಂಬರುವ 25 ವರ್ಷಗಳು ದೇಶಕ್ಕೆ ಬಹಳ ನಿರ್ಣಾಯಕವಾಗಿದೆ, ಒಂದು ಕಡೆ, ರಾಜಕೀಯ ಆಕಾಂಕ್ಷೆಗಳಿವೆ, ಮತ್ತೊಂದೆಡೆ ದೇಶಕ್ಕಾಗಿ ಕನಸುಗಳಿವೆ. ಮುಂದಿನ 25 ವರ್ಷಗಳಲ್ಲಿ ಭಾರತವು 'ವಿಕಸಿತ್ ಭಾರತ' ಆಗಲಿದೆ ಎಂದಿದ್ದಾರೆ. ತಮ್ಮ ಸರ್ಕಾರದ ಸಾಧನೆಗಳನ್ನು ವಿವರಿಸಿದ ಮೋದಿ 370 ನೇ ವಿಧಿಯನ್ನು ರದ್ದುಗೊಳಿಸುವುದು ಮತ್ತು ತ್ರಿವಳಿ ತಲಾಖ್ ಮಸೂದೆಯ ಅಂಗೀಕಾರವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.

ಮುಂದಿನ 25 ವರ್ಷಗಳಲ್ಲಿ ನಮ್ಮ ದೇಶ ವಿಕಸಿತ ಭಾರತ ಆಗಲಿದೆ: ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:Feb 10, 2024 | 6:13 PM

ದೆಹಲಿ ಫೆಬ್ರುವರಿ 10: ಸಂಸತ್ ಬಜೆಟ್ ಅಧಿವೇಶಕ್ಕೆ (Parliament Budget Session) ಶನಿವಾರ ತೆರೆಬೀಳಲಿದ್ದು, 17 ನೇ ಲೋಕಸಭೆಯ(Lok sabha) ಅಧಿವೇಶನದ ಕೊನೇ ಕಲಾಪವನ್ನುದ್ದೇಶಿ ಪ್ರಧಾನಿ ನರೇಂದ್ರ ಮೋದಿ(Narendra Modi) ಮಾತನಾಡಿದ್ದಾರೆ. ತಮ್ಮ ಸರ್ಕಾರದ ಸಾಧನೆಗಳನ್ನು ವಿವರಿಸಿದ ಮೋದಿ 370 ನೇ ವಿಧಿಯನ್ನು ರದ್ದುಗೊಳಿಸುವುದು ಮತ್ತು ತ್ರಿವಳಿ ತಲಾಖ್ ಮಸೂದೆಯ ಅಂಗೀಕಾರವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಮಹಿಳಾ ಮೀಸಲಾತಿ ಮಸೂದೆಯೊಂದಿಗೆ ಹೊಸ ಸಂಸತ್ ಕಟ್ಟಡ ತನ್ನ ಪ್ರಯಾಣವನ್ನು ಪ್ರಾರಂಭಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು. “ಮುಂಬರುವ 25 ವರ್ಷಗಳು ದೇಶಕ್ಕೆ ಬಹಳ ನಿರ್ಣಾಯಕವಾಗಿದೆ, ಒಂದು ಕಡೆ, ರಾಜಕೀಯ ಆಕಾಂಕ್ಷೆಗಳಿವೆ, ಮತ್ತೊಂದೆಡೆ ದೇಶಕ್ಕಾಗಿ ಕನಸುಗಳಿವೆ. ಮುಂದಿನ 25 ವರ್ಷಗಳಲ್ಲಿ ಭಾರತವು ‘ವಿಕಸಿತ್ ಭಾರತ’ ಆಗಲಿದೆ ಎಂದಿದ್ದಾರೆ ಪ್ರಧಾನಿ.

ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಏಕಕಾಲದಲ್ಲಿ ‘ಸುಧಾರಣೆ, ಸಾಧನೆ ಮತ್ತು ಪರಿವರ್ತನೆ’ ಕಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 17ನೇ ಲೋಕಸಭೆಯ ಕೊನೆಯ ಅಧಿವೇಶನದಲ್ಲಿ ಎಲ್ಲರಿಗೂ, ವಿಶೇಷವಾಗಿ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ, ಕಳೆದ ಐದು ವರ್ಷಗಳಲ್ಲಿ ಈ ಲೋಕಸಭೆಯು ಕೋವಿಡ್‌ನ ಸವಾಲನ್ನು ಎದುರಿಸಿ ಹೊಸ ರೀತಿಯಲ್ಲಿ ಕೆಲಸ ಮಾಡಿದೆ ಎಂದು ಹೇಳಿದರು. ಸಂಸದರು ತಮ್ಮ ಸಂಬಳವನ್ನು 30% ರಷ್ಟು ಕಡಿಮೆ ಮಾಡಲು ಹಿಂಜರಿಯಲಿಲ್ಲ. ಕ್ಯಾಂಟೀನ್ ಆಹಾರದ ಸಬ್ಸಿಡಿಯನ್ನು ಸಹ ನಿಲ್ಲಿಸಲಾಯಿತು. ಸಂಸತ್ತಿನ ಹೊಸ ಕಟ್ಟಡಕ್ಕೆ ಸಭೆಗಳನ್ನು ಸ್ಥಳಾಂತರಿಸಿದ ಪ್ರಧಾನಿ ಮೋದಿ, ಹೊಸ ಕಟ್ಟಡದಲ್ಲಿ ಸೆಂಗೋಲ್ ಸ್ಥಾಪನೆಯನ್ನು ನೆನಪಿಸಿಕೊಂಡರು.

ಚುನಾವಣೆ ದೂರವಿಲ್ಲ. ಕೆಲವರು ಸ್ವಲ್ಪ ಉದ್ವಿಗ್ನರಾಗಿರಬಹುದ. ಆದರೆ ಇದು ಪ್ರಜಾಪ್ರಭುತ್ವದ ಒಂದು ಅಂಶವಾಗಿದೆ ಮತ್ತು ನಾವು ಅದನ್ನು ಒಪ್ಪಿಕೊಳ್ಳುತ್ತೇವೆ. ಈ ಚುನಾವಣೆ ನಮ್ಮ ಪ್ರಜಾಪ್ರಭುತ್ವದ ಹೆಮ್ಮೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಬ್ರಿಟಿಷರು ನೀಡಿದ ದಂಡ ಸಂಹಿತೆಯೊಂದಿಗೆ ನಾವು 75 ವರ್ಷಗಳ ಕಾಲ ಬದುಕಿದ್ದೇವೆ, ಹೊಸ ಪೀಳಿಗೆಗೆ, ದೇಶವು 75 ವರ್ಷಗಳ ಕಾಲ ದಂಡ ಸಂಹಿತೆಯ ಅಡಿಯಲ್ಲಿ ಬದುಕಿರಬಹುದು ಆದರೆ ಮುಂದಿನ ಪೀಳಿಗೆಯು ನ್ಯಾಯ ಸಂಹಿತೆಯೊಂದಿಗೆ ಬದುಕುತ್ತದೆ ಎಂದು ನಾವು ಹೆಮ್ಮೆಯಿಂದ ಹೇಳಬಹುದು. ಇದು ನಿಜವಾದ ಪ್ರಜಾಪ್ರಭುತ್ವ ಎಂದಿದ್ದಾರೆ ಮೋದಿ.

ಜಮ್ಮು ಮತ್ತು ಕಾಶ್ಮೀರದ ಜನರು ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದರು, ಇಂದು ನಾವು ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಬದ್ಧತೆಗೆ ಅನುಗುಣವಾಗಿ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಸಾಮಾಜಿಕ ನ್ಯಾಯವನ್ನು ತಂದಿದ್ದೇವೆ ಎಂದು ನಾವು ತೃಪ್ತಿ ಹೊಂದಿದ್ದೇವೆ.  ಭಯೋತ್ಪಾದನೆಯು ಕಂಟಕ ಅದು ದೇಶದ ಎದೆಗೆ ಗುಂಡು ಹಾರಿಸುತ್ತದೆ..ಭಯೋತ್ಪಾದನೆ ವಿರುದ್ಧ ಕಠಿಣ ಕಾನೂನು ರೂಪಿಸಿದ್ದೇವೆ.ಇಂತಹ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಈ ರೀತಿಯ ಶಕ್ತಿಯನ್ನು ಪಡೆಯುತ್ತಾರೆ ಎಂಬ ದೃಢ ನಂಬಿಕೆ ನನಗಿದೆ.

ಇದನ್ನೂ ಓದಿ: ಎನ್​ಡಿಎ ಮೈತ್ರಿಕೂಟಕ್ಕೆ ಮತ್ತೊಮ್ಮೆ ಆಶೀರ್ವಾದ ಸಿಗುವ ವಿಶ್ವಾಸವಿದೆ: ಲೋಕಸಭೆಯಲ್ಲಿ ಮೋದಿ ಭಾಷಣ

“ಭಾರತಕ್ಕೆ ಜಿ 20 ಅಧ್ಯಕ್ಷ ಸ್ಥಾನದ ಅವಕಾಶ ಸಿಕ್ಕಿತು. ಭಾರತಕ್ಕೆ ದೊಡ್ಡ ಗೌರವ ಸಿಕ್ಕಿತು. ದೇಶದ ಪ್ರತಿಯೊಂದು ರಾಜ್ಯವೂ ಭಾರತದ ಸಾಮರ್ಥ್ಯ ಮತ್ತು ತನ್ನದೇ ಆದ ಗುರುತನ್ನು ಪ್ರಪಂಚದ ಮುಂದೆ ಪ್ರದರ್ಶಿಸಿದೆ. ಅದರ ಪ್ರಭಾವ ಇಂದಿಗೂ ಪ್ರಪಂಚದ ಮನಸ್ಸಿನ ಮೇಲೆ ಮುಂದುವರೆದಿದೆ ಎಂದಿದ್ದಾರೆ ಮೋದಿ.

ಸಂಸತ್ತಿನ ಹೊಸ ಕಟ್ಟಡ ಆಗಬೇಕು ಎಂದು ಎಲ್ಲರೂ ಚರ್ಚಿಸುತ್ತಿದ್ದರು. ಆದರೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. ನಿಮ್ಮ (ಲೋಕಸಭಾ ಸ್ಪೀಕರ್) ನಾಯಕತ್ವವೇ ಇದನ್ನು ನಿರ್ಧರಿಸಿದ್ದು, ಮುಂದೆಯೂ ಮುಖ್ಯವಾಗಿದೆ. ಸರ್ಕಾರದೊಂದಿಗೆ ಸಭೆಗಳನ್ನು ನಡೆಸಿದ ಪರಿಣಾಮವಾಗಿ ದೇಶವು ಈ ಹೊಸ ಸಂಸತ್ತಿನ ಕಟ್ಟಡವನ್ನು ಸ್ವೀಕರಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:05 pm, Sat, 10 February 24

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ