ನವದೆಹಲಿ: ಮೆಸೆಂಜರ್ ಆರ್ಎನ್ಎ (mRNA) ಕೊವಿಡ್-19 ಲಸಿಕೆಯಿಂದ ಹಠಾತ್ ಹೃದಯಾಘಾತದ ಸಾವುಗಳು ಸೇರಿದಂತೆ ಜನರಲ್ಲಿ ಗಂಭೀರ ಸಮಸ್ಯೆಗಳು ಉಂಟಾಗಬಹುದು ಎಂದು ಲೂಸಿಯಾನಾದ ಕ್ಲಿನಿಕಲ್ ವಿಜ್ಞಾನಿ ಜೋಸೆಫ್ ಫ್ರೈಮನ್ ಹೇಳಿದ್ದಾರೆ. ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ mRNA COVID-19 ಲಸಿಕೆಗಾಗಿ ಫಿಜರ್ ಮತ್ತು ಮಾಡರ್ನಾ ಪ್ರಯೋಗಗಳನ್ನು ಮರು-ವಿಶ್ಲೇಷಣೆ ಮಾಡಿದ್ದಾರೆ.
ಮತ್ತೊಂದು ಅಧ್ಯಯನವನ್ನು ಉಲ್ಲೇಖಿಸಿರುವ ಅವರು, ಕೊವಿಡ್ ಲಸಿಕೆಗಳು ಹಠಾತ್ ಹೃದಯ ಸಂಬಂಧಿ ಸಾವನ್ನು ಉಂಟುಮಾಡಬಹುದು. ಇದಕ್ಕೆ ಪೂರಕವಾಗಿ ಶವಪರೀಕ್ಷೆಯ ಅಧ್ಯಯನಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಅಧಿಕ mRNAಗಳ ಲಸಿಕೆಯನ್ನು ತೆಗೆದುಕೊಳ್ಳುವ ರಾಷ್ಟ್ರಗಳು ಹೆಚ್ಚಿನ ಮರಣದ ಹೆಚ್ಚಿನ ದರಗಳ ಪರಸ್ಪರ ಸಂಬಂಧವನ್ನು ಹೊಂದಿವೆ. ಈ ಮರಣದ ಕಾರಣ ತಿಳಿದಿಲ್ಲವಾದರೂ, ಈ ಡೇಟಾವನ್ನು ವಿಶ್ಲೇಷಿಸುವ ಸಂಶೋಧಕರು ಲಸಿಕೆಗಳನ್ನು ಹೊರತುಪಡಿಸಿ ಹೆಚ್ಚುವರಿ ಸಾವಿನ ಯಾವುದೇ ಕಾರಣವನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Covid-19 4th Wave: ಚೀನಾದ ಹೊಸ ಕೊವಿಡ್ ರೂಪಾಂತರಿ ಮನುಷ್ಯನ ಮೆದುಳಿನ ಮೇಲೆ ದಾಳಿ ಮಾಡುತ್ತದಾ?; ತಜ್ಞರು ಹೇಳೋದಿಷ್ಟು
ಮತ್ತೊಂದು ಟ್ವೀಟ್‌ನಲ್ಲಿ ಅವರು, ಅಮೆರಿಕಾದ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ) ಪ್ರಕಟಿಸಿದ ಅಧ್ಯಯನದ ದತ್ತಾಂಶವು ಫಿಜರ್ ಕೋವಿಡ್ ಲಸಿಕೆ ಶ್ವಾಸಕೋಶದ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಶೇ. 50ರಷ್ಟು ಹೆಚ್ಚಿಸುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಭಾರತದಲ್ಲಿ ಬೂಸ್ಟರ್ ಡೋಸ್:
ಒಮಿಕ್ರಾನ್ ವೈರಸ್ನ ರೂಪಾಂತರಿಯಾದ ಬಿಎಎಫ್ 7 ಭಾರತದಲ್ಲಿ ಪತ್ತೆಯಾದ ಬಳಿಕ ಹಲವು ಎಚ್ಚರಿಕೆ ನಿಯಮಗಳನ್ನು ಘೋಷಿಸಲಾಗಿದೆ. ಮಾಸ್ಕ್, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ಸೂಚಿಸಿದೆ. ಈ ಮಧ್ಯೆ ಬೂಸ್ಟರ್ ಡೋಸ್ ಆಗಿ ಸೀರಂ ಸಂಸ್ಥೆ ತಯಾರಿಸಿದ ಕೊವೊವ್ಯಾಕ್ಸ್ ಲಸಿಕೆಗೆ ಅನುಮೋದನೆ ಕೋರಿದೆ. ಭಾರತದಲ್ಲಿ ಕೊರೊನಾ ಇಳಿಕೆ ಪ್ರಕರಣ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 170 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಕೊವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 4,46,80,094ಕ್ಕೆ ಏರಿಕೆಯಾಗಿದೆ. ಅಲ್ಲದೆ, ಕೋವಿಡ್ ನಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 5,30,721ಕ್ಕೆ ಏರಿಕೆಯಾಗಿದೆ.
ಭಾರತದಲ್ಲಿ ಇಂದು ಕೊವಿಡ್ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,371ಕ್ಕೆ ಇಳಿಕೆಯಾಗಿದೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ 221 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 44147002ಕ್ಕೆ ತಲುಪಿದೆ. ಭಾರತದಲ್ಲಿ ಒಂದೇ 85,282 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಇದುವರೆಗೂ 91,21,92,538 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.