Rahul Gandhi: ನಾನು ರಾಹುಲ್ ಗಾಂಧಿಯನ್ನು ಕೊಂದಿದ್ದೇನೆ: ಹೀಗೆ ಖುದ್ದು ರಾಹುಲ್ ಗಾಂಧಿ ಹೇಳಿದ್ದೇಕೆ?
ನಾನು ರಾಹುಲ್ ಗಾಂಧಿಯನ್ನು ಕೊಂದಿದ್ದೇನೆ ಎಂದು ರಾಹುಲ್ ಗಾಂಧಿ ಮಾಧ್ಯಮದ ಬಳಿ ಒಗಟಾಗಿ ಮಾತನಾಡಿದ್ದಾರೆ. ಒಮ್ಮೆ ಎಲ್ಲರಿಗೂ ಆಶ್ಚರ್ಯವೆನಿಸಿದ್ದಂತೂ ಸತ್ಯ.
ನಾನು ರಾಹುಲ್ ಗಾಂಧಿಯನ್ನು ಕೊಂದಿದ್ದೇನೆ ಎಂದು ರಾಹುಲ್ ಗಾಂಧಿ ಮಾಧ್ಯಮದ ಬಳಿ ಒಗಟಾಗಿ ಮಾತನಾಡಿದ್ದಾರೆ. ಒಮ್ಮೆ ಎಲ್ಲರಿಗೂ ಆಶ್ಚರ್ಯವೆನಿಸಿದ್ದಂತೂ ಸತ್ಯ. ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯ 118ನೇ ದಿನದ ಅಂಗವಾಗಿ ಹರ್ಯಾಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ‘ನಿಮ್ಮ ಮನಸ್ಸಿನಲ್ಲಿರುವ ರಾಹುಲ್ ಗಾಂಧಿಯನ್ನು ನಾನೇ ಕೊಂದಿದ್ದೇನೆ’ ಎಂದು ಹೇಳಿದ್ದಾರೆ.
ನಿಮಗೆ ನಾನು ರಾಹುಲ್ ಗಾಂಧಿ, ಆದರೆ ನನಗೆ ನಾನು ರಾಹುಲ್ ಗಾಂಧಿ ಅಲ್ಲ. ನನ್ನೊಳಗಿನ ರಾಹುಲ್ ಗಾಂಧಿಯನ್ನು ನಾನು ಕೊಂದಿದ್ದೇನೆ. ನನ್ನ ಮನಸ್ಸಿನಲ್ಲೂ ರಾಹುಲ್ ಗಾಂಧಿ ಇಲ್ಲ. ನಿಮ್ಮ ತಲೆಯಲ್ಲಿ ರಾಹುಲ್ ಗಾಂಧಿ ಆದರೆ ನನ್ನ ತಲೆಯಲ್ಲಿಲ್ಲ. ಅವರು ಹೋಗಿದ್ದಾರೆ ಎಂದು ಒಗಟಾಗಿ ಮಾತನಾಡಿದ್ದಾರೆ.
ಈ ಪಯಣದಲ್ಲಿ ಚಳಿಯ ನಡುವೆಯೂ ಟೀ ಶರ್ಟ್ ಧರಿಸಿರುವ ಬಗ್ಗೆ ರಾಹುಲ್, ನನ್ನ ಬಗ್ಗೆ ಯಾರು ಏನು ಯೋಚಿಸುತ್ತಾರೆ ಎಂಬುದು ಮುಖ್ಯವಲ್ಲ ಎಂದಿದ್ದಾರೆ. ನಾನು ತಪಸ್ವಿಯಾಗಿದ್ದೆ ಮತ್ತು ಈಗಲೂ ಇದ್ದೇನೆ. ಅದು ಧನಾತ್ಮಕವಾಗಿರಲಿ ಅಥವಾ ನಕಾರಾತ್ಮಕವಾಗಿರಲಿ, ಅದು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ನಾನು ನನ್ನ ಕೆಲಸವನ್ನು ಮಾಡುತ್ತಿದ್ದೇನೆ.
ಮತ್ತಷ್ಟು ಓದಿ: ಕೋವಿಡ್ ನಿಯಮ ಪಾಲಿಸಿ ಇಲ್ಲವೇ ಭಾರತ್ ಜೋಡೋ ಯಾತ್ರೆ ನಿಲ್ಲಿಸಿ: ರಾಹುಲ್ ಗಾಂಧಿಗೆ ಕೇಂದ್ರ ಆರೋಗ್ಯ ಸಚಿವರ ಪತ್ರ
ಕಾಂಗ್ರೆಸ್ ಪಕ್ಷದ ಚಿನ್ಹೆಯಾಗಿರುವ ಹಸ್ತದ ಚಿಹ್ನೆ ಅಭಯ ಮುದ್ರೆಯಾಗಿದೆ ಎಂದರು. ಈ ಭಂಗಿಯಲ್ಲಿ ಗೌತಮ ಬುದ್ಧ, ಭಗವಾನ್ ಮಹಾವೀರ ಮತ್ತು ಗುರುನಾನಕ್ ಕೂಡ ಕಾಣಸಿಗುತ್ತಾರೆ. ರಾಹುಲ್ ಗಾಂಧಿ ನಿಮ್ಮ ಮನಸ್ಸಿನಲ್ಲಿದ್ದಾರೆ. ನಾನು ಅವರನ್ನು ಕೊಂದಿದ್ದೇನೆ. ಅವರು ಎಲ್ಲಿಯೂ, ನನ್ನ ಮನಸ್ಸಿನಲ್ಲಿಯೂ ಇಲ್ಲ. ಅವರು ನನ್ನ ತಲೆ, ಮನಸ್ಸನಿಂದ ಹೊರಟು ಹೋಗಿದ್ದಾರೆ ಎಂದು ಹೇಳಿದ್ದಾರೆ.
ಈ ಭಾರತ್ ಜೋಡೋ ಯಾತ್ರೆ ರಾಹುಲ್ ಗಾಂಧಿ ಅವರ ಇಮೇಜ್ ಅನ್ನು ಹೇಗೆ ಬದಲಾಯಿಸಿತು ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ನೀವು ನೋಡುತ್ತಿರುವ ವ್ಯಕ್ತಿ ರಾಹುಲ್ ಗಾಂಧಿ ಅಲ್ಲ. ನೀವು ಅವರನ್ನು ನೋಡಬಹುದು. ನೀವು ಹಿಂದೂ ಧರ್ಮಗ್ರಂಥಗಳನ್ನು ಓದಿ, ಭಗವಾನ್ ಶಿವನ ಬಗ್ಗೆ ಓದಿ, ನಿಮಗೆ ಅರ್ಥವಾಗುತ್ತದೆ. ಶಾಕ್ ಆಗಬೇಡಿ. ರಾಹುಲ್ ಗಾಂಧಿ ನಿಮ್ಮ ತಲೆಯಲ್ಲಿದ್ದಾರೆ, ನನ್ನ ತಲೆಯಲ್ಲಲ್ಲ, ಅವರು ಬಿಜೆಪಿಗರ ತಲೆಯಲ್ಲಿದ್ದಾರೆ ಎಂದಿದ್ದಾರೆ.
ನೀವು ಅರ್ಥಮಾಡಿಕೊಂಡರೆ ನಿಮಗೆ ಒಳ್ಳೆಯದು ಕಾಣುತ್ತದೆ. ಅರ್ಥಮಾಡಿಕೊಳ್ಳದೇ ಹೋದರೆ ಕೆಟ್ಟದು. ಇದು ಈ ರಾಷ್ಟ್ರದ ತತ್ವಶಾಸ್ತ್ರ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ರಾಹುಲ್ ಗಾಂಧಿಯ ಈ ಮಾತುಗಳು ಹಲವರಲ್ಲಿ ಗೊಂದಲ ಸೃಷ್ಟಿಸಿದ್ದರೆ, ಮತ್ತೆ ಕೆಲವರು ಚಪ್ಪಾಳೆ ತಟ್ಟಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ