AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬಾನಿ ಕುಟುಂಬದ ಕುಡಿ ಹೆಸರು ಬಹಿರಂಗ; ಈ ಹೆಸರಿಡಲು ಇದೆ ಒಂದು ವಿಶೇಷ ಕಾರಣ!

ಏಷ್ಯಾದ ಶ್ರೀಮಂತ ವ್ಯಕ್ತಿಯಾದ ಮುಕೇಶ್​ ಅಂಬಾನಿ ತಮ್ಮ ಮೊಮ್ಮಗುವನ್ನು ಎತ್ತಿಕೊಂಡಿರುವ ಫೋಟೋ ಕೂಡ ಈಗಾಗಲೇ ವೈರಲ್ ಆಗಿದೆ. ಇದೀಗ ಪುಟ್ಟ ಪಾಪುವಿನ ಹೆಸರನ್ನೂ ಅಂಬಾನಿ ಕುಟುಂಬ ಒಂದು ವಿಶೇಷ ಕಾರ್ಡ್ ಮೂಲಕ ಬಹಿರಂಗ ಪಡಿಸಿದೆ.

ಮುಕೇಶ್ ಅಂಬಾನಿ ಮೊಮ್ಮಗುವಿನೊಂದಿಗೆ (ಎಡ) ಆಕಾಶ್​ ಅಂಬಾನಿ ದಂಪತಿ (ಬಲ)
Lakshmi Hegde
| Edited By: |

Updated on: Dec 24, 2020 | 4:48 PM

Share

ಮುಂಬೈ: ರಿಲಯನ್ಸ್​ ಇಂಡಸ್ಟ್ರೀಸ್​ ಅಧ್ಯಕ್ಷ ಮುಕೇಶ್​ ಅಂಬಾನಿ ಇತ್ತೀಚೆಗಷ್ಟೇ ಅಜ್ಜನಾಗಿದ್ದಾರೆ. ಮುಕೇಶ್ ಅಂಬಾನಿ ಹಿರಿಯ ಪುತ್ರ ಆಕಾಶ್​ ಅಂಬಾನಿ ದಂಪತಿಗೆ ಡಿ. 10ರಂದು ಗಂಡು ಮಗು ಜನಿಸಿದ್ದು, ಅಂಬಾನಿ ಮತ್ತು ಮೆಹ್ತಾ (ಶ್ಲೋಕಾ ತವರು ಮನೆ) ಕುಟುಂಬದಲ್ಲಿ ಸಂತೋಷ ಮನೆ ಮಾಡಿದೆ.

ಏಷ್ಯಾದ ಶ್ರೀಮಂತ ವ್ಯಕ್ತಿಯಾದ ಮುಕೇಶ್​ ಅಂಬಾನಿ ತಮ್ಮ ಮೊಮ್ಮಗುವನ್ನು ಎತ್ತಿಕೊಂಡಿರುವ ಫೋಟೋ ಕೂಡ ಈಗಾಗಲೇ ವೈರಲ್ ಆಗಿದೆ. ಇದೀಗ ಪುಟ್ಟ ಪಾಪುವಿನ ಹೆಸರನ್ನೂ ಅಂಬಾನಿ ಕುಟುಂಬ ಒಂದು ವಿಶೇಷ ಕಾರ್ಡ್ ಮೂಲಕ ಬಹಿರಂಗ ಪಡಿಸಿದೆ.

ಶ್ರೀಮಂತ ಕುಟುಂಬದ ಕುಡಿಯ ಹೆಸರು ಪ್ರಥ್ವಿ ಆಕಾಶ್​ ಅಂಬಾನಿ. ಅಷ್ಟಕ್ಕೂ ಪ್ರಥ್ವಿ ಎಂಬ ಹೆಸರೇ ಯಾಕೆ? ನಮ್ಮ ಕುಟುಂಬದಲ್ಲಿ ಆಕಾಶ ಇದ್ದಾನೆ.. ಹಾಗೇ, ಪ್ರಥ್ವಿಯೂ (ಭೂಮಿ) ಇರಲಿ ಎಂಬ ಕಾರಣಕ್ಕೆ ಈ ಹೆಸರು ಇಟ್ಟಿದ್ದೇವೆ ಎಂದು ಅಂಬಾನಿ ಕುಟುಂಬ ತಿಳಿಸಿದೆ.

ಇನ್ನು ಅಂಬಾನಿ ಕುಟುಂಬದ ಕುಡಿಯ ಹೆಸರಿನ ವಿಶೇಷ ಕಾರ್ಡ್​ನಲ್ಲಿ ಅಂಬಾನಿ ಹಾಗೂ ಮೆಹ್ತಾ ಕುಟುಂಬಸ್ಥರ ಹೆಸರನ್ನೂ ಹಾಕಿದ್ದೂ ವಿಶೇಷ. ಆಕಾಶ್​ ಹಾಗೂ ಇಶಾ ವಿವಾಹ 2019ರ ಮಾರ್ಚ್​ 9ರಂದು ಅದ್ದೂರಿಯಾಗಿ ನೆರವೇರಿತ್ತು.

ದೀಪಾವಳಿ ಸಿಹಿ ಆರೋಗ್ಯಕ್ಕೆ ಹಾನಿಕರ, ಕ್ರಿಸ್ಮಸ್​ ಕೇಕ್ ಮಾತ್ರ ಒಳ್ಳೇದು! -ಮಾಧ್ಯಮದ ದ್ವಂದ್ವ ನೀತಿಗೆ ಕಾರ್ಣಿಕ್ ಕಿಡಿ

ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?

ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ

ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?

ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್

ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?

ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ

ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ

ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ

ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ

ನಾನು ತಂದೆ ಆಗ್ತಿರೋದು ಇನ್​​​ಸ್ಟಾಗ್ರಾಮ್​​​ಗೂ ಗೊತ್ತಾಗಿದೆ: ಧನಂಜಯ್