ಮುಂಬೈ, ಜುಲೈ 13: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ನವವಿವಾಹಿತರಾದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ (Anant Ambani- Radhika Merchant Wedding) ಅವರ ಶುಭ ಆಶೀರ್ವಾದ ಸಮಾರಂಭದಲ್ಲಿ ಭಾಗವಹಿಸಿ ನವವಿವಾಹಿತರಿಗೆ ಆಶೀರ್ವದಿಸಿದ್ದಾರೆ. ಶುಕ್ರವಾರದಂದು ಸಿರಿವಂತಿಕೆಯ ಸೊಬಗಿನಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅದ್ಧೂರಿ ಕಲ್ಯಾಣವಾಗಿದೆ. ಮುಂಬೈನ ಜಿಯೋ ವರ್ಲ್ಡ್ ಕನ್ವೆಷನ್ ಸೆಂಟರ್ ಈ ವರ್ಷದ ಅತಿ ಐಷಾರಾಮಿ ಮದುವೆಗೆ ಸಾಕ್ಷಿಯಾಗಿತ್ತು.
ಉದ್ಯಮಿ ಮುಖೇಶ್ ಅಂಬಾನಿ ಕೊನೆಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಅದ್ಧೂರಿಯಾಗಿ ನೆರವೇರುತ್ತಿದೆ. ಮದುವೆ ಸಮಾರಂಭದಲ್ಲಿ ದೇಶ-ವಿದೇಶದ ಗಣ್ಯರು, ಬಾಲಿವುಡ್ ನಟ-ನಟಿಯರು, ರಾಜಕೀಯ ನಾಯಕರು ಕ್ರೀಡಾಪಟುಗಳು ಭಾಗವಹಿಸಿದ್ದರು.
ಇದನ್ನೂ ಓದಿ: Anant Ambani- Radhika Merchant Wedding: ಅದ್ದೂರಿಯಾಗಿ ಬಾಲ್ಯದ ಗೆಳತಿ ರಾಧಿಕಾ ಮರ್ಚೆಂಟ್ ಜೊತೆ ಮದುವೆಯಾದ ಅನಂತ್ ಅಂಬಾನಿ
ಕುಬೇರನ ಪುತ್ರನ ಮದುವೆಯಲ್ಲಿ ಬಾಲಿವುಡ್ ಬಳಗವೇ ಬಿಂದಾಸ್ ಆಗಿ ಎಂಜಾಯ್ ಮಾಡಿದೆ. ಅಜಯ್ ದೇವಗನ್ ಮತ್ತು ಪುತ್ರ, ಅನುಪಮ್ ಖೇರ್, ವಿಕ್ಕಿ ಕುಶಾಲ್, ಕತ್ರಿನಾ ಕೈಫ್, ಟಾಲಿವುಡ್ ಸ್ಟಾರ್ ಮಹೇಶ್ ಬಾಬು ದಂಪತಿ, ರಣಬೀರ್ ಕಪೂರ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಶಾರುಖ್ ಖಾನ್ ದಂಪತಿ, ಸುನೀಲ್ ಶೆಟ್ಟಿ, ಸಲ್ಮಾನ್ ಖಾನ್ ಸೇರಿ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.
Honourable PM Modi sir in grand Ambani wedding #AmbaniFamilyWedding #AmbaniWedding pic.twitter.com/OrdE4NSLRl
— Dr Gautam Bhansali (@bhansaligautam1) July 13, 2024
ಇನ್ನು ರಾಕಿಂಗ್ ಸ್ಟಾರ್ ಯಶ್ ಕೂಡ ಅಂಬಾನಿ ಮಗನ ಮದುವೆಯಲ್ಲಿ ಭಾಗಿಯಾದ್ದರು. ಯಶ್ ಅವರ ನ್ಯೂ ಹೇರ್ಸ್ಟೈಲ್ ಎಲ್ಲರ ಗಮನ ಸೆಳೆದಿತ್ತು. ಇಷ್ಟೇ ಅಲ್ಲ ರಜನಿಕಾಂತ್ ಫ್ಯಾಮಿಲಿ ಕೂಡ ಮದುವೆಯಲ್ಲಿ ಭಾಗಿಯಾಗಿತ್ತು. ಫೋಟೋ ಶೂಟ್ ಬಳಿಕ ರಜನಿಕಾಂತ್ ಅನಂತ್ ಅಂಬಾನಿ, ಬಾಲಿವುಡ್ ನಟರ ಜತೆ ಭರ್ಜರಿ ಸ್ಟೆಪ್ ಹಾಕಿದ್ದಾರೆ.
ಇದನ್ನೂ ಓದಿ: Viral Video: ಗ್ರಹ ಶಾಂತಿ ವೇಳೆ ತಬ್ಬಿಕೊಂಡ ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್; ಭಾವುಕರಾದ ಮುಖೇಶ್ ಅಂಬಾನಿ
ಅಂಬಾನಿ ಪುತ್ರನ ಕಲ್ಯಾಣ ಕಳೆದ 7 ತಿಂಗಳಿಂದಲೂ ನಡೀತಿದೆ. ಕಳೆದ ಡಿಸೆಂಬರ್ 29ರಂದು ಅನಂತ್ ರಾಧಿಕಾ ಜೋಡಿಗೆ ನಿಶ್ಚಿತಾರ್ಥವಾಗಿತ್ತು. ಇದೇ ವರ್ಷ ಜನವರಿ 18 ಮತ್ತು 19ರಂದು ಮೆಹಂದಿ ಕಾರ್ಯಕ್ರಮ ನಡೀತು. ಮಾರ್ಚ್ 1ರಂದು ವಿವಾಹ ಪೂರ್ವ ಪಾರ್ಟಿ, ಮೇ 28ರಂದ ಜೂನ್ 1ರವರೆಗೆ ವಿವಾಹ ಪೂರ್ವ ಕ್ರೂಸ್ ಪಾರ್ಟಿ, ಜುಲೈ 2ರಂದು ಸಾಮೂಹಿಕ ವಿವಾಹ ನಡೆಸಲಾಗಿತ್ತು. ಇದರಲ್ಲಿ 50 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಜುಲೈ 8ರಂದು ಹಳದಿ ಸಮಾರಂಭ ನಡೆದಿತ್ತು. ಜುಲೈ 10ರಂದು ಶಿವಪೂಜೆ ಕಾರ್ಯಕ್ರಮ ನಡೆದಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:51 pm, Sat, 13 July 24