Video: ಪಾರ್ಟಿ ಮುಗಿಸಿ ಕುಡಿದ ಮತ್ತಿನಲ್ಲಿ ಸ್ನೇಹಿತನಿಂದ ಬಿಎಂಡಬ್ಲ್ಯೂ ಕಾರು ಚಾಲನೆ, ಬಿಎಂಸಿ ಟ್ರಕ್​ಗೆ ಡಿಕ್ಕಿ, ಗಗನಸಖಿ ಸಾವು

ವೈಯಕ್ತಿಕ ಕೆಲಸಕ್ಕಾಗಿ ದೆಹಲಿಯಿಂದ ಮುಂಬೈಗೆ ಬಂದಿದ್ದ ಗಗನಸಖಿ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

Video: ಪಾರ್ಟಿ ಮುಗಿಸಿ ಕುಡಿದ ಮತ್ತಿನಲ್ಲಿ ಸ್ನೇಹಿತನಿಂದ ಬಿಎಂಡಬ್ಲ್ಯೂ ಕಾರು ಚಾಲನೆ, ಬಿಎಂಸಿ ಟ್ರಕ್​ಗೆ ಡಿಕ್ಕಿ, ಗಗನಸಖಿ ಸಾವು
ಪಲ್ಲವಿ
Follow us
ನಯನಾ ರಾಜೀವ್
|

Updated on: May 15, 2023 | 10:32 AM

ವೈಯಕ್ತಿಕ ಕೆಲಸಕ್ಕಾಗಿ ದೆಹಲಿಯಿಂದ ಮುಂಬೈಗೆ ಬಂದಿದ್ದ ಗಗನಸಖಿ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಆಕೆಯ ಸ್ನೇಹಿತ ಕುಡಿದ ಅಮಲಿನಲ್ಲಿ ಬಿಎಂಡಬ್ಲ್ಯೂ ಕಾರು ಚಲಾಯಿಸುತ್ತಿದ್ದ ಎನ್ನಲಾಗಿದೆ, ನಿಯಂತ್ರಣ ತಪ್ಪಿ ಬಿಎಂಸಿ ಟ್ರಕ್​ಗೆ ಡಿಕ್ಕಿ ಹೊಡೆದಿದ್ದಾರೆ ಪಾರ್ಟಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಜುಹು ಪ್ರದೇಶದಲ್ಲಿ ಘಟನೆ ನಡೆದಿದೆ.

ಜುಹು ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮೃತರನ್ನು ಪಲ್ಲವಿ ಭಟ್ಟಾಚಾರ್ಯ ಎಂದು ಗುರುತಿಸಲಾಗಿದೆ, ಅವರು ದೆಹಲಿ ನಿವಾಸಿಯಾಗಿದ್ದು, ಮೂಲತಃ ಪಶ್ಚಿಮ ಬಂಗಾಳದ ಕೋಲ್ಕತ್ತಾದವರು. ಅವರು ಗಗನಸಖಿಯಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗಷ್ಟೇ ಕೆಲಸ ಬದಲಾಯಿಸಿ ಬೇರೊಂದು ವಿಮಾನ ಕಂಪನಿಗೆ ಸೇರ್ಪಡೆಯಾಗಿದ್ದರು. ಲೇಸರ್ ಸರ್ಜರಿಗಾಗಿ ಮುಂಬೈಗೆ ಬಂದಿದ್ದರು ಎನ್ನಲಾಗಿದೆ. ಯುವಕ 120 ಕಿ.ಮೀ ವೇಗದಲ್ಲಿ ಕಾರು ಚಲಾಯಿಸುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

ಅರ್ಧವ್ಯು ಎಂಬುವವರು ಪಲ್ಲವಿಯ ಸ್ನೇಹಿತನಾಗಿದ್ದ,  ಭಾರತಿ ದಿಲ್​ಪ್ರಸಾದ್ ರೈ ಹಾಗೂ ಅಂಕಿತ್ ನರೇಂದ್ರ ಖರೆ ಎಂಬುವವರ ಜತೆ ರೆಸ್ಟೊ ಬಾರ್​ಗೆ ತೆರಳಿದ್ದರು.

ಮತ್ತಷ್ಟು ಓದಿ: Chhattisgarh Accident: ಛತ್ತೀಸ್​ಗಢದಲ್ಲಿ ಟ್ರಕ್​ ಹಾಗೂ ಪಿಕಪ್ ವ್ಯಾನ್ ನಡುವೆ ಅಪಘಾತ, 6 ಮಂದಿ ಸಾವು, 25 ಜನರಿಗೆ ಗಾಯ

ಬೆಳಗಿನ ಜಾವ ಸುಮಾರು 2.30ರ ಸಮಯದಲ್ಲಿ ಬಾಂದೇಕರ್ ಅವರ ತಾಯಿಯ ಬಿಎಂಡಬ್ಲ್ಯೂ ಕಾರಿನಲ್ಲಿ ಹಿಂದಿರುಗುತ್ತಿದ್ದರು, ಕುಡಿದು ಚಾಲನೆ ಮಾಡುತ್ತಿದ್ದರು. ಕಾರು ಬಿಎಂಸಿ ಕಸದ ಲಾರಿಗೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಕಾರಿನಲ್ಲಿದ್ದ ಎಲ್ಲರೂ ತೀವ್ರವಾಗಿ ಗಾಯಗೊಂಡಿದ್ದಾರೆ, ಪಲ್ಲವಿ ಭಟ್ಟಾಚಾರ್ಯ ಮೃತಪಟ್ಟಿದ್ದು, ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ