
ಮುಂಬೈ, ಫೆ.3: ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳೆರಡು ಡಿಕ್ಕಿ ಹೊಡೆದುಕೊಂಡಿದೆ. ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ (AI 2732) ಮತ್ತು ಇಂಡಿಗೋ (6E 791) ವಿಮಾನಗಳ ನಡುವೆ ಡಿಕ್ಕಿ ಹೊಡೆದುಕೊಂಡಿದೆ. ಕೊಯಮತ್ತೂರಿಗೆ ಹೊರಡಲು ಸಿದ್ಧವಾಗಿದ್ದ ಏರ್ ಇಂಡಿಯಾ ವಿಮಾನ ಟ್ಯಾಕ್ಸಿ ಮಾಡುತ್ತಿದ್ದಾಗ, ಹೈದರಾಬಾದ್‌ನಿಂದ ಬಂದಿಳಿದ ಇಂಡಿಗೋ ವಿಮಾನ ಅದೇ ಹಾದಿಯಲ್ಲಿ ಬರುತ್ತಿತ್ತು. ಈ ಚಲನೆಯ ಸಮಯದಲ್ಲಿ, ಎರಡೂ ವಿಮಾನಗಳ ಬಲಪಕ್ಕದ ರೆಕ್ಕೆಗಳ ತುದಿಗಳು (Wing tips) ಪರಸ್ಪರ ಸ್ಪರ್ಶಿಸಿವೆ. ಘಟನೆಯ ಸಮಯದಲ್ಲಿ ಎರಡೂ ವಿಮಾನಗಳಲ್ಲಿ ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ.
ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಹಾಗೂ ಸಿಬ್ಬಂದಿಗೆ ಗಾಯಗಳಾಗಿಲ್ಲ. ತಾಂತ್ರಿಕ ತಪಾಸಣೆಗಾಗಿ ಎರಡೂ ವಿಮಾನಗಳನ್ನು ಸದ್ಯಕ್ಕೆ ಹಾರಾಟವನ್ನು ರದ್ದು ಮಾಡಲಾಗಿದೆ. ಏರ್ ಇಂಡಿಯಾ ತನ್ನ ಪ್ರಯಾಣಿಕರನ್ನು ಅವರ ತಲುಪಬೇಕಾದ ಸ್ಥಳಕ್ಕೆ ಕಳುಹಿಸಲು ಪರ್ಯಾಯ ವ್ಯವಸ್ಥೆ ಮಾಡಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (DGCA) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ಎರಡೂ ವಿಮಾನಯಾನ ಸಂಸ್ಥೆಗಳು ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಅಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿವೆ.
Mumbai Airport | While Air India AI2732 was taxiing from C1 towards M4 for departure, and the IndiGo arrival flight was taxing joining B1, the right wing tips of both the aircraft touched each other. Both aircraft were taxiing at the time of the incident. Both aircraft returned… pic.twitter.com/hZXxlrrx9l
— ANI (@ANI) February 3, 2026
ಏರ್ ಇಂಡಿಯಾ ವಿಮಾನ AI 2732 ನಿರ್ಗಮನಕ್ಕಾಗಿ C1 ರಿಂದ M4 ಕಡೆಗೆ ಟ್ಯಾಕ್ಸಿ ಮಾಡುತ್ತಿದ್ದಾಗ, ರನ್ ವೇಯಲ್ಲಿ ಬರುತ್ತಿದ್ದ ಇಂಡಿಗೋ ವಿಮಾನವು ಟ್ಯಾಕ್ಸಿ ಮಾಡಿ B1 ಗೆ ಸೇರುತ್ತಿತ್ತು. ಈ ಚಲನೆಯ ಸಮಯದಲ್ಲಿ, ಎರಡೂ ವಿಮಾನಗಳ ಬಲ ರೆಕ್ಕೆ ತುದಿಗಳು ಪರಸ್ಪರ ಸ್ಪರ್ಶಿಸಿದೆ. ಇದರಿಂದ ಎರಡು ವಿಮಾನಗಳು ರೆಕ್ಕೆಗೆ ಡ್ಯಾಮೇಜ್ ಆಗಿದೆ. ಇದು ದೊಡ್ಡ ಅಪಘಾತಕ್ಕೆ ಕಾರಣವಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಫೆಬ್ರವರಿ 3 ರಂದು ಮುಂಬೈನಿಂದ ಕೊಯಮತ್ತೂರಿಗೆ ಹಾರಾಟ ನಡೆಸುತ್ತಿದ್ದ AI2732 ವಿಮಾನವು ಟೇಕ್-ಆಫ್ ಆಗುವ ಮೊದಲು ಟ್ಯಾಕ್ಸಿವೇಯಲ್ಲಿ ಕಾಯುತ್ತಿದ್ದಾಗ ಮತ್ತೊಂದು ವಿಮಾನದ ವಿಮಾನಕ್ಕೆ ಡಿಕ್ಕಿ ಹೊಡೆದಿದೆ. ಎರಡೂ ವಿಮಾನಗಳ ರೆಕ್ಕೆ ತುದಿಗಳು ಡ್ಯಾಮೇಜ್ ಆಗಿದೆ. ಇದರ ಪರಿಣಾಮವಾಗಿ ನಮ್ಮ ವಿಮಾನದ ರೆಕ್ಕೆ ತುದಿಗೆ ಹಾನಿಯಾಯಿತು ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಹೆಚ್ಚಿನ ತಾಂತ್ರಿಕ ತಪಾಸಣೆಗಾಗಿ ವಿಮಾನವನ್ನು ಸ್ಥಗಿತಗೊಳಿಸಲಾಗಿದೆ. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ನಮ್ಮ ತಂಡ ಪ್ರಯಾಣಿಕರನ್ನು ಅವರ ಗಮ್ಯಸ್ಥಾನಕ್ಕೆ ತಲುಪಿಸುವ ಕೆಲಸ ಮಾಡುತ್ತಿದೆ. ಘಟನೆಯ ಬಗ್ಗೆ ನಿಯಂತ್ರಕರಿಗೆ ವರದಿ ಮಾಡಲಾಗಿದೆ. ಈ ಘಟನೆಯಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ಏರ್ ಇಂಡಿಯಾ ವಿಷಾದಿಸುತ್ತದೆ. ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ನಮ್ಮ ಅತ್ಯುನ್ನತ ಆದ್ಯತೆಯಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: ಏರ್ ಇಂಡಿಯಾ ಡ್ರೀಮ್ಲೈನರ್ನಲ್ಲಿ ಮತ್ತೆ ಇಂಧನದ ಸ್ವಿಚ್ ಸಮಸ್ಯೆ; ಲಂಡನ್-ಬೆಂಗಳೂರು ವಿಮಾನ ಹಾರಾಟ ಸ್ಥಗಿತ
ಇನ್ನು ಇಂಡಿಗೋ ಕೂಡ ಸ್ಪಷ್ಟನೆ ನೀಡಿದೆ. ಹೈದರಾಬಾದ್‌ನಿಂದ ಮುಂಬೈಗೆ ಹೊರಟಿದ್ದ ನಮ್ಮ 6E 791 ವಿಮಾನದ ರೆಕ್ಕೆಯ ತುದಿಯು ಲ್ಯಾಂಡಿಂಗ್ ನಂತರ ಟ್ಯಾಕ್ಸಿ ಮಾಡುವಾಗ ಮತ್ತೊಂದು ವಿಮಾನದ ರೆಕ್ಕೆ ಡಿಕ್ಕಿ ಹೊಡೆದಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಮತ್ತು ಪಾರ್ಕಿಂಗ್ ನಂತರ ಕೆಳಗಿಳಿದಿದ್ದಾರೆ. ವಿಮಾನವು ನಿರ್ವಹಣಾ ತಪಾಸಣೆಗೆ ಒಳಪಡಿಸಲಾಗಿದೆ. ಈ ಘಟನೆ ನಡೆದ ನಂತರ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಲಾಗಿದೆ. ಅವರು ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇಂಡಿಗೋದಲ್ಲಿ, ನಮ್ಮ ಗ್ರಾಹಕರು, ಸಿಬ್ಬಂದಿ ಮತ್ತು ವಿಮಾನಗಳ ಸುರಕ್ಷತೆ ಮತ್ತು ಭದ್ರತೆ ನಮ್ಮ ಅತ್ಯುನ್ನತ ಆದ್ಯತೆಯಾಗಿದೆ ಎಂದು ಹೇಳಿದೆ .
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:41 pm, Tue, 3 February 26