ಮಹಿಳೆಯರ ಪಾಲಿಗೆ ಚೆನ್ನೈ ಉತ್ತಮ ನಗರ; ಜೀವನ ಗುಣಮಟ್ಟದಲ್ಲಿ ಮುಂಬೈ ಬೆಸ್ಟ್
ಜೀವನ ಗುಣಮಟ್ಟದಲ್ಲಿ ಮುಂಬೈ ಉತ್ತಮ ಎಂದು ಐಐಟಿ ಬಾಂಬೆ ನಡೆಸಿದ ಸಮೀಕ್ಷೆ ಹೇಳಿದೆ. 14 ನಗರಗಳ ಪಟ್ಟಿಯಲ್ಲಿ ಮುಂಬೈ ಅಗ್ರಸ್ಥಾನದಲ್ಲಿದ್ದು ದೆಹಲಿ, ಕೋಲ್ಕತ್ತಾ ಮತ್ತು ಚೆನ್ನೈ ನಂತರದ ಸ್ಥಾನದಲ್ಲಿದೆ.
ನವದೆಹಲಿ: ಜೀವನ ಗುಣಮಟ್ಟದಲ್ಲಿ ಮುಂಬೈ ಉತ್ತಮ ಎಂದು ಐಐಟಿ ಬಾಂಬೆ ನಡೆಸಿದ ಸಮೀಕ್ಷೆ ಹೇಳಿದೆ. 14 ನಗರಗಳ ಪಟ್ಟಿಯಲ್ಲಿ ಮುಂಬೈ ಅಗ್ರಸ್ಥಾನದಲ್ಲಿದ್ದು ದೆಹಲಿ, ಕೋಲ್ಕತ್ತಾ ಮತ್ತು ಚೆನ್ನೈ ನಂತರದ ಸ್ಥಾನದಲ್ಲಿದೆ.
ಲಿಂಗ ಸಮಾನತೆಯ ಮಾನದಂಡವನ್ನು ಜೀವನ ಗುಣಮಟ್ಟದ ರ್ಯಾಂಕಿಂಗ್ ಗೆ ಸೇರಿಸಿದ್ದರೆ ಆರು ನಗರಗಳ ರ್ಯಾಕಿಂಗ್ ಬದಲಾಗುತ್ತಿತ್ತು . ಅಂದರೆ ಮುಂಬೈ, ಭೋಪಾಲ್ ಮತ್ತು ಲಖನೌವನ್ನು ಹಿಂದಿಕ್ಕಿ ದೆಹಲಿ, ಜೈಪುರ ಮತ್ತು ಇಂದೋರ್ ಅಗ್ರ ಸ್ಥಾನ ಅಲಂಕರಿಸುತ್ತಿತ್ತು.
ಲಿಂಗ ಸಮಾನತೆಯನ್ನು ಪರಿಗಣಿಸಿದರೆ ಮಹಿಳೆಯರ ಪಾಲಿಗೆ ಚೆನ್ನೈ ಉತ್ತಮ ನಗರ ಆಗಿದ್ದು, ಕೋಲ್ಕತ್ತಾ ಮತ್ತು ಮುಂಬೈ ನಂತರದ ಸ್ಥಾನದಲ್ಲಿದೆ. ಅದೇ ವೇಳೆ ಇಂದೋರ್, ಜೈಪುರ ಮತ್ತು ಪಟನಾ ಕೊನೆಯ ಸ್ಥಾನದಲ್ಲಿದೆ.
ಐಐಟಿ ಬಿ ರ್ಯಾಂಕಿಂಗ್ ಪಟ್ಟಿ ಹೀಗಿದೆ
ವಿಷಯಗಳು ಅಗ್ರಸ್ಥಾನ ಕೊನೆಯ ಸ್ಥಾನ
ಅಗತ್ಯ ಸೌಕರ್ಯಗಳು ಪುಣೆ ಪಟನಾ
ಆರ್ಥಿಕ ಅಭಿವೃದ್ಧಿ ಮುಂಬೈ ಪಟನಾ
ಭದ್ರತೆ ಮತ್ತು ಸುರಕ್ಷತೆ ಕೋಲ್ಕತ್ತಾ ಪಟನಾ
ಸಾರಿಗೆ ಸಂಪರ್ಕ ದೆಹಲಿ ಇಂದೋರ್
ಉತ್ತಮ ವಾತಾವರಣ ಮುಂಬೈ ಲಖನೌ
ಮೂಲ ಸೌಕರ್ಯ ಅಭಿವೃದ್ಧಿ ಕೋಲ್ಕತ್ತಾ ಪಟನಾ
ಲಿಂಗ ಸಮಾನತೆ ಚೆನ್ನೈ ಪಟನಾ
ಮಹಿಳೆಯರ ವಿರುದ್ಧ ಅತೀ ಹೆಚ್ಚು ದೌರ್ಜನ್ಯ ನಡೆಯುವ ನಗರ ಜೈಪುರ ಆಗಿದೆ. ಈ ಪಟ್ಟಿಯಲ್ಲಿ ಚೆನ್ನೈ ಕೊನೆಯ ಸ್ಥಾನದಲ್ಲಿದೆ. ಮಹಿಳೆ ಮತ್ತು ಪುರುಷರ ನಡುವಿನ ಸಾಕ್ಷರತಾ ದರ ಜೈಪುರದಲ್ಲಿ ಶೇಕಡಾ 13.2 ಆಗಿದ್ದು, ಕೋಲ್ಕತ್ತಾದಲ್ಲಿ ಶೇಕಡಾ 5.4 ಆಗಿದೆ.
Published On - 1:02 pm, Sat, 5 December 20