ತಾಲಿಬಾನಿಗಳಿಗೆ ಸೆಲ್ಯೂಟ್ ಹೊಡೆದ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ
ತಾಲಿಬಾನ್ ಹಾಗೂ ಅದಕ್ಕೆ ಬೆಂಬಲಿಸಿ ಹಾಕುವ ಪೋಸ್ಟ್ಗಳನ್ನು ನಾವು ನಿಷೇಧ ಮಾಡುತ್ತೇವೆ ಎಂದು ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್ಬುಕ್ ಕೂಡ ಹೇಳಿಕೊಂಡಿದೆ.
ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (All India Muslim Personal Law Board) ಸದಸ್ಯ ಮೌಲಾನಾ ಸಜ್ಜದ್ ನೊಮಾನಿ ತಾಲಿಬಾನ್ (Taliban)ನ್ನು ಸಿಕ್ಕಾಪಟೆ ಹೊಗಳಿದ್ದಾರೆ. ಅಫ್ಘಾನಿಸ್ತಾನ (Afghanistan)ವನ್ನು ಯಶಸ್ವಿಯಾಗಿ ನಿಯಂತ್ರಣಕ್ಕೆ ತೆಗೆದುಕೊಂಡ ತಾಲಿಬಾನ್ನ್ನು ಶ್ಲಾಘಿಸಿ, ಅಭಿನಂದಿಸಿದ್ದಾರೆ. ನೀವು ತುಂಬ ಕಠಿಣವಾದಿಗಳಾಗಿದ್ದು, ನಾವು ಹಿಂದಿ ಮುಸ್ಲಿಮರು ನಿಮಗೆ ಸೆಲ್ಯೂಟ್ ಹೊಡೆಯುತ್ತೇವೆ ಎಂದಿದ್ದಾರೆ.
ನಿನ್ನೆ ಸಮಾಜವಾದಿ ಪಕ್ಷದ, ಸಂಭಾಲ್ ಸಂಸದ ಶಫಿಕುರ್ ರಹಮಾನ್ ಬರ್ಕ್ ಅವರು, ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದನ್ನು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೋಲಿಸಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ತಾಲಿಬಾನ್ ಉಗ್ರರ ಹೋರಾಟ ಹೋಲಿಕೆ ಮಾಡಿದ್ದ ಸಂಸದನನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿ ಅನೇಕರು ಟೀಕಿಸಿದ್ದರು. ಇಂದು ಅವರ ವಿರುದ್ಧ ದೇಶದ್ರೋಹ ಕಾಯ್ದೆಯಡಿ ಪ್ರಕರಣ ಕೂಡ ದಾಖಲಾಗಿದೆ.
ಫೇಸ್ಬುಕ್ನಿಂದ ನಿಷೇಧ ಇನ್ನು ತಾಲಿಬಾನ್ ಹಾಗೂ ಅದಕ್ಕೆ ಬೆಂಬಲಿಸಿ ಹಾಕುವ ಪೋಸ್ಟ್ಗಳನ್ನು ನಾವು ನಿಷೇಧ ಮಾಡುತ್ತೇವೆ ಎಂದು ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್ಬುಕ್ ಕೂಡ ಹೇಳಿಕೊಂಡಿದೆ. ತಾಲಿಬಾನಿಗಳಿಂದ ನಿರ್ವಹಿಸಲ್ಪಡುವ ಖಾತೆಗಳನ್ನು ನಿಷ್ಕ್ರಿಯಗೊಳಿಸುತ್ತೇವೆ. ಈ ಕೆಲಸಕ್ಕಾಗಿಯೇ ಅಫ್ಘಾನಿಸ್ತಾನದಲ್ಲಿ ತಜ್ಞರ ತಂಡವನ್ನು ನೇಮಕ ಮಾಡಲಾಗಿದೆ ಎಂದೂ ಫೇಸ್ಬುಕ್ ಹೇಳಿಕೊಂಡಿದೆ.
ಇದನ್ನೂ ಓದಿ: ಬಾಯಿಗೆ ರುಚಿ ಕೊಡುವ ಮೊಸರಿನ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು?
ಬಿಜೆಪಿ ಜನಾಶೀರ್ವಾದ ಯಾತ್ರೆ: ಗಾಳಿಯಲ್ಲಿ ಗುಂಡು ಹಾರಿಸಿ ಭಗವಂತ ಖೂಬಾಗೆ ಸ್ವಾಗತ; ಘಟನೆ ವಿರುದ್ಧ ಎಫ್ಐಆರ್ ದಾಖಲು