ಜಿ20 ಶೃಂಗಸಭೆಗೆ ಬಂದ ಚೀನಾ ನಿಯೋಗದ ಬಳಿ ಇತ್ತು ನಿಗೂಢ ಬ್ಯಾಗ್, ಕೊನೆಗೂ ತಪಾಸಣೆ ಮಾಡಲು ಒಪ್ಪಲೇ ಇಲ್ಲ, ಮುಂದೇನಾಯ್ತು?
ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ 2 ದಿನಗಳ ಜಿ20 ಶೃಂಗಸಭೆ(G20 Summit) ಅದ್ಧೂರಿಯಾಗಿ ಜರುಗಿತು. ಅಮೆರಿಕ ಅಧ್ಯಕ್ಷ ಜೋ ಬೈಡನ್(Joe Biden), ಬ್ರಿಟನ್ ಪ್ರಧಾನಿ ರಿಷಿ ಸುನಕ್(Rishi Sunak) ಸೇರಿದಂತೆ ವಿಶ್ವದ ಹಲವು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಹಾಗೆಯೇ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಬಾರದಿದ್ದರೂ ಅವರ ನಿಯೋಗವು ದೆಹಲಿಗೆ ಬಂದಿತ್ತು. ಅವರಿಗೆ ತಾಜ್ ಪ್ಯಾಲೆಸ್ ಹೋಟೆಲ್ನಲ್ಲಿ ತಂಗಲು ಅವಕಾಶ ಮಾಡಿಕೊಡಲಾಗಿತ್ತು.
ದೆಹಲಿ, ಸೆಪ್ಟೆಂಬರ್ 13: ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ 2 ದಿನಗಳ ಜಿ20 ಶೃಂಗಸಭೆ(G20 Summit) ಅದ್ಧೂರಿಯಾಗಿ ಜರುಗಿತು. ಅಮೆರಿಕ ಅಧ್ಯಕ್ಷ ಜೋ ಬೈಡನ್(Joe Biden), ಬ್ರಿಟನ್ ಪ್ರಧಾನಿ ರಿಷಿ ಸುನಕ್(Rishi Sunak) ಸೇರಿದಂತೆ ವಿಶ್ವದ ಹಲವು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಹಾಗೆಯೇ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಬಾರದಿದ್ದರೂ ಅವರ ನಿಯೋಗವು ದೆಹಲಿಗೆ ಬಂದಿತ್ತು. ಅವರಿಗೆ ತಾಜ್ ಪ್ಯಾಲೆಸ್ ಹೋಟೆಲ್ನಲ್ಲಿ ತಂಗಲು ಅವಕಾಶ ಮಾಡಿಕೊಡಲಾಗಿತ್ತು.
ತಪಾಸಣೆ ವೇಳೆ ನಿಗೂಢ ಬ್ಯಾಂಗ್ ಒಂದು ಅವರ ಬಳಿ ಪತ್ತೆಯಾಗಿತ್ತು, ಆದರೆ ಭದ್ರತಾ ಸಿಬ್ಬಂದಿ ಎಷ್ಟೇ ಮನವಿ ಮಾಡಿದರು ಬ್ಯಾಗ್ ಅನ್ನು ತಪಾಸಣೆ ಮಾಡಲು ಅವಕಾಶ ಮಾಡಿಕೊಡಲಿಲ್ಲ, ವಾದ, ವಿವಾದ ಸುಮಾರು 12 ಗಂಟೆಗಳ ಕಾಲ ನಡೆಯಿತು. ದೀರ್ಘಕಾಲದವರೆಗೆ ಪೊಲೀಸರು ಚೀನಾದ ನಿಯೋಗದ ಮನವೊಲಿಸಲಯ ಪ್ರಯತ್ನಿಸಿದರು ಆದರೂ ಅವರು ಒಪ್ಪಲಿಲ್ಲ. ನಂತರ ಚೀಲವನ್ನು ಚೀನಾ ರಾಯಭಾರ ಕಚೇರಿಗೆ ಕಳುಹಿಸಲಾಯಿತು. ಪೊಲೀಸರ ಪ್ರಕಾರ, ಇದರ ನಂತರ ಬಂದ ಪ್ರತಿ ಚೀನಾದ ನಿಯೋಗವು ಅವರ ಎಲ್ಲಾ ಬ್ಯಾಗ್‌ಗಳನ್ನು ಪರಿಶೀಲಿಸಿದೆ, ಆದರೆ ಆ ಬ್ಯಾಗ್‌ನಲ್ಲಿ ಏನಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ವಾಸ್ತವವಾಗಿ, ರಾಜತಾಂತ್ರಿಕ ಸಾಮಾನು ಸರಂಜಾಮುಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ನೀಡಲಾಗಿತ್ತು, ಆದರೆ ಹೋಟೆಲ್ ತಾಜ್ ಪ್ಯಾಲೇಸ್ ಅನ್ನು ತಲುಪಿದ ಚೀನಾದ ನಿಯೋಗದಲ್ಲಿ, ಒಬ್ಬ ವ್ಯಕ್ತಿಯ ಬಳಿ ಅಸಾಮಾನ್ಯ ಬ್ಯಾಗ್ ಕಂಡುಬಂದಿದೆ.
ಮತ್ತಷ್ಟು ಓದಿ: ಭಾರತ-ಮಧ್ಯಪ್ರಾಚ್ಯ-ಯುರೋಪ್ ಕಾರಿಡಾರ್ ಸಂಪರ್ಕ ಹೇಗಿರುತ್ತದೆ? ವಿಡಿಯೊ ನೋಡಿ
ನಂತರ ಪ್ರೋಟೋಕಾಲ್ ಅನ್ನು ಗಮನದಲ್ಲಿಟ್ಟುಕೊಂಡು, ಈ ಚೀಲವನ್ನು ಒಳಗೆ ತೆಗೆದುಕೊಳ್ಳಲು ಅನುಮತಿಸಲಾಗಿದೆ. ಇದಾದ ಬಳಿಕ ಹೊಟೇಲ್ ಸಿಬ್ಬಂದಿ ಬ್ಯಾಗ್ ನಲ್ಲಿ ಏನೋ ಅನುಮಾನಾಸ್ಪದವಾಗಿ ಇರುವುದನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಚೀಲವನ್ನು ಸ್ಕ್ಯಾನ್ ಮಾಡಲು ಕೇಳಿದಾಗ, ಚೀನಿಯರು ನಿರಾಕರಿಸಿದರು.
ಇದಾದ ಬಳಿಕ ವಾತಾವರಣ ಉದ್ವಿಗ್ನಗೊಂಡು 12 ಗಂಟೆಗಳ ಕಾಲ ನಾಟಕ ಮುಂದುವರೆಯಿತು. ನಿಗೂಢ ಚೀಲವನ್ನು ಚೀನಾ ರಾಯಭಾರ ಕಚೇರಿಗೆ ಕಳುಹಿಸಿದಾಗ ವಿಷಯ ಶಾಂತವಾಯಿತು. ಕಳೆದ ಭಾನುವಾರ G20 ಶೃಂಗಸಭೆ ಕೊನೆಗೊಂಡಿತು. ಅದೇ ರೀತಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಬೆಂಗಾವಲು ಪಡೆಯ ಭದ್ರತೆಯಲ್ಲಿ ಲೋಪವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಆ ಬೆಂಗಾವಲು ಪಡೆಯಲ್ಲಿದ್ದ ವಾಹನದ ಚಾಲಕ ತನ್ನ ಖಾಸಗಿ ಪ್ರಯಾಣಿಕನನ್ನು ಕರೆದುಕೊಂಡು ಹೋಗಲು ಮತ್ತೊಂದು ಹೋಟೆಲ್‌ಗೆ ತಲುಪಿದ್ದ. ನಂತರ ಭದ್ರತಾ ಪಡೆಗಳು ಆತನನ್ನು ಹಿಡಿದಿತ್ತು. ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಬಂದಿರಲಿಲ್ಲ ಬದಲಾಗಿ ಲಿ ಕಿಯಾಂಗ್ ಅವರು ಪಾಲ್ಗೊಂಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ