ಮುಂಬರುವ ದಿನಗಳಲ್ಲಿ ಉತ್ತರಪ್ರದೇಶದಲ್ಲಿ (uttar pradesh) ಹಲವು ಹಬ್ಬಗಳು ಬರಲಿದೆ. ಹಾಗಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (yogi adityanath )ಒಂದು ಮಹತ್ವದ ಸಭೆಯನ್ನು ನಡೆಸಿದ್ದಾರೆ. ಈ ಬಗ್ಗೆ ಗುರುವಾರದಂದು ಉನ್ನತ ಮಟ್ಟದ ಸಭೆಯನ್ನು ನಡೆಸಿ, ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನು ನೀಡಿದ್ದಾರೆ. ಜೂನ್ 16ಕ್ಕೆ ಗಂಗಾದಸರಾ, 17ಕ್ಕೆ ಬಕ್ರೀದ್, 18ಕ್ಕೆ ಜ್ಯೇಷ್ಠ ಮಾಸದ ಮಂಗಲೋತ್ಸವ ಉತ್ತರ ಪ್ರದೇಶದಲ್ಲಿ ನಡೆಯಲಿದೆ. ಹೀಗಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 24X7 ಕೆಲಸ ಮಾಡುವಂತೆ ಹಾಗೂ ಎಲ್ಲ ಕಡೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.
ಇದರಲ್ಲೂ ಸಿಎಂ ಯೋಗಿ ಅವರು 17ಕ್ಕೆ ಬಕ್ರೀದ್ ಇರುವ ಕಾರಣ ಒಂದು ಮಾರ್ಗಸೂಚಿಯನ್ನು ನೀಡಿದ್ದಾರೆ. ಬಕ್ರೀದ್ ಸಂಪ್ರಾದಾಯದಂತೆ ಆಚರಣೆ ಮಾಡಲಿ, ಆದರೆ ರಸ್ತೆ ಬಂದ್ ಮಾಡಿ ನಮಾಜ್ ಮಾಡುವುದು ಅಥವಾ ಮಾರ್ಗ ಮಧ್ಯೆ ಪ್ರಾಣಿಗಳ ಬಲಿ ನೀಡುವುದನ್ನು ನಿಷೇಧಿಸಲಾಗಿದೆ. ಸರ್ಕಾರ ಹಾಗೂ ಸ್ಥಳೀಯ ಆಡಳಿತ ನಿಗದಿಪಡಿಸಿರುವ ಸ್ಥಳದಲ್ಲೇ ನಮಾಜ್ ಮಾಡಬೇಕು ಹಾಗೂ ಪ್ರಾಣಿ ಬಲಿ ನೀಡಬೇಕು ಎಂದು ಆದೇಶ ನೀಡಿದ್ದಾರೆ.
ಪ್ರಾಣಿ ಬಲಿ ನೀಡುವ ಮುನ್ನ ಸ್ಥಳೀಯ ಅಧಿಕಾರಿಗಳ ಜತೆಗೆ ಚರ್ಚೆ ಮಾಡಬೇಕು ಹಾಗೂ ಬಲಿ ನೀಡುವ ಮೊದಲು ಅಧಿಕಾರಿಗಳ ಒಪ್ಪಿಗೆ ಪಡೆಯಬೇಕು ಎಂದು ಹೇಳಿದ್ದಾರೆ. ವಿವಾದಿತ/ ಸೂಕ್ಷ್ಮ ಪ್ರದೇಶದಲ್ಲಿ ಪ್ರಾಣಿ ಬಲಿ ನೀಡಬಾರದು. ನಿಷೇಧಿತ ಪ್ರದೇಶದಲ್ಲಿ ಪ್ರಾಣಿ ಬಲಿಯಾಗದಂತೆ ನೋಡಿಕೊಳ್ಳಬೇಕು ಎಂದು ಸಿಎಂ ಯೋಗಿ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಇನ್ನು ಪ್ರಾಣಿ ಬಲಿಯಾದ ನಂತರ ಪ್ರತಿ ಜಿಲ್ಲೆಯಲ್ಲೂ ತ್ಯಾಜ್ಯ ವಿಲೇವಾರಿಯಾಗಬೇಕು. ಎಲ್ಲವನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಧನ್ಯವಾದ ಮೋದಿ!; ತಮ್ಮ ಗೆಲುವನ್ನು ಪ್ರಧಾನಿಗೆ ಅರ್ಪಿಸಿದ ಎನ್ಸಿಪಿ ನಾಯಕ ಶರದ್ ಪವಾರ್
ನಮಾಜ್ ಮುಸ್ಲಿಂ ಸಂಪ್ರಾದಾಯದಂತೆ ನಡೆಯಲಿ ಆದರೆ ಅದು ರಸ್ತೆ ಮಧ್ಯೆ ಅಲ್ಲ, ಅಧಿಕಾರಿಗಳು ಸೂಚಿಸಿದ ಪ್ರದೇಶದಲ್ಲಿ ಮಾಡಬೇಕು. ಯಾವುದೇ ಹೊಸ ಸಂಪ್ರಾದಾಯವನ್ನು ಪೋತ್ಸಾಹಿಸಬೇಡಿ, ಹಾಗೂ ಅವರ ನಂಬಿಕೆಯನ್ನು ಗೌರವಿಸಿ ಎಂದು ಹೇಳಿದ್ದಾರೆ. ಯಾರಾದರೂ ಕಾನೂನನ್ನು ಕೈಗೆತ್ತಿಕೊಂಡರೆ ಕಠಿಣ ಕ್ರಮವನ್ನು ತೆಗೆದುಕೊಳ್ಳಿ ಎಂದು ಹೇಳಿದ್ದಾರೆ.
ಇನ್ನು ಅಧಿಕಾರಿಗಳ ಸಭೆಯಲ್ಲಿ ಯೋಗಿ ಅವರು ಜೂನ್15ರಿಂದ ಜೂನ್ 22ರವರೆಗೆ ಸ್ವಚ್ಛತಾ ಆಂದೋಲನದಲ್ಲಿ ಅಭಿಯಾನವನ್ನು ಪ್ರಾರಂಭಿಸಬೇಕು ಎಂದು ಹೇಳಿದ್ದಾರೆ. ಗಂಗಾ ದಸರಾದಂದು ಗಂಗಾ ನದಿಯ ಘಟ್ಗಳನ್ನು ಸ್ವಚ್ಛಗೊಳಿಸಬೇಕು ಎಂದು ಹೇಳಿದ್ದಾರೆ. ಹಾಗೂ ಅಲ್ಲಿ ಅಲಂಕಾರಗಳು ನಡೆಯಬೇಕು, ಭಕ್ತರಿಗೆ ಸ್ನಾನ ಮಾಡಲು ಸರಿಯಾದ ವ್ಯವಸ್ಥೆ ಮಾಡಬೇಕು ಎಂದು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:43 pm, Sat, 15 June 24