AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮಿತ್ ಶಾಗೆ 33 ವರ್ಷ, ಓಂ ಬಿರ್ಲಾಗೆ 26 ವರ್ಷ-ವೈರಲ್​ ಆದ ಕೊವಿಡ್​ 19 ಸರ್ಟಿಫಿಕೇಟ್​​ಗಳು, ತನಿಖೆಗೆ ಆದೇಶ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಟಾವಾ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯಸ್ಥ, ನಮ್ಮ ಐಡಿಯನ್ನು ಡಿಸೆಂಬರ್​ 12ರಂದು ಹ್ಯಾಕ್​ ಮಾಡಿದ್ದಾರೆ. ಆ ಐಡಿಯನ್ನು ಕ್ಲೋಸ್ ಮಾಡುವಂತೆ ನಾವೂ ಕೂಡ ಸಂಬಂಧಪಟ್ಟವರಿಗೆ ಪತ್ರ ಬರೆದಿದ್ದೇವೆ ಎಂದು  ಹೇಳಿಕೊಂಡಿದ್ದಾರೆ.

ಅಮಿತ್ ಶಾಗೆ 33 ವರ್ಷ, ಓಂ ಬಿರ್ಲಾಗೆ 26 ವರ್ಷ-ವೈರಲ್​ ಆದ ಕೊವಿಡ್​ 19 ಸರ್ಟಿಫಿಕೇಟ್​​ಗಳು, ತನಿಖೆಗೆ ಆದೇಶ
ವೈರಲ್​ ಆದ ಕೊವಿಡ್ 19 ಪ್ರಮಾಣಪತ್ರಗಳು
TV9 Web
| Edited By: |

Updated on: Dec 18, 2021 | 12:36 PM

Share

‘ಫಲಾನುಭವಿ ಹೆಸರು ಅಮಿತ್ ಶಾ, ವಯಸ್ಸು 33, ಫಲಾನುಭವಿ ಹೆಸರು ಓಂ ಬಿರ್ಲಾ, ವಯಸ್ಸು 26…ಹೀಗೆಲ್ಲ ಹೆಸರು ಕಂಡು ಬಂದಿದ್ದು, ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ತಖಾ ತಹಸಿಲ್‌ನಲ್ಲಿ ಇರುವ ಸಮುದಾಯ ಆರೋಗ್ಯ ಕೇಂದ್ರದ ಹೆಸರಿರುವ ಕೊವಿಡ್​ 19 ಸರ್ಟಿಫಿಕೇಟ್​​ (Covid 19 Vaccine Certificate)ನಲ್ಲಿ. ಈ ಆರೋಗ್ಯ ಕೇಂದ್ರ ನೀಡಿದೆ ಎಂದು ವೈರಲ್ ಆಗುತ್ತಿರುವ ಕೊರೊನಾ ಪ್ರಮಾಣಪತ್ರದಲ್ಲಿ ಕೇಂದ್ರ ಸಚಿವರಾದ, ಅಮಿತ್​ ಶಾ, ನಿತಿನ್ ಗಡ್ಕರಿ, ಪಿಯುಷ್​ ಗೋಯೆಲ್, ಸ್ಪೀಕರ್ ಓಂ ಬಿರ್ಲಾ ಎಂಬ ಹೆಸರಿದೆ. ಸರ್ಟಿಫಿಕೇಟ್​ ಫೋಟೋಗಳು ಸಿಕ್ಕಾಪಟೆ ವೈರಲ್ ಆಗುತ್ತಿದ್ದು, ಇಲ್ಲೇನೋ ಪಿತೂರಿ ನಡೆಯುತ್ತಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಹಾಗೇ, ಮುಖ್ಯ ವೈದ್ಯಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ.

ಆದರೆ ಇಟಾವಾ ಜಿಲ್ಲೆಯ ತಖಾ ತಹಸಿಲ್‌ನಲ್ಲಿ ಇರುವ ಆರೋಗ್ಯ ಕೇಂದ್ರದ ಅಧಿಕಾರಿಗಳು ತಾವು ಇಂಥ ಯಾವುದೇ ಸರ್ಟಿಫಿಕೇಟ್​​ನ್ನೂ ನೀಡಲಿಲ್ಲ ಎಂದು ಹೇಳಿದ್ದಾರೆ. ಇವು ನಕಲಿ ಪ್ರಮಾಣ ಪತ್ರಗಳು ಎಂದು ಪ್ರತಿಪಾದಿಸಿದ್ದಾರೆ. ಇದರಲ್ಲಿ ಅಮಿತ್​ ಶಾ ವಯಸ್ಸು 33, ನಿತಿನ್​ ಗಡ್ಕರಿ ವಯಸ್ಸು 30, ಪಿಯುಷ್​ ಗೋಯಲ್​ ವಯಸ್ಸು 36 ಎಂದು ಉಲ್ಲೇಖವಿದೆ.  ಇವರೆಲ್ಲ ಡಿಸೆಂಬರ್​ 12ರಂದು ಇಟಾವಾದ ಆರೋಗ್ಯ ಕೇಂದ್ರದಲ್ಲಿ ಮೊದಲ ಡೋಸ್ ಕೊವಿಡ್ 19 ಲಸಿಕೆ ಪಡೆದಿದ್ದಾರೆ. 2022ರ ಮಾರ್ಚ್​ 15ರಿಂದ ಏಪ್ರಿಲ್​ 3ರೊಳಗೆ ಎರಡನೇ ಡೋಸ್ ತೆಗೆದುಕೊಳ್ಳಬೇಕು ಎಂದು ಉಲ್ಲೇಖಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಟಾವಾ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯಸ್ಥ, ನಮ್ಮ ಐಡಿಯನ್ನು ಡಿಸೆಂಬರ್​ 12ರಂದು ಹ್ಯಾಕ್​ ಮಾಡಿದ್ದಾರೆ. ಆ ಐಡಿಯನ್ನು ಕ್ಲೋಸ್ ಮಾಡುವಂತೆ ನಾವೂ ಕೂಡ ಸಂಬಂಧಪಟ್ಟವರಿಗೆ ಪತ್ರ ಬರೆದಿದ್ದೇವೆ ಎಂದು  ಹೇಳಿಕೊಂಡಿದ್ದಾರೆ. ಹಾಗೇ, ಮುಖ್ಯ ವೈದ್ಯಾಧಿಕಾರಿ ಡಾ. ಭಗವಾನ್ ದಾಸ್ ಭಿರೋರಿಯಾ ಪ್ರತಿಕ್ರಿಯೆ ನೀಡಿದ್ದು, ಇಲ್ಲೋನೋ ಪಿತೂರಿ ನಡೆಯುತ್ತಿರುವಂತೆ ಭಾಸವಾಗುತ್ತಿದೆ. ಕೇಂದ್ರ ಸಚಿವರ ಹೆಸರುಗಳನ್ನೆಲ್ಲ ಬಳಸಲಾಗಿದೆ. ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಜನಪ್ರತಿನಿಧಿಗಳು ಫುಲ್ ಸೈಲೆಂಟ್! ಆದರೆ ಶಿವಾಜಿ ಪುತ್ಥಳಿಗೆ ಎಂಇಎಸ್ ಕಾರ್ಯಕರ್ತೆಯರಿಂದ ಕ್ಷೀರಾಭಿಷೇಕ!

S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?