ಮಧ್ಯಪ್ರದೇಶ: ನಮೀಬಿಯಾದಿಂದ ಭಾರತಕ್ಕೆ ಕರೆತಂದ ಚೀತಾ ಕಿಡ್ನಿ ಕಾಯಿಲೆಯಿಂದ ಸಾವು
ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾದ ಚೀತಾಗಳ ಮೊದಲ ಬ್ಯಾಚ್‌ನ ಭಾಗವಾಗಿದ್ದ ಸಾಶಾ, ಕಳೆದ ವರ್ಷ ನಮೀಬಿಯಾದಿಂದ ಬಂದ ಐದು ಹೆಣ್ಣು ಚೀತಾಗಳ ಪೈಕಿ ಒಂದಾಗಿದೆ.
ಮಧ್ಯಪ್ರದೇಶ: ನಮೀಬಿಯಾದಿಂದ (Namibia) ಭಾರತಕ್ಕೆ ಕರೆತಂದಿದ್ದ ಎಂಟು ಚೀತಾಗಳ (cheetah) ಪೈಕಿ ಒಂದು ಸಾವಿಗೀಡಾಗಿದೆ. ಜನವರಿಯಲ್ಲಿ ಇದಕ್ಕೆ ಮೂತ್ರಪಿಂಡದ ಸೋಂಕು (kidney infection) ಉಂಟಾಗಿದ್ದು ಸೋಮವಾರ ಕೊನೆಯುಸಿರೆಳೆದಿದೆ. ದಿನನಿತ್ಯದ ಮಾನಿಟರಿಂಗ್ ತಪಾಸಣೆಯ ಸಮಯದಲ್ಲಿ ಎಂಬ ಹೆಣ್ಣು ಚೀತಾ, ಸಾಶಾ ಆಯಾಸ ಮತ್ತು ದೌರ್ಬಲ್ಯದ ಲಕ್ಷಣಗಳನ್ನು ತೋರಿಸಿತ್ತು. ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಅದಕ್ಕೆ ನಿರ್ಜಲೀಕರಣವಿದ್ದು ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿತ್ತು ಎಂದು ತಿಳಿದು ಬಂದಿದೆ.ರಕ್ತ ಪರೀಕ್ಷೆ ನಡೆಸಿದಾಗ ಅದರ ಕ್ರಿಯೇಟಿನೈನ್ ಮಟ್ಟವು ತುಂಬಾ ಹೆಚ್ಚಾಗಿದೆ ಎಂದು ತಿಳಿದುಬಂದಿದೆ, ಇದು ಮೂತ್ರಪಿಂಡದಲ್ಲಿ ಸೋಂಕನ್ನು ಸೂಚಿಸುತ್ತದೆ. ಉದ್ಯಾನದಲ್ಲಿರುವ ಇತರ ಚೀತಾಗಳು ಆರೋಗ್ಯವಾಗಿವೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾದ ಚೀತಾಗಳ ಮೊದಲ ಬ್ಯಾಚ್‌ನ ಭಾಗವಾಗಿದ್ದ ಸಾಶಾ, ಕಳೆದ ವರ್ಷ ನಮೀಬಿಯಾದಿಂದ ಬಂದ ಐದು ಹೆಣ್ಣು ಚೀತಾಗಳ ಪೈಕಿ ಒಂದಾಗಿದೆ.
ಕಳೆದ ವರ್ಷ ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಜನ್ಮದಿನದಂದು ಕುನೋದಲ್ಲಿ ಬಿಡುಗಡೆ ಮಾಡಿದ ಐದು ವರ್ಷದ ಎರಡು ಹೆಣ್ಣು ಚೀತಾಗಳಲ್ಲಿ ಸಾಶಾ ಕೂಡಾ ಒಂದಾಗಿದೆ.
ಕಳೆದ ವಾರ ಎಲ್ಟನ್ ಮತ್ತು ಫ್ರೆಡ್ಡಿ ಎಂಬ ಚೀತಾಗಳನ್ನು ಮಧ್ಯಪ್ರದೇಶದಲ್ಲಿ ಕಾಡಿಗೆ ಬಿಡಲಾಗಿತ್ತು. ಅದರೊಂದಿಗೆ, ನಮೀಬಿಯಾದಿಂದ ತರಲಾದ ಎಂಟು ಚೀತಾಗಳ ಪೈಕಿ ನಾಲ್ಕನ್ನು ಶಿಯೋಪುರ್ ಜಿಲ್ಲೆಯ ಉದ್ಯಾನವನದಲ್ಲಿ ಬಿಡಲಾಗಿದೆ.
ಇದನ್ನೂ ಓದಿ:ರಾಹುಲ್ ಗಾಂಧಿ ಅನರ್ಹತೆ ಖಂಡಿಸಿ ಪ್ರತಿಭಟಿಸಿದ 16 ಕಾಂಗ್ರೆಸ್ ಶಾಸಕರು ಗುಜರಾತ್ ವಿಧಾನಸಭೆಯಿಂದ ಅಮಾನತು
ಕಳೆದ ವರ್ಷ ನವೆಂಬರ್‌ನಲ್ಲಿ ಅವುಗಳನ್ನು ಮೊದಲ ಬಾರಿಗೆ ಕ್ವಾರಂಟೈನ್ ಬೊಮಾಸ್ (ಪ್ರಾಣಿ ಆವರಣಗಳು) ನಿಂದ ಅರಣ್ಯದ ಆವರಣಗಳಿಗೆ ಸ್ಥಳಾಂತರಿಸಲಾಯಿತು.ನಂತರ ಅವುಗಳನ್ನು ಉದ್ಯಾನದ ಬೇಟೆಯ ಆವರಣಗಳಿಗೆ ಬಿಡುಗಡೆ ಮಾಡಲಾಯಿತು. ಏಳು ಗಂಡು ಮತ್ತು ಐದು ಹೆಣ್ಣು ಚೀತಾಗಳನ್ನು ಈ ವರ್ಷ ಫೆಬ್ರವರಿ 18 ರಂದು ದಕ್ಷಿಣ ಆಫ್ರಿಕಾದಿಂದ ಕೆಎನ್‌ಪಿಗೆ ತರಲಾಯಿತು. ಕೆಎನ್‌ಪಿಯಲ್ಲಿ ಈಗ 20 ಚೀತಾಗಳಿವೆ. ಮುಂದಿನ ದಶಕದಲ್ಲಿ ಏಷ್ಯಾದ ದೇಶಕ್ಕೆ ಹೆಚ್ಚಿನ ಆಫ್ರಿಕನ್ ಚೀತಾಗಳನ್ನು ಪರಿಚಯಿಸಲು ದಕ್ಷಿಣ ಆಫ್ರಿಕಾವು ಭಾರತದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ