Namrata Hakhoo: ಅನಾರೋಗ್ಯ ಪೀಡಿತ, ಗಾಯಗೊಂಡ ಪ್ರಾಣಿಗಳ ಆಶ್ರಯದಾತೆ ಈ ಹೆಣ್ಣು ಮಗಳು

ಮುಗ್ಧ ಜೀವಿಗಳ ಸಂರಕ್ಷಣೆಯ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ನಮ್ರತಾ ಹಬೂ. ಇವರು 42 ವರ್ಷ ವಯಸ್ಸಿನ ಕಾಶ್ಮೀರಿ ಪಂಡಿತರಾಗಿದ್ದು, 1989ರಿಂದ ಜಮ್ಮುನಿನಲ್ಲಿ ತಮ್ಮ ಪೋಷಕರೊಂದಿಗೆ ವಾಸವಾಗಿದ್ದಾರೆ.

1993ರಿಂದಲೂ ತನ್ನ ಪೋಷಕರೊಂದಿಗೆ ಸೇರಿ ಗಾಯಗೊಂಡ, ಅನಾರೋಗ್ಯಪೀಡಿತ ಪ್ರಾಣಿಗಳನ್ನು ಹಾರೈಕೆ ಮಾಡುವ, ಮುಗ್ಧ ಜೀವಿಗಳ ಸಂರಕ್ಷಣೆಯ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ನಮ್ರತಾ ಹಬೂ. ಇವರು 42 ವರ್ಷ ವಯಸ್ಸಿನ ಕಾಶ್ಮೀರಿ ಪಂಡಿತರಾಗಿದ್ದು, 1989ರಿಂದ ಜಮ್ಮುನಿನಲ್ಲಿ ತಮ್ಮ ಪೋಷಕರೊಂದಿಗೆ ವಾಸವಾಗಿದ್ದಾರೆ. ಇವರು ಹಬೂ ಸ್ಟಿಟ್ ಅನಿಮಲ್ಸ್ ಫೌಂಡೇಷನ್ ಟ್ರಸ್ಟ್​​ನ ಸಂಸ್ಥಾಪಕಿಯಾಗಿದ್ದಾರೆ. 1993 ರಿಂದ ಅವರು ತನ್ನ ಹೆತ್ತವರೊಂದಿಗೆ ಸೇರಿ 450ಕ್ಕೂ ಹೆಚ್ಚು ಗಾಯಗೊಂಡ, ಅನಾರೋಗ್ಯ ಪೀಡಿತ ಪ್ರಾಣಿಗಳನ್ನು ಉಪಚರಿಸುತ್ತಿದ್ದಾರೆ. ನಮ್ರತಾ ಅವರು ಸಣ್ಣ ವಯಸ್ಸಿನವರಿದ್ದಾಗಿನಿಂದಲೂ ಅವರ ತಾಯಿ ಬೀದಿ ನಾಯಿಗಳಿಗೆ ತೊಂದರೆ ಕೊಡಬಾರದೆಂದು ಜನರಿಗೆ ಜಾಗೃತಿಯ ಶಿಕ್ಷಣವನ್ನು ನೀಡುತ್ತಿದ್ದರು. ನಂತರ ಅವರು ಪ್ರಾಣಿಗಳ ಹಾರೈಕೆಯಲ್ಲಿ ತೊಡಗಿ ಗಾಯಗೊಂಡ ನಾಯಿ, ಇತರ ಪ್ರಾಣಿಗಳಿಗೆ ಔಷಧಿಗಳನ್ನು ನೀಡುವ ಮೂಲಕ ಅವುಗಳಿಗೆ ಉಪಚಾರವನ್ನು ಮಾಡುತ್ತಿದ್ದರು. ಹೀಗೆ ಶುರು ಮಾಡಿರುವ ಇವರ ಈ ಕಾರ್ಯವು 1993ರಲ್ಲಿ ಸರಿಯಾದ ಆಕಾರವನ್ನು ಪಡೆದುಕೊಂಡಿತು.

ನಮೃತ ಹಖೂ ಅವರ ಪ್ರಯಾಣವು ಸುಮಾರು 30 ವರ್ಷಗಳ ಹಿಂದೆ ಎರಡು ನಾಯಿಗಳನ್ನು ರಕ್ಷಿಸುವುದರೊಂದಿಗೆ ಆರಂಭವಾಗಿ ಇಂದು ಅವರು ಎತ್ತು, ಕರುಗಳು, ನಾಯಿಗಳಿಂದ ಹಿಡಿದು ಹಂದಿ, ಕುರಿ, ಹದ್ದು, ಬೆಕ್ಕುಗಳು, ಪಕ್ಷಿಗಳು, ಮಂಗಗಳು ಹಾಗೂ ಇನ್ನಿತರ ಅನಾರೋಗ್ಯ ಪೀಡಿತ ಪ್ರಾಣಿಗಳ ರಕ್ಷಣೆಯ ಕಾರ್ಯದಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: ಈ ದೇಶದಲ್ಲಿ ಅರ್ಧದಷ್ಟು ಹೆಣ್ಣುಮಕ್ಳು ಮದುವೆಯಾಗದೇ ತಾಯಿಯಾಗ್ತಾರೆ: 10ರಲ್ಲಿ 8 ಮದುವೆಗಳು ವಿಚ್ಛೇದನಲ್ಲಿ ಕೊನೆಗೊಳ್ಳುತ್ತಂತೆ!

ನಮ್ರತ ಅವರು ಈ ಪ್ರಾಣಿಗಳ ರಕ್ಷಣೆಯ ಕಾರ್ಯಗಳಿಗೆ ಕಾಶ್ಮೀರಿ ಪಂಡಿತ ವಲಸಿಗರಿಗಾಗಿ ಸರ್ಕಾರದಿಂದ ಒದಗಿಸುವ ಪರಿಹಾರದ ಹಣವನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಈ ಮುಗ್ಧ ಜೀವಿಗಳಿಗಾಗಿ ಇನ್ನೂ ಹೆಚ್ಚಿನದನ್ನು ಮಾಡಲು ಅವರು ಉತ್ಸುಕರಾಗಿದ್ದಾರೆ, ಆದರೆ ಅದನ್ನು ಮಾಡಲು ಸಂಪನ್ಮೂಲಗಳ ಕೊರತೆಯಿದೆ ಎಂದು ಅವರು ಹೇಳುತ್ತಾರೆ. ನಮಗೆ ಸಹಾಯ ಮಾಡಲು ಜನರು ಮುಂದೆ ಬರಬೇಕು ಎಂದು ಮನವಿ ಮಾಡಲು ಬಯಸುತ್ತೇನೆ, ಏಕೆಂದರೆ ಇಲ್ಲಿ ಪ್ರಾಣಿಗಳಿಗೆ ಯಾರು ಕಾಳಜಿ ತೋರುವುದಿಲ್ಲ ಹಾಗಾಗಿ ಆದಷ್ಟು ಸಹಾಯ ಮಾಡಬೇಕು ಎಂದು ಅವರು ಹೇಳುತ್ತಾರೆ.

Published On - 10:54 am, Fri, 10 March 23

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us