ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಸ್ವಯಂಸೇವಕರು ತಯಾರಿಸಿದ ವಿಡಿಯೊ ಶೇರ್ ಮಾಡಿದ ಪ್ರಧಾನಿ ಮೋದಿ
ಅನಿಮೇಷನ್ ವಿಡಿಯೊ ಇದಾಗಿದ್ದು, ಮೋದಿಯವರು ಚೀತಾಗಳನ್ನು ಬಿಡುಗಡೆ ಮಾಡುವ ದೃಶ್ಯ ಮೊದಲಿಗೆ ಮೂಡಿಬರುತ್ತದೆ. ಯೇ ಸಂಕಲ್ಪ್ ಹೇ ಮೇರಾ,ಯೇ ಕರ್ತವ್ಯ ಹೇ ಮೇರಾ
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಹುಟ್ಟುಹಬ್ಬವನ್ನು ಸೇವಾ ಪಖವಾಡಾ ಎಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಸ್ವಯಂಸೇವಕರು ತಯಾರಿಸಿದ ವಿಡಿಯೊವೊಂದನ್ನು ಮೋದಿ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಯೇ ಕರ್ತವ್ಯ ಹೇ ಮೇರಾ (ಇದು ನನ್ನ ಕರ್ತವ್ಯ) ಎಂಬ ಬರಹದೊಂದಿಗೆ ಈ ವಿಡಿಯೊ ಆರಂಭವಾಗುತ್ತದೆ. ಅನಿಮೇಷನ್ ವಿಡಿಯೊ ಇದಾಗಿದ್ದು, ಮೋದಿಯವರು ಚೀತಾಗಳನ್ನು ಬಿಡುಗಡೆ ಮಾಡುವ ದೃಶ್ಯ ಮೊದಲಿಗೆ ಮೂಡಿಬರುತ್ತದೆ. ಯೇ ಸಂಕಲ್ಪ್ ಹೇ ಮೇರಾ,ಯೇ ಕರ್ತವ್ಯ ಹೇ ಮೇರಾ (ಇದು ನನ್ನ ಕನಸು,ಇದು ನನ್ನ ಗುರಿ) ಎಂಬ ಹಾಡಿನ ಸಾಲಿನೊಂದಿಗೆ ಮೋದಿಯವರ ನವ ಭಾರತದ ಕನಸುಗಳನ್ನು ಮತ್ತು ಕಾರ್ಯಗಳನ್ನು ಇದರಲ್ಲಿ ತೋರಿಸಲಾಗಿದೆ.
Here is an interesting video by some volunteers, on the occasion of PM’s birthday being observed as ‘Seva Pakhwada’, a fortnight of service activities.
A video that encapsulates the spirit of ‘Kartavya’ that PM Modi embodies.
Don’t miss it! pic.twitter.com/0AMr8GGAVh
— Modi Story (@themodistory) September 28, 2022
ಈ ವಿಡಿಯೊ ವನ್ನು ಟ್ವೀಟ್ ಮಾಡಿದ ಮೋದಿ ಕಲಾತ್ಮಕತೆಗೆ 100 ಅಂಕ. ಚೀತಾಗಳಿಂದ ಹಿಡಿದು ಸ್ವಚ್ಛ ಭಾರತದವರೆಗೆ ಎಲ್ಲವನ್ನೂ ನೀವು ಇದರಲ್ಲಿ ಹಿಡಿದಿಟ್ಟಿದ್ದೀರಿ ಎಂದು ವಿಡಿಯೊವನ್ನು ಮೆಚ್ಚಿದ್ದಾರೆ.
ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ಜಾರ್ಖಂಡ್‌ನ 1,898 ಬುಡಕಟ್ಟು ಮಹಿಳೆಯರಿಗೆ ಉದ್ಯೋಗ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಸಹಯೋಗದೊಂದಿಗೆ ಟಾಟಾ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಡೆಸಿದ ಉದ್ಯೋಗ ಅಭಿಯಾನದಲ್ಲಿ ಜಾರ್ಖಂಡ್‌ನ ಸುಮಾರು 1,900 ಬುಡಕಟ್ಟು ಮಹಿಳೆಯರಿಗೆ ಉದ್ಯೋಗ ನೀಡಲಾಗಿದೆ. ಸೆಪ್ಟೆಂಬರ್ 18 ಮತ್ತು 19 ರಂದು ಜಾರ್ಖಂಡ್‌ನ ಖುಂಟಿ, ಸಾರೈಕೆಲಾ, ಚೈಬಾಸಾ ಮತ್ತು ಸಿಮ್ಡೆಗಾ ಜಿಲ್ಲೆಗಳಲ್ಲಿ ಎರಡು ದಿನಗಳ ನೇಮಕಾತಿ ಅಭಿಯಾನವನ್ನು ಆಯೋಜಿಸಲಾಗಿದೆ. ತಮಿಳುನಾಡಿನ ಹೊಸೂರಿನಲ್ಲಿರುವ ಕಂಪನಿಯಲ್ಲಿ ಮಹಿಳೆಯರಿಗೆ ಉದ್ಯೋಗ ನೀಡಲಾಗುವುದು. ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಂದ 2,600 ಕ್ಕೂ ಹೆಚ್ಚು ಮಹಿಳೆಯರು ನೇಮಕಾತಿ ಅಭಿಯಾನದಲ್ಲಿ ಭಾಗವಹಿಸಿದ್ದು, ಅದರಲ್ಲಿ 1,898 ಮಂದಿ ಆಯ್ಕೆಯಾಗಿದ್ದಾರೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಯುವ ಬುಡಕಟ್ಟು ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಕೆಲಸ ಮಾಡಲು ಮತ್ತು ಅವರ ಕೌಶಲ್ಯಗಳನ್ನು ಸುಧಾರಿಸಲು ಅವಕಾಶಗಳನ್ನು ಒದಗಿಸಿದ ಟಾಟಾ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ಗೆ ಧನ್ಯವಾದಗಳು ಎಂದು ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಹೇಳಿದ್ದಾರೆ
ರಾಂಚಿಯಿಂದ ಹೊಸೂರಿಗೆ 822 ಬುಡಕಟ್ಟು ಮಹಿಳೆಯರ ಮೊದಲ ಬ್ಯಾಚ್ ಅನ್ನು ಹೊತ್ತೊಯ್ಯುವ ವಿಶೇಷ ರೈಲಿಗೆ ಮುಂಡಾ ಮಂಗಳವಾರ ಚಾಲನೆ ನೀಡಿದ್ದು ಉಳಿದ ಅಭ್ಯರ್ಥಿಗಳನ್ನು ಎರಡನೇ ಲಾಟ್‌ನಲ್ಲಿ ಕಳುಹಿಸಲಾಗುತ್ತದೆ.
ಟಾಟಾ ಕಮ್ಯುನಿಕೇಷನ್ ಲಿಮಿಟೆಡ್ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ತಂಡವು ರಾಂಚಿಯಲ್ಲಿ ಮೊಕ್ಕಾಂ ಹೂಡಿದ್ದು, ಈ ಬುಡಕಟ್ಟು ಮಹಿಳೆಯರ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದೆ. ಕಂಪನಿಯು ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಗದಿತ ವೇತನದೊಂದಿಗೆ ತರಬೇತಿ, ವಸತಿ, ಆಹಾರ, ವಸತಿ ಮತ್ತು ಸಾರಿಗೆಯನ್ನು ಖಚಿತಪಡಿಸುತ್ತದೆ.