AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

23 ವಯಸಿನ ಯುವತಿಯ ವರಿಸಿದ 6 ಹೆಣ್ಣು ಮಕ್ಕಳ ತಂದೆ 65 ವರ್ಷದ ವೃದ್ಧ! ಮದುವೆಗೆ ಸಾಕ್ಷಿಯಾದ ರಾಮ ಜನ್ಮಭೂಮಿ

ಎರಡೂ ಕುಟುಂಬಗಳ ಸದಸ್ಯರು ಮದುವೆ ಮೆರವಣಿಗೆಯಲ್ಲಿ ಹಾಡುಗಳಿಗೆ ನೃತ್ಯ ಮಾಡಿ ಸಂಭ್ರಮಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

23 ವಯಸಿನ ಯುವತಿಯ ವರಿಸಿದ 6 ಹೆಣ್ಣು ಮಕ್ಕಳ ತಂದೆ 65 ವರ್ಷದ ವೃದ್ಧ! ಮದುವೆಗೆ ಸಾಕ್ಷಿಯಾದ ರಾಮ ಜನ್ಮಭೂಮಿ
23 ವಯಸಿನ ಯುವತಿಯ ವರಿಸಿದ 6 ಹೆಣ್ಣು ಮಕ್ಕಳ ತಂದೆ 65 ವರ್ಷದ ವೃದ್ಧ
TV9 Web
| Edited By: |

Updated on:Feb 06, 2023 | 3:22 PM

Share

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ 6 ಹೆಣ್ಣು ಮಕ್ಕಳ ತಂದೆ, 65 ವರ್ಷದ ವೃದ್ಧ ತನಗಿಂತ 42 ವರ್ಷದ ಕಿರಿಯ ಯುವತಿಯನ್ನು ಮದುವೆಯಾಗಿದ್ದಾರೆ. ಭಾನುವಾರ ಇಲ್ಲಿಯ ಮಾ ಕಾಮಾಖ್ಯ ಧಾಮ ದೇವಸ್ಥಾನದಲ್ಲಿ 65 ವರ್ಷದ ವ್ಯಕ್ತಿ 23 ವರ್ಷದ ಯುವತಿಯನ್ನು ಮದುವೆಯಾಗಿದ್ದು ವ್ಯಕ್ತಿಗೆ ಇದು ಎರಡನೇ ಮದುವೆಯಾಗಿದೆ. ಹಾಗೂ ಯುವತಿಗೆ ಇದು ಮೊದಲ ಮದುವೆ.

ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ಒಪ್ಪಿಗೆಯೊಂದಿಗೆ ಹಿಂದೂ ಸಂಪ್ರದಾಯದಲ್ಲಿ ವಿವಾಹ ನಡೆದಿದೆ. ಎರಡೂ ಕುಟುಂಬಗಳ ಸದಸ್ಯರು ಮದುವೆ ಮೆರವಣಿಗೆಯಲ್ಲಿ ಹಾಡುಗಳಿಗೆ ನೃತ್ಯ ಮಾಡಿ ಸಂಭ್ರಮಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾರಾಬಂಕಿ ಜಿಲ್ಲೆಯ ಸುಬೇಹಾ ಪೊಲೀಸ್ ಠಾಣಾ ವ್ಯಾಪ್ತಿಯ ಹುಸೇನಾಬಾದ್ ಪುರಿ ಚೌಧರಿ ಗ್ರಾಮದ ನಿವಾಸಿಯಾಗಿರುವ ನಕ್‌ಛೇದ್ ಯಾದವ್ ಅವರು ತಮ್ಮ ವೃದ್ಧಾಪ್ಯದಲ್ಲೂ ಎರಡನೇ ಮದುವೆಯಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಯಾದವ್ ಅವರ ಮೊದಲ ಹೆಂಡತಿ ಸಾವನ್ನಪ್ಪಿದ್ದರು. ಹೀಗಾಗಿ ಯಾದವ್ ಒಂಟಿ ಜೀವನ ನಡೆಸುತ್ತಿದ್ದರು. 65 years old man marries 23 year old woman (1)

ಇದನ್ನೂ ಓದಿ: Viral News: ಒಂದೇ ವ್ಯಕ್ತಿಯನ್ನು ಮದುವೆಯಾದ ತ್ರಿವಳಿ ಸಹೋದರಿಯರು; ಕೀನ್ಯಾದಲ್ಲೊಂದು ವಿಚಿತ್ರ ವಿವಾಹ

ಸದ್ಯ ಅಯೋಧ್ಯೆ ಜಿಲ್ಲೆಯ ರುದೌಲಿ ಪ್ರದೇಶದಲ್ಲಿರುವ ಕಾಮಾಖ್ಯ ದೇವಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ವಿವಾಹ ನಡೆದಿದೆ. ವಧು ಮತ್ತು ಅವರ ಕುಟುಂಬ ಸದಸ್ಯರು ಡ್ಯಾನ್ಸ್ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಹೆಚ್ಚಿನ ಗಮನ ಸೆಳೆದಿದೆ. ಇನ್ನು 23 ವರ್ಷದ ಯುವತಿ ತನಗಿಂತ 42 ವರ್ಷ ಹಿರಿಯ ವ್ಯಕ್ತಿಯನ್ನು ವಿವಾಹವಾಗಿದ್ದು ಅನೇಕ ಸವಾಲುಗಳು ಎದುರಾಗಿವೆ. ಆದ್ರೆ ಈ ವಿವಾಹದಿಂದ ನನಗೆ ಯಾವುದೇ ಸಮಸ್ಯೆ ಇಲ್ಲ. ನನಗೆ ಖುಷಿ ಇದೆ. ಮದುವೆಗೆ ವಯಸ್ಸಿನ ಮಿತಿ ಇರುವುದಿಲ್ಲ ಎಂದು ಯುವತಿ ನಂದಿನಿ ಪ್ರತಿಕ್ರಿಯೆ ನೀಡಿದ್ದಾರೆ. ಅನೇಕರು ಈ ವಿವಾಹದ ಬಗ್ಗೆ ಕಾಮೆಂಟ್ ಮಾಡಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:22 pm, Mon, 6 February 23