ಪ್ರಕೃತಿಯಲ್ಲಿ ಮೂಡಿ ಬಂದ ತಿರಂಗಾ; ಸರ್ಕಾರ ಟ್ವೀಟ್ ಮಾಡಿದ ಫೋಟೊ ವೈರಲ್
ಅಮೃತ್ ಮಹೋತ್ಸವ್ ಎಂಬ ಟ್ವಿಟರ್ ಹ್ಯಾಂಡಲ್ನಲ್ಲಿ ಜೂನ್ 22ಕ್ಕೆ ಶೇರ್ ಆಗಿರುವ ಈ ಫೋಟೊ ಈಗ ವೈರಲ್ ಆಗಿದೆ.
ಪ್ರಕೃತಿಯಲ್ಲಿ ಮೂಡಿದ ಭಾರತದ ಧ್ವಜ ಎಂಬ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಕಡಲ ತೀರದಲ್ಲಿರುವ ಚಿಕ್ಕ ಹಸಿರು ಹುಲ್ಲು, ತೀರಕ್ಕೆ ಬಂದಪ್ಪಳಿಸಿದ ಅಲೆಯ ನೊರೆ, ಕೇಸರಿ ಬಣ್ಣಕ್ಕೆ ತಿರುಗಿರುವ ಆಗಸ..ಭಾರತದ ಧ್ವಜದಲ್ಲಿರುವ ಮೂರು ಬಣ್ಣಗಳಿವು. ಫೋಟೊ ಫ್ರೇಮ್ ನಂತೆ ಕಾಣುವ ಈ ಚಿತ್ರವನ್ನು ಕೇಂದ್ರ ಸರ್ಕಾರ ಟ್ವೀಟ್ ಮಾಡಿದೆ. ಅಮೃತ್ ಮಹೋತ್ಸವ್ (Amrit Mahotsav) ಎಂಬ ಟ್ವಿಟರ್ ಹ್ಯಾಂಡಲ್ನಲ್ಲಿ ಜೂನ್ 22ಕ್ಕೆ ಶೇರ್ ಆಗಿರುವ ಈ ಫೋಟೊ ಈಗ ವೈರಲ್ ಆಗಿದೆ. ನಮ್ಮ ಹೆಮ್ಮೆ, ಪ್ರಕೃತಿಯಲ್ಲಿ ತಿರಂಗಾ ಎಂದು ಆ ಟ್ವೀಟ್ ಗೆ ಶೀರ್ಷಿಕೆ ನೀಡಿದ್ದು ಫೋಟೊದ ಶೀರ್ಷಿಕೆ ತ್ರಿವರ್ಣ ಧ್ವಜವನ್ನು ಪ್ರದರ್ಶಿಸುತ್ತಿರುವ ಪ್ರಕೃತಿ ಎಂದಿದೆ.
Our pride, the tricolor in nature ❤️?? #AmritMahotsav #MomentsWithTiranga #HarGharTiranga #MainBharatHoon #IndiaAt75
IC: @singhsanjeevku2 pic.twitter.com/MXfpC64GBu
— Amrit Mahotsav (@AmritMahotsav) June 24, 2022
ದೇಶವು ಆಜಾದಿ ಕಾ ಅಮೃತ್ ಮಹೋತ್ಸವ್ ಆಚರಿಸುವ ತಯಾರಿಯಲ್ಲಿದ್ದು ಸ್ವಾತಂತ್ರ್ಯದ 75ನೇ ವರ್ಷದ ಸಾಧನೆ, ಸಂಸ್ಕೃತಿ ಮತ್ತು ಐತಿಹಾಸಿಕ ಕ್ಷಣಗಳನ್ನು ಕೊಂಡಾಡಲಿದೆ. ಆಜಾದಿ ಕಾ ಅಮೃತ್ ಮಹೋತ್ಸವ್ ಆಚರಣೆ ಮಾರ್ಚ್ 12,2021ರಲ್ಲಿ ಆರಂಭವಾಗಿತ್ತು.
Published On - 5:08 pm, Tue, 12 July 22