ನವೀನ್ ಜಿಂದಾಲ್ ಬಿಜೆಪಿಗೆ ಸೇರ್ತಾರಾ, ಅನುಮಾನ ಹುಟ್ಟುಹಾಕಿದ ಜಾಹೀರಾತು

|

Updated on: Feb 09, 2024 | 2:30 PM

ಕುರುಕ್ಷೇತ್ರದ ಕಾಂಗ್ರೆಸ್ ಮಾಜಿ ಸಂಸದ, ಅತಿದೊಡ್ಡ ಕೈಗಾರಿಕೋದ್ಯಮಿ ನವೀನ್ ಜಿಂದಾಲ್ ಮತ್ತು ಅವರ ತಾಯಿ, ಹರಿಯಾಣದ ಮಾಜಿ ಕ್ಯಾಬಿನೆಟ್ ಸಚಿವೆ ಮತ್ತು ಕಾಂಗ್ರೆಸ್ ನಾಯಕಿ ಸಾವಿತ್ರಿ ಜಿಂದಾಲ್ ಅವರು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳು ದಟ್ಟವಾಗಿವೆ. ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿ, ಜಿಂದಾಲ್ ಗ್ರೂಪ್ ಮತ್ತು ಜಿಂದಾಲ್ ಕುಟುಂಬದ ಪರವಾಗಿ ಪತ್ರಿಕೆಗಳಲ್ಲಿ ಧನ್ಯವಾದ ಸಲ್ಲಿಸಿದ ಬೃಹತ್ ಜಾಹೀರಾತು ಎಲ್ಲೆಡೆ ವೈರಲ್ ಆಗುತ್ತಿದೆ.

ನವೀನ್ ಜಿಂದಾಲ್ ಬಿಜೆಪಿಗೆ ಸೇರ್ತಾರಾ, ಅನುಮಾನ ಹುಟ್ಟುಹಾಕಿದ ಜಾಹೀರಾತು
ನವೀನ್ ಜಿಂದಾಲ್
Image Credit source: TV9 Bharatvarsh
Follow us on

ಪ್ರಮುಖ ಬೆಳವಣಿಗೆಯೊಂದರಲ್ಲಿ ದೇಶದ ಮುಂಚೂಣಿಯಲ್ಲಿರುವ ಕೈಗಾರಿಕಾ ಸಂಸ್ಥೆಗಳಲ್ಲಿ ಒಂದಾದ ಜಿಂದಾಲ್(Jindal) ಕುಟುಂಬ ಸದಸ್ಯರೊಬ್ಬರು ಬಿಜೆಪಿ ಸೇರಲು ಸಜ್ಜಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸದ್ಯ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಕುರುಕ್ಷೇತ್ರದ  ಮಾಜಿ ಸಂಸದ, ದೇಶದ ಅತಿದೊಡ್ಡ ಕೈಗಾರಿಕೋದ್ಯಮಿ ನವೀನ್ ಜಿಂದಾಲ್(Naveen Jindal) ಮತ್ತು ಅವರ ತಾಯಿ, ಹರಿಯಾಣದ ಮಾಜಿ ಕ್ಯಾಬಿನೆಟ್ ಸಚಿವೆ ಮತ್ತು ಕಾಂಗ್ರೆಸ್ ನಾಯಕಿ ಸಾವಿತ್ರಿ ಜಿಂದಾಲ್ ಅವರು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳು ತೀವ್ರಗೊಂಡಿವೆ.

ಜಿಂದಾಲ್ ಗ್ರೂಪ್ ಮತ್ತು ಸಾವಿತ್ರಿ ಜಿಂದಾಲ್ ಪತ್ರಿಕೆಗಳಲ್ಲಿ ನೀಡಿದ ಜಾಹೀರಾತಿನ ನಂತರ ತಾಯಿ ಮತ್ತು ಮಗ ಇಬ್ಬರೂ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳು ಹೆಚ್ಚಿವೆ. ನವೀನ್ ಜಿಂದಾಲ್ ಕುರುಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಬಹುದು ಎಂಬ ವರದಿಗಳಿವೆ.

ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳುವ ಜಾಹೀರಾತು
ವಾಸ್ತವವಾಗಿ, ಜಿಂದಾಲ್ ಫ್ಯಾಮಿಲಿ ಟ್ರಸ್ಟ್ ಹಿಸಾರ್‌ನಲ್ಲಿ ಮಹಾರಾಜ್ ಅಗ್ರಸೇನ್ ವೈದ್ಯಕೀಯ ಸಂಸ್ಥೆಯನ್ನು ನಡೆಸುತ್ತಿದೆ.
ಇತ್ತೀಚೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗದ ವರದಿಯಲ್ಲಿ ಉತ್ತರ ಭಾರತದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಇದಕ್ಕೆ ಕೇಂದ್ರ ಸರ್ಕಾರಕ್ಕೆ ಜಿಂದಾಲ್ ಗ್ರೂಪ್ ಮತ್ತು ಜಿಂದಾಲ್ ಕುಟುಂಬದ ಪರವಾಗಿ ಧನ್ಯವಾದ ಅರ್ಪಿಸುತ್ತಾ, ಪ್ರಧಾನಿ ನರೇಂದ್ರ ಮೋದಿ, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಇರುವ ಬಿಗ್ ಧನ್ಯವಾದ ಜಾಹೀರಾತುಗಳನ್ನು ಆರೋಗ್ಯ ಸಚಿವ ಅನಿಲ್ ವಿಜ್ ಅವರ ಚಿತ್ರದೊಂದಿಗೆ ನೀಡಲಾಗಿದೆ.

ಮತ್ತಷ್ಟು ಓದಿ: ಬಿಹಾರ: ಲಾಲು ಪ್ರಸಾದ್ ಯಾದವ್ ಸೊಸೆ ರಾಜಶ್ರೀ ರಾಜಕೀಯಕ್ಕೆ ಎಂಟ್ರಿ, ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧೆ

ನವೀನ್ ಜಿಂದಾಲ್ ಮತ್ತು ಅವರ ತಾಯಿ ಸಾವಿತ್ರಿ ಜಿಂದಾಲ್ ಬಿಜೆಪಿ ಸೇರಬಹುದು ಎಂಬ ಊಹಾಪೋಹಗಳು ಪ್ರಾರಂಭವಾದವು. ಕೆಲ ದಿನಗಳ ಹಿಂದೆ ಕಾಂಗ್ರೆಸ್‌ನಲ್ಲಿ ಏಕಾಂಗಿಯಾಗಿದ್ದ ನವೀನ್ ಜಿಂದಾಲ್ ಅವರು ಬಿಜೆಪಿ ಹೈಕಮಾಂಡ್‌ನ ಹಿರಿಯ ನಾಯಕರ ಜೊತೆ ಸಭೆ ನಡೆಸಿದ್ದರು ಎಂಬ ವರದಿಗಳು ಬಂದಿದ್ದವು. ಆದರೆ, ಈ ಸುದ್ದಿಗಳನ್ನು ಬಿಜೆಪಿ ಅಥವಾ ನವೀನ್ ಜಿಂದಾಲ್ ಖಚಿತಪಡಿಸಿಲ್ಲ. ಆದರೆ ಪ್ರಸ್ತುತ ಬದಲಾಗುತ್ತಿರುವ ರಾಜಕೀಯ ಸಮೀಕರಣದಲ್ಲಿ ಏನು ಬೇಕಾದರೂ ಸಾಧ್ಯ.

ನವೀನ್ ಜಿಂದಾಲ್ ಕುರುಕ್ಷೇತ್ರದಿಂದ ಬಿಜೆಪಿ ಸ್ಪರ್ಧಿಸಬಹುದು ಎಂಬ ಗುಸುಗುಸು ಅವರ ರಾಜಕೀಯ ನಡೆಯ ಸುತ್ತಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:27 pm, Fri, 9 February 24