AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NBF: ರಾಷ್ಟ್ರೀಯ ಸುದ್ದಿ ಪ್ರಸಾರಕರಿಂದ ಬಾರ್ಕ್​ ಪುನರಾರಂಭಿಸಿಲು ಕೇಂದ್ರಕ್ಕೆ ಮನವಿ

ರಾಷ್ಟ್ರೀಯ ಸುದ್ದಿ ಪ್ರಸಾರಕರ ಒಕ್ಕೂಟವು(NBF) ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿಯಾಗಿ ಬಾರ್ಕ್ ರೇಟಿಂಗ್ ಅನ್ನು ಮತ್ತೆ ಪ್ರಾರಂಭಗೊಳಿಸಬೇಕು ಎಂದು ಮನವಿ ಮಾಡಿದೆ.

NBF: ರಾಷ್ಟ್ರೀಯ ಸುದ್ದಿ ಪ್ರಸಾರಕರಿಂದ ಬಾರ್ಕ್​ ಪುನರಾರಂಭಿಸಿಲು ಕೇಂದ್ರಕ್ಕೆ ಮನವಿ
NBFನ ಆಡಳಿತ ಮಂಡಳಿ ಹಾಗೂ ಹಿರಿಯ ಸದಸ್ಯರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿಯಾದ ಸಂದರ್ಭದ ಚಿತ್ರ
Follow us
TV9 Web
| Updated By: shivaprasad.hs

Updated on:Aug 18, 2021 | 2:59 PM

ಆಗಸ್ಟ್ 18, ನವದೆಹಲಿ: ರಾಷ್ಟ್ರೀಯ ಸುದ್ದಿ ಪ್ರಸಾರಕರ ಒಕ್ಕೂಟದ(NBF) ಆಡಳಿತ ಮಂಡಳಿ ಹಾಗೂ ಹಿರಿಯ ಸದಸ್ಯರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವ ಅನುರಾಗ್ ಠಾಕೂರ್ ಅವರನ್ನು ಮಂಗಳವಾರ ಭೇಟಿಯಾದರು. ಈ ಸಂದರ್ಭದಲ್ಲಿ ಪ್ರಸ್ತುತ ಸುದ್ದಿ ಪ್ರಸಾರ ಮಾಧ್ಯಮಗಳ ಬೆಳವಣಿಗೆ ಹಾಗೂ ಅವುಗಳು ಎದುರಿಸುತ್ತಿರುವ ಸವಾಲುಗಳನ್ನು ಚರ್ಚಿಸಲಾಯಿತು. ಇತ್ತೀಚೆಗೆ ಏಕಪಕ್ಷೀಯ ನಿರ್ಧಾರದ ಮೂಲಕ ನಿಲ್ಲಿಸಲಾಗಿದ್ದ ಚಾನಲ್​ಗಳ ವೀಕ್ಷಕ ರೇಟಿಂಗ್ ಪದ್ಧತಿಯನ್ನು ಪುನರಾರಂಭಗೊಳಿಸುವಂತೆ ಮನವಿ ಸಲ್ಲಿಸಲಾಯಿತು. ಹಾಗೂ ರೇಟಿಂಗ್ ನೀಡುವ ಪದ್ಧತಿ ನಿಂತ ಕಾರಣ, ಚಾನಲ್​ಗಳು ಅನುಭವಿಸುತ್ತಿರುವ ಕಷ್ಟಗಳನ್ನು ಹಾಗೂ ಅವುಗಳ ಬೆಳವಣಿಗೆಗೆ ತೊಡಕಾಗಿರುವ ಅಂಶಗಳನ್ನು ಮಾತುಕತೆಯಲ್ಲಿ ಚರ್ಚಿಸಲಾಯಿತು.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಮಾತನಾಡಿ, ‘‘ಅರ್ನಾಬ್ ಗೋಸ್ವಾಮಿ ನೇತೃತ್ವದ ಎನ್​ಬಿಎಫ್ ಆಡಳಿತ ಮಂಡಳಿಯನ್ನು ಭೇಟಿಯಾಗಿ ಚರ್ಚಿಸಿರುವುದು ಖುಷಿಯ ವಿಚಾರ. ಮಾತುಕತೆಯಲ್ಲಿ ಉತ್ತಮ ವಿಚಾರಗಳ ವಿನಿಮಯವಾಗಿದ್ದು, ಎನ್​ಬಿಎಫ್ ಜೊತೆ ಸುದ್ದಿ ಮಾಧ್ಯಮಗಳ ಬೆಳವಣಿಗೆಯ ವಿಚಾರವಾಗಿ ಮತ್ತಷ್ಟು ಚರ್ಚಿಸಲು ಹಾಗೂ ಸುದ್ದಿ ಮಾಧ್ಯಮಗಳ ಮುಖಾಂತರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಕಾತರನಾಗಿದ್ದೇನೆ’’ ಎಂದರು.

ಎನ್​ಬಿಎಫ್​ನ(NBF) ಸ್ಥಾಪಕ ನಿರ್ದೇಶಕ ಅರ್ನಾಬ್ ಗೋಸ್ವಾಮಿ ಮಾತನಾಡಿ, ‘‘ಭಾರತದ ಮಟ್ಟದಲ್ಲಿ ಒಂದು ಸಶಕ್ತ ಸುದ್ದಿ ಪ್ರಸಾರಕರ ಒಕ್ಕೂಟವನ್ನು ಕಟ್ಟುವುದರ ಹಿಂದಿನ ಅವಶ್ಯಕತೆಯನ್ನು ಸಚಿವರಿಗೆ ತಿಳಿಸಲು ಒಂದು ಉತ್ತಮ ಅವಕಾಶ ಒದಗಿತು. ಸಚಿವರೂ ಕೂಡ ಆಡಳಿತ ಮಂಡಳಿಯ ವಿಚಾರಗಳನ್ನು ಆಲಿಸಿದ್ದು, ಸುದ್ದಿ ಪ್ರಸಾರದ ಮಾಧ್ಯಮವನ್ನು ಮತ್ತಷ್ಟು ಶಕ್ತಗೊಳಿಸಲು ಸಚಿವಾಲಯದೊಂದಿಗೆ ಕೈಜೋಡಿಸಲು ಎದುರುನೋಡುತ್ತಿದ್ದೇವೆ’’ ಎಂದು ನುಡಿದರು. ಎನ್​ಬಿಎಫ್​ನ ಆಡಳಿತ ಮಂಡಳಿಯು ಒಕ್ಕೂಟಕ್ಕೆ ಪ್ರಾದೇಶಿಕ ಭಾಷೆಗಳಲ್ಲೂ ಸದಸ್ಯರಿರುವುದನ್ನು ಮತ್ತು ಒಕ್ಕೂಟದ ಚಾನಲ್​ಗಳು ಸ್ವಯಂ ನಿರ್ಬಂಧದ ಮೂಲಕ ಕಾರ್ಯನಿರ್ವಹಸಲಿವೆ ಎಂಬುದನ್ನು ಇದೇ ವೇಳೆ ತಿಳಿಸಲಾಯಿತು.

ಟಿವಿ9 ಸಮೂಹ ಸಂಸ್ಥೆಗಳ ಸಿಇಒ ಹಾಗೂ ಎನ್​ಬಿಎಫ್​ನ ಉಪಾಧ್ಯಕ್ಷ ಬರುಣ್ ದಾಸ್ ಎನ್​ಬಿಎಫ್​ನ ಭಾಗವಾಗಿ ಸಚಿವರನ್ನು ಭೇಟಿಯಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು. ಬಾರ್ಕ್ ರೇಟಿಂಗ್​ನ ಮಹತ್ವ ತಿಳಿಸಿದ ಅವರು, ‘‘ಹೆಚ್ಚು ಸ್ಪರ್ಧಾತ್ಮಕತೆ ಇರುವ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ಮಾನದಂಡಗಳು ಅವಶ್ಯವಾಗಿ ಬೇಕು. ಇಂದು ಸಚಿವರ ಭೇಟಿಯ ನಂತರ ನಾವು ಆಶಾದಾಯಕವಾಗಿದ್ದೇವೆ’’ ಎಂದು ಹೇಳಿದರು. ಈ ಭೇಟಿಯಲ್ಲಿ ಎನ್​ಬಿಎಫ್ ರೇಟಿಂಗ್​ಅನ್ನು ಬಿಡುಗಡೆ ಮಾಡುವುದು ಏಕೆ ಮುಖ್ಯವೆಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದೆ.

ಸಚಿವರನ್ನು ಭೇಟಿಯಾದ ಆಡಳಿತ ಮಂಡಳಿಯಲ್ಲಿ ರಿಪಬ್ಲಿಕ್ ಮಿಡಿಯಾ ನೆಟ್​ವರ್ಕ್​ನ ಸಂಪಾದಕ ಅರ್ನಾಬ್ ಗೋಸ್ವಾಮಿ, ಟಿವಿ9 ಗ್ರೂಪ್​ನ ಸಿಇಒ ಬರುಣ್ ದಾಸ್, ಪ್ರಾಗ್ ನ್ಯೂಸ್ನ ಸ್ಥಾಪಕ ನಿರ್ದೇಶಕ ಸಂಜೀವ್ ನರೈನ್, ಪ್ರೈಡ್ ಈಸ್ಟ್ ಎಂಟರ್​ಟೈನ್​ಮೆಂಟ್​ನ ನಿರ್ದೇಶಕ ರಿನಿಕಿ ಭೂಯಾನ್, ಐಟಿವಿ ನೆಟ್​ವರ್ಕ್​ನ ಸ್ಥಾಪಕ ಕಾರ್ತಿಕೇಯ ಶರ್ಮಾ, ಫೋರ್ಥ್ ಡೈಮೆನ್ಶನ್​ನ ಸಿಇಒ ಶಂಕರ್ ಬಾಲ, ಟಿವಿ9 ಭಾರತ ವರ್ಷದ ಸುದ್ದಿ ನಿರ್ದೇಶಕ ಹೇಮಂತ್ ಶರ್ಮಾ, ನ್ಯೂಸ್ ನೇಷನ್​ನ ಸಂಪಾದಕ ಮನೋಜ್ ಗೈರೋಲಾ, MHOneನ ಮುಖ್ಯಸ್ಥ ಮಹೇಂದ್ರ ಬಾಟ್ಲಾ, ನ್ಯೂಸ್ ಫರ್ಸ್ಟ್​ನ ಬ್ಯುಸಿನೆಸ್ ಹೆಡ್ ದಿವಾಕರ್.ಎಸ್., NBFನ ಕಾರ್ಯದರ್ಶಿ ಜೈ ಕೃಷ್ಣ ಹಾಗೂ NBFನ ಪಾಲಿಸಿ ಮತ್ತು ರೆಗ್ಯುಲೇಷನ್​ನ ಸದಸ್ಯೆ ಇಶಿತಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

(NBF meets I&B Minister Anurag Thakur, requests quick restoration of BARC ratings)

Published On - 1:56 pm, Wed, 18 August 21

ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹೊಸಪೇಟೆಯಿಂದ ಬೆಂಗಳೂರಿಗೆ ವಾಪಸ್ಸು ಹೋಗುತ್ತಿದ್ದೇನೆ: ಶಿವಕುಮಾರ್
ಹೊಸಪೇಟೆಯಿಂದ ಬೆಂಗಳೂರಿಗೆ ವಾಪಸ್ಸು ಹೋಗುತ್ತಿದ್ದೇನೆ: ಶಿವಕುಮಾರ್