ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿರುವ ನಟಿ ಕಂಗನಾ ರಣಾವತ್(Kangana Ranaut) ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೆಟ್ ಅವರ ಸಂಕಷ್ಟ ಹೆಚ್ಚುತ್ತಿದೆ. ಈ ವಿಚಾರದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು ಅವಹೇಳನಕಾರಿ ಹೇಳಿಕೆಗಳಿಗಾಗಿ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೆಟ್ ಮತ್ತು ಪಕ್ಷದ ಮುಖಂಡ ಎಚ್‌ಎಸ್ ಅಹಿರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.
ರಾಷ್ಟ್ರೀಯ ಮಹಿಳಾ ಆಯೋಗ (NCW) ಪೋಸ್ಟ್‌ನಲ್ಲಿ ತಿಳಿಸಿದೆ, ಕಂಗನಾ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅಸಭ್ಯ ಮತ್ತು ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ ಅಹಿರ್ ಅವರ ಅಗೌರವದ ನಡವಳಿಕೆಯಿಂದ ಆಘಾತಕ್ಕೊಳಗಾಗಿದ್ದಾರೆ.
ಇಂತಹ ನಡವಳಿಕೆಯು ಅಸಹನೀಯ ಮತ್ತು ಮಹಿಳೆಯರ ಘನತೆಗೆ ವಿರುದ್ಧವಾಗಿದೆ ಶರ್ಮರೇಖಾ ಅವರು ಭಾರತದ ಚುನಾವಣಾ ಆಯುಕ್ತರಿಗೆ ಪತ್ರವನ್ನು ಕಳುಹಿಸಿದ್ದು, ಅವರ ವಿರುದ್ಧ ತಕ್ಷಣ ಮತ್ತು ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಎಲ್ಲಾ ಮಹಿಳೆಯರ ಬಗ್ಗೆ ಗೌರವ ಮತ್ತು ಘನತೆಯನ್ನು ಕಾಪಾಡಿಕೊಳ್ಳೋಣ ಎಂದು ಬರೆದಿದ್ದಾರೆ.
ಕಾಂಗ್ರೆಸ್ ಸೋಷಿಯಲ್ ಮೀಡಿಯಾವನ್ನು ನಿಭಾಯಿಸುತ್ತಿರುವ ಸುಪ್ರಿಯಾ ಇನ್‌ಸ್ಟಾಗ್ರಾಂ ಹ್ಯಾಂಡಲ್‌ನಿಂದ ಪೋಸ್ಟ್ ಮಾಡಿದ ನಂತರ ವಿವಾದ ಹುಟ್ಟಿಕೊಂಡಿದೆ. ಮುಂಬರುವ ಲೋಕಸಭೆ ಚುನಾವಣೆಗೆ ಕಂಗನಾ ರಣಾವತ್ ಅಭ್ಯರ್ಥಿಯಾಗಿರುವ ಬಗ್ಗೆ ಟೀಕಿಸಿದ್ದರು.
ಮತ್ತಷ್ಟು ಓದಿ: ಏನಿದೆ ರೇಟ್? ಎಂದು ಕಂಗನಾ ಫೋಟೊ ಪೋಸ್ಟ್ ಮಾಡಿ ಅವಮಾನಿಸಿದ ಸುಪ್ರಿಯಾ ಶ್ರಿನೇಟ್; ಅಕೌಂಟ್ ಹ್ಯಾಕ್ ಎಂದು ಸಬೂಬು
ಕಂಗನಾ ಉತ್ತರವೇನಿತ್ತು?
ಪ್ರತಿಕ್ರಿಯೆಯಾಗಿ, ಕಂಗನಾ ರಣಾವತ್ ತಮ್ಮ ಪೋಸ್ಟ್‌ನಲ್ಲಿ, ಸುಪ್ರಿಯಾ ಅವರೇ, ಕಲಾವಿದೆಯಾಗಿ ನನ್ನ ವೃತ್ತಿಜೀವನದ ಕಳೆದ 20 ವರ್ಷಗಳಲ್ಲಿ, ನಾನು ಎಲ್ಲಾ ರೀತಿಯ ಮಹಿಳೆಯರ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಕ್ವೀನ್‌ನಲ್ಲಿನ ಮುಗ್ಧ ಹುಡುಗಿಯಿಂದ ಢಾಕಾಡ್‌ನ ಪತ್ತೇದಾರಿಯವರೆಗೆ, ಮಣಿಕರ್ಣಿಕಾದಲ್ಲಿ ದೇವತೆಯಿಂದ ಚಂದ್ರಮುಖಿಯಲ್ಲಿ ರಾಕ್ಷಸನವರೆಗೆ, ರಜ್ಜೋದಲ್ಲಿ ವೇಶ್ಯೆಯಿಂದ ತಲೈವಿಯಲ್ಲಿ ಕ್ರಾಂತಿಕಾರಿ ನಾಯಕಿವರೆಗೆ ಎಲ್ಲವನ್ನೂ ನಿಭಾಯಿಸಿದ್ದೇನೆ ಎಂದಿದ್ದಾರೆ.
ಸುಪ್ರಿಯಾ ಸ್ಪಷ್ಟನೆ ಏನು?
ಈ ವಿವಾದದ ಬಗ್ಗೆ ಸುಪ್ರಿಯಾ ಸ್ಪಷ್ಟನೆ ನೀಡಿದ್ದಾರೆ, ಹಾಗೂ ಆ ಪೋಸ್ಟ್ ಅನ್ನು ನಾನು ಮಾಡಿಲ್ಲ, ಖಾತೆಯಿಂದ ಯಾರೋ ಮಾಡಿದ್ದಾರೆ, ಅದನ್ನು ಡಿಲೀಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ನನ್ನನ್ನು ತಿಳಿದಿರುವ ಯಾರಿಗಾದರೂ ನಾನು ಯಾವುದೇ ಮಹಿಳೆಯ ಬಗ್ಗೆ ವೈಯಕ್ತಿಕ ಮತ್ತು ಅಸಭ್ಯವಾಗಿ ಕಾಮೆಂಟ್ ಮಾಡಲು ಸಾಧ್ಯವಿಲ್ಲ ಎಂದು ಚೆನ್ನಾಗಿ ತಿಳಿದಿದೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ