ಎನ್‌ಡಿಎ ಸರ್ಕಾರದಿಂದ ಬಿಹಾರದಲ್ಲಿ ಹಿಂದೂ-ಮುಸ್ಲಿಂ ಗಲಭೆ ಅಂತ್ಯವಾಗಿದೆ; ಸಿಎಂ ನಿತೀಶ್ ಕುಮಾರ್

ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸತತ ಐದನೇ ಅವಧಿಗೆ ಅಧಿಕಾರ ವಹಿಸಿಕೊಳ್ಳಲು ಬಯಸುತ್ತಿರುವ ಬಿಹಾರದಲ್ಲಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿರುವ ನಿತೀಶ್ ಕುಮಾರ್ ಇಂದು ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ್ದಾರೆ. ಈ ವೇಳೆ ಅವರು ಎನ್ ಡಿಎ ಸರ್ಕಾರದ ಸಾಧನೆಯ ಬಗ್ಗೆ ಮಾತನಾಡಿದ್ದಾರೆ.

ಎನ್‌ಡಿಎ ಸರ್ಕಾರದಿಂದ ಬಿಹಾರದಲ್ಲಿ ಹಿಂದೂ-ಮುಸ್ಲಿಂ ಗಲಭೆ ಅಂತ್ಯವಾಗಿದೆ; ಸಿಎಂ ನಿತೀಶ್ ಕುಮಾರ್
Nitish Kumar

Updated on: Mar 04, 2025 | 9:06 PM

ಪಾಟ್ನಾ (ಮಾರ್ಚ್ 4): ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು ತಮ್ಮ ನೇತೃತ್ವದ ಎನ್‌ಡಿಎ ಸರ್ಕಾರವು ಸ್ಮಶಾನಗಳಿಗೆ ಬೇಲಿ ಹಾಕುವುದು ಮತ್ತು ಕೋಮು ಗಲಭೆಗಳಲ್ಲಿ ಹೆಸರಿಸಲಾದವರನ್ನು ನ್ಯಾಯಕ್ಕೆ ಒಳಪಡಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ರಾಜ್ಯದಲ್ಲಿ ಆಗಾಗ ನಡೆಯುತ್ತಿದ್ದ ಹಿಂದೂ-ಮುಸ್ಲಿಂ ಘರ್ಷಣೆಗಳನ್ನು ಕೊನೆಗೊಳಿಸಿದೆ ಎಂದು ಹೇಳಿಕೊಂಡಿದ್ದಾರೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸತತ ಐದನೇ ಅವಧಿಗೆ ಅಧಿಕಾರ ವಹಿಸಿಕೊಳ್ಳಲು ಬಯಸುತ್ತಿರುವ ಬಿಹಾರದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿರುವ ನಿತೀಶ್ ಕುಮಾರ್ ಇಂದು ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ್ದಾರೆ.

“ನಾವು 2005ರಲ್ಲಿ ಅಧಿಕಾರಕ್ಕೆ ಬರುವ ಮೊದಲು ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ತುಂಬ ಶೋಚನೀಯವಾಗಿತ್ತು. ಜನರು ಸಂಜೆಯ ನಂತರ ತಮ್ಮ ಮನೆಗಳಿಂದ ಹೊರಗೆ ಹೋಗಲು ಹೆದರುತ್ತಿದ್ದರು. ಕೆಟ್ಟ ರಸ್ತೆಗಳಿಂದ ಪ್ರಯಾಣ ಕಷ್ಟಕರವಾಗಿತ್ತು” ಎಂದು ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಹೇಳಿದ್ದಾರೆ. ಈ ಹೇಳಿಕೆಗೆ ವಿರೋಧ ಪಕ್ಷದ ಸದಸ್ಯರು ಕೋಪದಿಂದ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಇದಕ್ಕೆ ಕೋಪಗೊಂಡ ನಿತೀಶ್ ಕುಮಾರ್, “ನೀವು ಮಕ್ಕಳು. ಆಗ ಪರಿಸ್ಥಿತಿ ಹೇಗಿತ್ತು ಎಂದು ನಿಮಗೆ ತಿಳಿದಿದೆಯೇ?” ಎಂದು ಗದರಿದ್ದಾರೆ.

ಇದನ್ನೂ ಓದಿ: ನಿಮಗೆ ಬಾಗಿಲು ತೆರೆದಿದೆ ಎಂದ ಲಾಲು ಯಾದವ್​ಗೆ ನಿತೀಶ್ ಕುಮಾರ್‌ ಹೇಳಿದ್ದೇನು?

ತಮ್ಮ ವೃತ್ತಿಜೀವನದ ಬಹುಪಾಲು ಸಮಯ ಬಿಜೆಪಿ ಮಿತ್ರಪಕ್ಷವಾಗಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಪರೋಕ್ಷವಾಗಿ ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಕೂಟವನ್ನು ಟೀಕಿಸಿದ್ದಾರೆ. “ಹಿಂದೆ ಬಿಹಾರ ರಾಜ್ಯವು ಯಾವಾಗಲೂ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಘರ್ಷಣೆಗಳಿಂದ ತುಂಬಿತ್ತು. ಮುಸ್ಲಿಂ ಮತಗಳನ್ನು ಪಡೆಯುತ್ತಿದ್ದವರಿಗೆ ಇದನ್ನು ಎಂದಿಗೂ ಕೊನೆಗೊಳಿಸಲು ಸಾಧ್ಯವಾಗಲಿಲ್ಲ. ನಾನು ಅಧಿಕಾರ ವಹಿಸಿಕೊಂಡಾಗ ಸ್ಮಶಾನಗಳಿಗೆ (ಕಬ್ರಿಸ್ತಾನ್) ಮೀಸಲಾದ ಭೂಮಿಯ ವಿವಾದಗಳನ್ನು ಮೊದಲು ಬಗೆಹರಿಸಿದೆ” ಎಂದು ಹೇಳಿದ್ದಾರೆ.


ಆದ್ದರಿಂದ, ಸಾವಿರಾರು ಸ್ಮಶಾನಗಳಿಗೆ ಬೇಲಿ ಹಾಕಲಾಯಿತು. ಸರ್ಕಾರವು ಅದರ ಸಂಪೂರ್ಣ ವೆಚ್ಚವನ್ನು ಭರಿಸಿತು. 1989ರ ಭಾಗಲ್ಪುರ ಗಲಭೆಯಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ ಎಲ್ಲರನ್ನು ಸರ್ಕಾರ ಬಂಧಿಸಿತು. ಹಿಂದೂ-ಮುಸ್ಲಿಂ ಘರ್ಷಣೆಗಳನ್ನು ಸರ್ಕಾರ ಕೊನೆಗೊಳಿಸಿತು ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ