ನೀವು ಎಲ್ಲಾ ವಿಷಯಗಳನ್ನು ನಿಧಾನವಾಗಿ ಅರಿತುಕೊಳ್ಳುವಿರಿ: ಬಿಹಾರ ಸಿಎಂ ನಿತೀಶ್ ಕುಮಾರ್
ಬಿಹಾರದ ವಿಶೇಷ ಸ್ಥಾನಮಾನದ ವಿನಂತಿಯನ್ನು ಕೇಂದ್ರ ಸರ್ಕಾರವು ತಿರಸ್ಕರಿಸಿದರೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2024 ರ ಮಂಡನೆಯಲ್ಲಿ ರಾಜ್ಯಕ್ಕೆ ಪ್ರಮುಖ ಹಣಕಾಸಿನ ನೆರವು ಘೋಷಿಸಿದರು. "ಬಿಹಾರದ ವಿವಿಧ ರಸ್ತೆ ಯೋಜನೆಗಳಿಗಾಗಿ ಸರ್ಕಾರವು ₹ 26,000 ಕೋಟಿಗಳನ್ನು ಪ್ರಸ್ತಾಪಿಸುತ್ತದೆ" ಎಂದು ಸಚಿವರು ಹೇಳಿದ್ದಾರೆ.

ದೆಹಲಿ ಜುಲೈ 23: ಬಿಹಾರಕ್ಕೆ (Bihar) ವಿಶೇಷ ಸ್ಥಾನಮಾನ ನೀಡುವ ಬೇಡಿಕೆ ನಿರಾಕರಿಸಿದ ನರೇಂದ್ರ ಮೋದಿ (Narendra modi) ಸರ್ಕಾರದ ನಿರ್ಧಾರ ಬಗ್ಗೆ ಬಿಹಾರ ಮುಖ್ಯಮಂತ್ರಿ ಮತ್ತು ಜನತಾ ದಳ (ಯುನೈಟೆಡ್) ಮುಖ್ಯಸ್ಥ ನಿತೀಶ್ ಕುಮಾರ್ (Nitish Kumar) ಪ್ರತಿಕ್ರಿಯಿಸಿದ್ದಾರೆ. 12 ಲೋಕಸಭಾ ಸಂಸದರನ್ನು ಹೊಂದಿರುವ ಜೆಡಿಯು (ಯು) ಕೇಂದ್ರದಲ್ಲಿ ಆಡಳಿತಾರೂಢ ಎನ್‌ಡಿಎಯ ಪ್ರಮುಖ ಮಿತ್ರ ಪಕ್ಷವಾಗಿರುವ ನಿತೀಶ್ ಕುಮಾರ್ ಅವರಲ್ಲಿ ಕೇಂದ್ರ ಸರ್ಕಾರದ ಹೇಳಿಕೆಯ ಬಗ್ಗೆ ಕೇಳಲಾಯಿತು. ಬಿಹಾರ ಅಸೆಂಬ್ಲಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಕುಮಾರ್, “ನೀವು ಎಲ್ಲಾ ವಿಷಯಗಳನ್ನು ನಿಧಾನವಾಗಿ ಅರಿತುಕೊಳ್ಳುವಿರಿ (ಸಬ್ ಕುಛ್ ಧೀರೇ ಧೀರೇ ಜಾನ್ ಜಾಯೇಂಗೇ) ಎಂದು ಹೇಳಿದ್ದಾರೆ.
ತಾವು ಹೇಳಲಿರುವ ಮಾತುಗಳನ್ನು ನೇರಾನೇರವಾಗಿ ಹೇಳದೆ ಬೇರೆಯೇ ಅರ್ಥ ಬರುವಂತೆ ಮಾತನಾಡಿದ ನಂತರ ಸುದ್ದಿಗಾರರತ್ತ ಮುಗುಳ್ನಗೆ ಬೀರಿ ಕೈ ಬೀಸಿ ನಿತೀಶ್ ಕುಮಾರ್ ಸದನದತ್ತ ನಡೆದರು.
2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಲು ವಿಫಲವಾಗಿದ್ದು, ಸರ್ಕಾರವನ್ನು ರಚಿಸಲು ತನ್ನ ಮಿತ್ರಪಕ್ಷಗಳ ಮೇಲೆ ಹೆಚ್ಚು ಅವಲಂಬಿತವಾಯಿತು. ಬಿಜೆಪಿಯ ಸಂಖ್ಯೆ 240, ಆದರೆ ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಚಂದ್ರಬಾಬು ನಾಯ್ಡು ಅವರ ಟಿಡಿಪಿ ಬೆಂಬಲದ ನಂತರ 272 ಸ್ಥಾನಗಳೊಂದಿಗೆ ಸರ್ಕಾರ ರಚಿಸಲು ಸಾಧ್ಯವಾಯಿತು.
ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿದ ಕೂಡಲೇ ಎನ್‌ಡಿಎ ಮಿತ್ರ ಪಕ್ಷ ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ನಡೆಸಿತು, ಅಲ್ಲಿ ಬಿಹಾರಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಹೊಸ ಬೇಡಿಕೆಯನ್ನು ಎತ್ತುವ ನಿರ್ಣಯವನ್ನು ಅಂಗೀಕರಿಸಲಾಯಿತು. ಕೇಂದ್ರ ಸರ್ಕಾರದಲ್ಲಿ ಇಬ್ಬರು ಸಚಿವರನ್ನು ಹೊಂದಿರುವ ಜೆಡಿ (ಯು) ನಾಯಕರು, ನಿರ್ಣಯವು “ವಿಶೇಷ ಪ್ಯಾಕೇಜ್ ಮತ್ತು ಇತರ ರೀತಿಯ ಸಹಾಯ” ದ ಬಗ್ಗೆಯೂ ಮಾತನಾಡಿದೆ. ಬಿಹಾರವು ನರೇಂದ್ರ ಮೋದಿ ಸರ್ಕಾರದಿಂದ ಇನ್ನೂ ಬಹಳಷ್ಟು ಪಡೆಯಬಹುದು ಎಂದಿದ್ದಾರೆ.
ಇದನ್ನೂ ಓದಿ: Package for Bihar: ಬಿಹಾರಕ್ಕೆ ವಿಶೇಷ ಸ್ಥಾನಮಾನ ಇಲ್ಲ; ಆದರೆ, 26,000 ಕೋಟಿ ರೂ ಕೊಡುಗೆ
ಬಿಹಾರದ ವಿಶೇಷ ಸ್ಥಾನಮಾನದ ವಿನಂತಿಯನ್ನು ಕೇಂದ್ರ ಸರ್ಕಾರವು ತಿರಸ್ಕರಿಸಿದರೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2024 ರ ಮಂಡನೆಯಲ್ಲಿ ರಾಜ್ಯಕ್ಕೆ ಪ್ರಮುಖ ಹಣಕಾಸಿನ ನೆರವು ಘೋಷಿಸಿದರು. “ಬಿಹಾರದ ವಿವಿಧ ರಸ್ತೆ ಯೋಜನೆಗಳಿಗಾಗಿ ಸರ್ಕಾರವು ₹ 26,000 ಕೋಟಿಗಳನ್ನು ಪ್ರಸ್ತಾಪಿಸುತ್ತದೆ” ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಬಹುಪಕ್ಷೀಯ ಅಭಿವೃದ್ಧಿ ಏಜೆನ್ಸಿಗಳ ಸಹಾಯದಿಂದ ಬಿಹಾರಕ್ಕೆ ಆರ್ಥಿಕ ನೆರವು ನೀಡಲಾಗುವುದು ಎಂದು ಅವರು ಹೇಳಿದರು.
ಬಜೆಟ್‌ನ ಪ್ರಕಾರ ಬಿಹಾರದಲ್ಲಿ ವಿಮಾನ ನಿಲ್ದಾಣಗಳು, ವೈದ್ಯಕೀಯ ಕಾಲೇಜುಗಳು ಮತ್ತು ಕ್ರೀಡಾ ಮೂಲಸೌಕರ್ಯಗಳನ್ನು ನಿರ್ಮಿಸಲು ಕೇಂದ್ರವು ಯೋಜನೆಗಳನ್ನು ಪ್ರಾರಂಭಿಸುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. “ನಾವು ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಪೂರ್ವೋದಯ ಯೋಜನೆಯನ್ನು ರೂಪಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ