ಮದುವೆಯಾದ ಎರಡೇ ದಿನಕ್ಕೆ ಮಗುವನ್ನು ಹೆತ್ತ ಯುವತಿ; ಪ್ರಸ್ಥವೇ ಆಗಿಲ್ಲವೆಂದು ವರನ ಗೋಳಾಟ
ಮದುವೆಯಾದ ಎರಡು ದಿನಗಳ ನಂತರ ವಧು ಇದ್ದಕ್ಕಿದ್ದಂತೆ ಮಗುವಿಗೆ ಜನ್ಮ ನೀಡಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ತನ್ನದೇ ಮದುವೆಯಲ್ಲಿ ಆರಾಮಾಗಿ ಓಡಾಡಿಕೊಂಡಿದ್ದ ಯುವತಿಗೆ ಅದಾದ 2 ದಿನಕ್ಕೆ ಹೆರಿಗೆಯಾಗಿದೆ. ವರನು ಅದು ತನ್ನ ಮಗುವಲ್ಲ, ನಮ್ಮಿಬ್ಬರಿಗೂ ಇನ್ನೂ ಮೊದಲ ರಾತ್ರಿಯೇ ಆಗಿಲ್ಲ ಎಂದು ಗೋಳಾಡಿದ್ದಾನೆ. ಫೆಬ್ರವರಿ 24ರಂದು ಮದುವೆಯನ್ನು ಬಹಳ ವೈಭವದಿಂದ ಮಾಡಲಾಗಿತ್ತು. ಮದುಮಕ್ಕಳು 1 ದಿನ ಒಟ್ಟಿಗೇ ಕಳೆದಿದ್ದರು. ಅದಾದ ಮರುದಿನವೇ ವಧು ಹೊಟ್ಟೆನೋವಿನಿಂದ ಒದ್ದಾಡಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮಗುವಿಗೆ ಜನ್ಮ ನೀಡಿದ್ದಾಳೆ.

ಪ್ರಯಾಗರಾಜ್ (ಮಾರ್ಚ್ 4): ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮದುವೆಯಾದ ಯುವತಿ ತನ್ನ ವಿವಾಹ ನಡೆದ ಎರಡೇ ದಿನಕ್ಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಮದುವೆಯಾದ ವರ ಮೊದಲ ರಾತ್ರಿಯ ಕನಸು ಕಾಣುತ್ತಿದ್ದರೆ ಇತ್ತ ವಧು ಮಗುವನ್ನು ಹೆತ್ತಿದ್ದಾಳೆ. ಈ ಪ್ರಕರಣವು ಎರಡೂ ಕುಟುಂಬವನ್ನು ಗೊಂದಲದಲ್ಲಿ ಮುಳುಗಿಸಿದೆ. ಅವರಿಬ್ಬರ ವಿವಾಹವನ್ನು ಬಹಳ ವೈಭವದಿಂದ ಆಚರಿಸಲಾಗಿತ್ತು. ಅದಾದ ಎರಡನೇ ದಿನ, ವಧು ಇದ್ದಕ್ಕಿದ್ದಂತೆ ಹೊಟ್ಟೆನೋವಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋದವಳು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ. ಆದರೆ, ಅವರ ಕುಟುಂಬ ಸಂಭ್ರಮಾಚರಣೆಯ ಬದಲು ಗದ್ದಲದಲ್ಲಿ ಮುಳುಗಿತು.
ಫೆಬ್ರವರಿ 24ರಂದು ಯುವಕನ ವಿವಾಹ ಮೆರವಣಿಗೆ ಜಸ್ರಾ ಗ್ರಾಮಕ್ಕೆ ಆಗಮಿಸಿತು. ವಧುವಿನ ಕುಟುಂಬವು ವರನನ್ನು ಅದ್ದೂರಿಯಾಗಿ ಸ್ವಾಗತಿಸಿತು. ಅವರ ವಿವಾಹವನ್ನು ಅದ್ಧೂರಿ ಆಚರಣೆಗಳೊಂದಿಗೆ ನಡೆಸಲಾಯಿತು. ವಧು-ವರರು ಹೂಮಾಲೆಗಳನ್ನು ಬದಲಾಯಿಸಿಕೊಂಡರು. ಈ ಸಮಾರಂಭವು ತಡರಾತ್ರಿಯವರೆಗೆ ನಡೆಯಿತು. ಮರುದಿನ, ಫೆಬ್ರವರಿ 25ರಂದು ವಧುವನ್ನು ಆಕೆಯ ಗಂಡನ ಮನೆಗೆ ಕಳುಹಿಸಲಾಯಿತು.
ಇದನ್ನೂ ಓದಿ: ಮಗುವನ್ನು ಕೊಂದ ಅಪರಾಧ; ಯುಎಇಯಲ್ಲಿ ಗಲ್ಲಿಗೇರಿದ ಉತ್ತರ ಪ್ರದೇಶದ ಮಹಿಳೆ
ಆಕೆ ತನ್ನ ಹೊಸ ಮನೆಗೆ ಬಂದಾಗ ಅವರ ಕುಟುಂಬವು ಸಂತೋಷಪಟ್ಟಿತು. ಅತಿಥಿಗಳು, ನೆರೆಹೊರೆಯವರು ಮತ್ತು ಸಂಬಂಧಿಕರು ನವ ವಧುವನ್ನು ನೋಡಲು ಬಂದರು. ಸಾಂಪ್ರದಾಯಿಕ ‘ಮುಹ್ ದಿಖೈ’ ಸಮಾರಂಭವು ದಿನವಿಡೀ ನಡೆಯಿತು.
ಮರುದಿನ, ಫೆಬ್ರವರಿ 26ರಂದು ವಧು ಬೇಗನೆ ಎಚ್ಚರಗೊಂಡು ಕುಟುಂಬಕ್ಕೆ ಚಹಾ ಕೊಟ್ಟು ಖುಷಿಖುಷಿಯಾಗಿ ಓಡಾಡಿಕೊಂಡಿದ್ದಳು. ಆದರೆ ಸಂಜೆಯ ಹೊತ್ತಿಗೆ, ಅವಳು ಇದ್ದಕ್ಕಿದ್ದಂತೆ ಹೊಟ್ಟೆನೋವಿನಿಂದ ಕಿರುಚಲು ಪ್ರಾರಂಭಿಸಿದಳು. ಅವಳು ತೀವ್ರ ಹೊಟ್ಟೆ ನೋವಿನಿಂದ ಕೂಗಿದಳು. ಗಾಬರಿಗೊಂಡ ಕುಟುಂಬಸ್ಥರು ಅವಳನ್ನು ಆಸ್ಪತ್ರೆಗೆ ಕರೆದೊಯ್ದರು.
ಇದನ್ನೂ ಓದಿ: ಬೆಂಗಳೂರು: ರಾತ್ರಿ 10 ಗಂಟೆಯವರೆಗೂ ಗರ್ಭಿಣಿಯನ್ನು ಠಾಣೆಯೊಳಗೆ ಕೂರಿಸಿಕೊಂಡ ಪೊಲೀಸರು
ವೈದ್ಯರ ಪರೀಕ್ಷೆಯ ನಂತರ ಅವಳು ಗರ್ಭಿಣಿಯಾಗಿದ್ದಾಳೆ. ತಕ್ಷಣ ಹೆರಿಗೆ ಮಾಡಬೇಕಾಗಿದೆ ಎಂದು ವೈದ್ಯರು ಹೇಳಿದಾಗ ಮನೆಯವರು ಆಘಾತಕ್ಕೊಳಗಾಗಿದ್ದಾರೆ. ಅದಾದ ಎರಡು ಗಂಟೆಗಳಲ್ಲಿ ವಧು ಮಗುವಿಗೆ ಜನ್ಮ ನೀಡಿದಳು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ