ಚಿತ್ತೂರು ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಗೆ ನೆಲಮಹಡಿ ಅಗೆಯುವಾಗ ಪವಾಡ, ಪತ್ತೆಯಾಯ್ತು ಪುರಾತನ ಶ್ರೀದೇವಿ-ಭೂದೇವಿ

Chittoor: ಈ ದೇವಾಲಯವನ್ನು 12ನೇ ಶತಮಾನದಲ್ಲಿ ಕೌಂಡಿನ್ಯ ನದಿಯ ದಡದಲ್ಲಿ ನಿರ್ಮಿಸಲಾಗಿದೆ. ಮೊಹಮ್ಮದೀಯರ ಆಕ್ರಮಣದಿಂದ ದೇವಸ್ಥಾನವನ್ನು ರಕ್ಷಿಸಲು ಅಂದಿನ ಗ್ರಾಮಸ್ಥರು ಕೂರ್ಮ ವರದರಾಜ ಸ್ವಾಮಿಯ ದೇವಸ್ಥಾನವನ್ನು ಮಣ್ಣಿನಿಂದ ಮುಚ್ಚಿದ್ದರು ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.

ಚಿತ್ತೂರು ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಗೆ ನೆಲಮಹಡಿ ಅಗೆಯುವಾಗ ಪವಾಡ, ಪತ್ತೆಯಾಯ್ತು ಪುರಾತನ ಶ್ರೀದೇವಿ-ಭೂದೇವಿ
ಚಿತ್ತೂರು ದೇವಸ್ಥಾನ ಜೀರ್ಣೋದ್ಧಾರ-ಪತ್ತೆಯಾಯ್ತು ಪುರಾತನ ಶ್ರೀದೇವಿ-ಭೂದೇವಿ
Follow us
ಸಾಧು ಶ್ರೀನಾಥ್​
|

Updated on:Mar 11, 2024 | 1:59 PM

ಚಿತ್ತೂರು ಜಿಲ್ಲೆಯ ಪಲಮನೇರುವಿನಲ್ಲಿ ಅಪರೂಪದ ಸಂಗತಿಯೊಂದು ಬೆಳಕಿಗೆ ಬಂದಿದೆ. ದೇವಾಲಯದ ಜೀರ್ಣೋದ್ಧಾರ ಕಾರ್ಯದ ವೇಳೆ ಪ್ರಾಚೀನ ವಿಗ್ರಹಗಳು ಪತ್ತೆಯಾಗಿವೆ. ಭಾನುವಾರ ಕುರ್ಮಾಯಿಯ ಕೂರ್ಮ ವರದರಾಜ ಸ್ವಾಮಿ ದೇವಸ್ಥಾನದ ಕಾಮಗಾರಿ ವೇಳೆ ಪಂಚಲೋಹದ ಮೂರ್ತಿಗಳು ಹೊರಕ್ಕೆ ಬಂದಿವೆ. ಜೆಸಿಬಿ ಸಹಾಯದಿಂದ ಗರ್ಭಗುಡಿಯ ತಳಹದಿಯನ್ನು ಅಗೆಯುವಾಗ ಮೊದಲು ಒಂದು ವಿಗ್ರಹದ ತಲೆ ಪತ್ತೆಯಾಗಿದೆ. ತಕ್ಷಣ ಜಾಗೃತರಾದ ಭಕ್ತರು.. ವಿಗ್ರಹದ ಸುತ್ತಲಿನ ಮಣ್ಣನ್ನು ಜಾಗರೂಕತೆಯಿಂದ ಅಗೆದಾಗ… ಸುಮಾರು 2.5 ಅಡಿ ಎತ್ತರದ ಶಂಖ ಮತ್ತು ಚಕ್ರ ಧರಿಸಿದ್ದ ಮಹಾವಿಷ್ಣುವಿನ ಮೂರ್ತಿ ಹೊರಬಂದಿದೆ. ಇದರ ಪಕ್ಕದಲ್ಲಿ ಶ್ರೀದೇವಿ ಮತ್ತು ಭೂದೇವಿಯ ಪಂಚ ಲೋಹದ ವಿಗ್ರಹಗಳು ಹಾಗೂ ಪೂಜೆಗೆ ಬಳಸುವ ವಿವಿಧ ರೀತಿಯ ಲೋಹದ ವಸ್ತುಗಳು ಪತ್ತೆಯಾಗಿವೆ. ಇವುಗಳ ಮೌಲ್ಯ ಕೋಟ್ಯಂತರ ರೂಪಾಯಿ ಆಗಬಹುದು ಎಂದು ಅಂದಾಜಿಸಲಾಗಿದೆ.

ಇತಿಹಾಸಕಾರರು ಮತ್ತು ಶಾಸನಗಳ ಪ್ರಕಾರ, ಈ ದೇವಾಲಯವನ್ನು 12 ನೇ ಶತಮಾನದಲ್ಲಿ ಕೌಂಡಿನ್ಯ ನದಿಯ ದಡದಲ್ಲಿ ನಿರ್ಮಿಸಲಾಗಿದೆ. ಮೊಹಮ್ಮದೀಯರ ಆಕ್ರಮಣದಿಂದ ದೇವಸ್ಥಾನವನ್ನು ರಕ್ಷಿಸಲು ಅಂದಿನ ಗ್ರಾಮಸ್ಥರು ಕೂರ್ಮ ವರದರಾಜ ಸ್ವಾಮಿಯ ದೇವಸ್ಥಾನವನ್ನು ಮಣ್ಣಿನಿಂದ ಮುಚ್ಚಿದ್ದರು ಎಂದು ಗ್ರಾಮದ ಹಿರಿಯರು ಹೇಳುತ್ತಾರೆ. 1950ರಲ್ಲಿ ಕರ್ನಾಟಕದ ನಂಗ್ಲಿ ಸಮೀಪದ ಕರಿಡಿಗನಿಪಲ್ಲಿಯ ಚೆಂಗಾರೆಡ್ಡಿ ಎಂಬ ರೈತ ಇಲ್ಲಿಗೆ ಬಂದಾಗ ಕೆಸರು, ಮರಳಿನ ಅಡಿಯಲ್ಲಿರುವ ದೇವಸ್ಥಾನದ ಮೇಲ್ಭಾಗ ಕಂಡು ಬಂತು ಎನ್ನುತ್ತಾರೆ ಗ್ರಾಮದ ಹಿರಿಯರು. ನಂತರ ಹೊರಬಂದ ದೇವಾಲಯವು ಪಾಳುಬಿದ್ದಿದೆ.

ಇದರೊಂದಿಗೆ ನವೀಕರಣ ಕಾಮಗಾರಿಗೆ ಮುಂದಾದಾಗ.. ರಾಜ್ಯ ಮುಜರಾಯಿ ಇಲಾಖೆಯಿಂದ ಕಳೆದ ವರ್ಷ 1.25 ಕೋಟಿ ರೂ. ಅಷ್ಟರಮಟ್ಟಿಗೆ ಜೀರ್ಣೋದ್ಧಾರ ಕಾರ್ಯ ನಡೆದಾಗ ಪುರಾತನ ಕಾಲದ ಪಂಚಲೋಹದ ಮೂರ್ತಿಗಳು, ಪೂಜೆ ಕೈಂಕರ್ಯಗಳಿಗೆ ಬಳಸುತ್ತಿದ್ದ ಸಾಮಗ್ರಿಗಳು ಹೊರಬಂದಿವೆ. ಇವುಗಳನ್ನು ಕೂರ್ಮವರದರಾಜಸ್ವಾಮಿಯ ವಿಗ್ರಹವನ್ನು ಸಂರಕ್ಷಿಕ್ಷಿಸಿ, ಎತ್ತಿಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸುತ್ತಲಿನ ಗ್ರಾಮಗಳ ಭಕ್ತರು ಮೂರ್ತಿಗಳ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:57 pm, Mon, 11 March 24