NEET-UG 2024: ನೀಟ್ ಅಕ್ರಮ: 3 ಹೈಕೋರ್ಟ್‌ಗಳಲ್ಲಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ತಡೆ

|

Updated on: Jun 20, 2024 | 2:14 PM

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಎಸ್‌ವಿಎನ್ ಭಟ್ಟಿ ಅವರನ್ನೊಳಗೊಂಡ ರಜಾಕಾಲದ ಪೀಠವು ಎನ್‌ಇಇಟಿ-ಯುಜಿ 2024 ಪರೀಕ್ಷೆಯನ್ನು ರದ್ದುಗೊಳಿಸುವ ಮನವಿ ಸೇರಿದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ, ಕೇಂದ್ರ ಮತ್ತು ಇತರರಿಂದ ಪ್ರತಿಕ್ರಿಯೆಗಳನ್ನು ಕೇಳಿದೆ. ಏತನ್ಮಧ್ಯೆ, ಎನ್‌ಟಿಎ ಮತ್ತು ಇತರ ಅರ್ಜಿದಾರರು ಸಲ್ಲಿಸಿರುವ ಅರ್ಜಿಗಳು ಜುಲೈ 8 ರಂದು ವಿಚಾರಣೆ ನಡೆಸಲಿದೆ.

NEET-UG 2024: ನೀಟ್ ಅಕ್ರಮ: 3 ಹೈಕೋರ್ಟ್‌ಗಳಲ್ಲಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ತಡೆ
ಸುಪ್ರೀಂಕೋರ್ಟ್
Follow us on

ದೆಹಲಿ ಜೂನ್ 20: ನೀಟ್  (NEET-UG 2024)ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ (paper leak) ಮತ್ತು ಅಕ್ರಮ ಕುರಿತು ಮೂರು ಹೈಕೋರ್ಟ್‌ಗಳಲ್ಲಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ (Supreme Court) ಗುರುವಾರ ತಡೆಹಿಡಿದಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಎಸ್‌ವಿಎನ್ ಭಟ್ಟಿ ಅವರನ್ನೊಳಗೊಂಡ ರಜಾಕಾಲದ ಪೀಠವು ಎನ್‌ಇಇಟಿ-ಯುಜಿ 2024 ಪರೀಕ್ಷೆಯನ್ನು ರದ್ದುಗೊಳಿಸುವ ಮನವಿ ಸೇರಿದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ, ಕೇಂದ್ರ ಮತ್ತು ಇತರರಿಂದ ಪ್ರತಿಕ್ರಿಯೆಗಳನ್ನು ಕೇಳಿದೆ. ಏತನ್ಮಧ್ಯೆ, ಎನ್‌ಟಿಎ ಮತ್ತು ಇತರ ಅರ್ಜಿದಾರರು ಸಲ್ಲಿಸಿರುವ ಅರ್ಜಿಗಳನ್ನು ಜುಲೈ 8 ರಂದು ವಿಚಾರಣೆ ನಡೆಸಲಿದೆ.

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಪದವಿಪೂರ್ವ)-2024 ಪರೀಕ್ಷೆಗೆ ಸಂಬಂಧಿಸಿದಂತೆ ಪ್ರತ್ಯೇಕ ಅರ್ಜಿಗಳನ್ನು ಆಲಿಸಿದಾಗ, ಸುಪ್ರೀಂ ಕೋರ್ಟ್ ಜೂನ್ 18 ರಂದು ಪರೀಕ್ಷೆಯ ನಿರ್ವಹಣೆಯಲ್ಲಿ ಯಾರೊಬ್ಬರ ಕಡೆಯಿಂದ “ಶೇ. 0.001 ರಷ್ಟು ನಿರ್ಲಕ್ಷ್ಯ” ಕಂಡುಬಂದರೂ ಸಹ, ಅದನ್ನು ಗಮನಿಸಬೇಕು ಎಂದು ಹೇಳಿದೆ.

NEET-UG 2024 ರಲ್ಲಿ ಪೇಪರ್ ಸೋರಿಕೆ ಮತ್ತು ಅಕ್ರಮ ಆರೋಪಗಳು ದೇಶಾದ್ಯಂತ ಭಾರಿ ಕೋಲಾಹಲವನ್ನು ಉಂಟುಮಾಡಿದ್ದು, , ವಿರೋಧ ಪಕ್ಷಗಳು ನರೇಂದ್ರ ಮೋದಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದೆ. ಪ್ರಧಾನಿ ಮೋದಿ ಅವರು ಪ್ರತಿ ವರ್ಷ ‘ಪರೀಕ್ಷಾ ಪೇ ಚರ್ಚಾ’ ಎಂದು ಕರೆಯುವ “ಗ್ರ್ಯಾಂಡ್ ತಮಾಷಾ ” ನಡೆಸುತ್ತಾರೆ. ಅವರ ಸರ್ಕಾರಕ್ಕೆ ಸೋರಿಕೆ ಮತ್ತು ವಂಚನೆಗಳಿಲ್ಲದೆ ಪರೀಕ್ಷೆಯನ್ನು ಸಹ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ಟೀಕಾ ಪ್ರಹಾರ ಮಾಡಿದೆ.

ನೀಟ್ ಯುಜಿ 2024 ಪರೀಕ್ಷೆಯು ಬಹಳ ಗಂಭೀರವಾದ ಸವಾಲುಗಳನ್ನು ಎದುರಿಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದು ಇದನ್ನು ಶಿಕ್ಷಣ ಸಚಿವರು ಸಹ ಒಪ್ಪಿಕೊಳ್ಳುವಂತೆ ಒತ್ತಾಯಿಸಲಾಗಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಸಮಗ್ರತೆ ತೀವ್ರ ಅನುಮಾನದಲ್ಲಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಅಬಕಾರಿ ನೀತಿ ಪ್ರಕರಣ: ಅರವಿಂದ್ ಕೇಜ್ರಿವಾಲ್ ಜಾಮೀನು ಅರ್ಜಿಯ ಆದೇಶ ಕಾಯ್ದಿರಿಸಿದ ದೆಹಲಿ ನ್ಯಾಯಾಲಯ

ಪ್ರಧಾನಿಯವರು ನೀಟ್ ಪರೀಕ್ಷೆಯನ್ನು ಯಾವಾಗ ನಡೆಸುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ. ಪ್ರಶ್ನೆ
ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ ದೆಹಲಿಯಲ್ಲಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ನಿವಾಸದ ಮುಂದೆ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಪ್ರತಿಭಟನೆ ನಡೆಸಿದ್ದು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:13 pm, Thu, 20 June 24