ಕಿಟ್​ಕ್ಯಾಟ್​ ಚಾಕೋಲೆಟ್ ಮೇಲೆ ಜಗನ್ನಾಥ ಸ್ವಾಮಿಯ ಫೋಟೋ ಹಾಕಿದ್ದಕ್ಕೆ ಜನರ ತರಾಟೆ; ಕ್ಷಮೆ ಕೋರಿದ ನೆಸ್ಲೆ

| Updated By: ಸುಷ್ಮಾ ಚಕ್ರೆ

Updated on: Jan 20, 2022 | 7:11 PM

ಚಾಕೋಲೇಟ್ ತಿಂದ ನಂತರ ಆ ಕವರ್ ಅನ್ನು ರಸ್ತೆಗಳು, ಚರಂಡಿ ಮತ್ತು ಡಸ್ಟ್‌ಬಿನ್‌ಗಳಲ್ಲಿ ಜನರು ಬಿಸಾಡುತ್ತಾರೆ. ಇದರಿಂದ ದೇವರಿಗೆ ಅವಮಾನ ಮಾಡಿದಂತಾಗುತ್ತದೆ. ಹೀಗಾಗಿ, ಚಾಕೋಲೇಟ್ ಕವರ್ ಮೇಲಿನ ದೇವರ ಚಿತ್ರಗಳನ್ನು ತೆಗೆದುಹಾಕಲು ನೆಟ್ಟಿಗರು ವಿನಂತಿಸಿದ್ದಾರೆ.

ಕಿಟ್​ಕ್ಯಾಟ್​ ಚಾಕೋಲೆಟ್ ಮೇಲೆ ಜಗನ್ನಾಥ ಸ್ವಾಮಿಯ ಫೋಟೋ ಹಾಕಿದ್ದಕ್ಕೆ ಜನರ ತರಾಟೆ; ಕ್ಷಮೆ ಕೋರಿದ ನೆಸ್ಲೆ
ಕಿಟ್​ಕ್ಯಾಟ್ ಚಾಕೋಲೇಟ್
Follow us on

ನೆಸ್ಲೆ ಇಂಡಿಯಾ (Nestle India) ತನ್ನ ಪ್ರಸಿದ್ಧ ಉತ್ಪನ್ನವಾದ ಕಿಟ್‌ಕ್ಯಾಟ್‌ (KitKat) ಚಾಕೋಲೆಟ್​ನ ಕವರ್ ಮೇಲೆ ಜಗನ್ನಾಥಸ್ವಾಮಿಯ ಫೋಟೋವನ್ನು ಪ್ರಿಂಟ್ ಮಾಡಿದೆ. ಈ ಮೂಲಕ ಸಾಮಾಜಿಕ ಮಾಧ್ಯಮದ ಕೋಪಕ್ಕೆ ಗುರಿಯಾಗಿದೆ. ಕಿಟ್​ಕ್ಯಾಟ್​ ಚಾಕೋಲೆಟ್ ಕವರ್ ಮೇಲೆ ಭಗವಾನ್ ಜಗನ್ನಾಥ, ಬಲಭದ್ರ ಮತ್ತು ಮಾತಾ ಸುಭದ್ರೆಯ ಚಿತ್ರಗಳನ್ನು ಪ್ರಿಂಟ್ ಮಾಡಲಾಗಿದೆ. ಇದು ಅನೇಕರ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಿದೆ ಎಂದು ಟ್ವಿಟ್ಟಿಗರು ಕಿಡಿ ಕಾರಿದ್ದಾರೆ. ಚಾಕೋಲೆಟ್ ಮೇಲೆ ದೇವರ ಫೋಟೋ ಹಾಕಿರುವುದು ವಿವಾದ ಸೃಷ್ಟಿಸುತ್ತಿದ್ದಂತೆ ನೆಸ್ಲೆ ಇಂಡಿಯಾ ಆ ಚಾಕೋಲೇಟ್ ಕವರ್ ವಿನ್ಯಾಸವನ್ನು ಹಿಂಪಡೆದಿದೆ.

ಹಿಂದೂ ಧರ್ಮದ ಪೂಜ್ಯ ದೇವತೆಗಳ ಚಿತ್ರಗಳನ್ನು ಚಾಕೋಲೇಟ್​ ಮೇಲೆ ಮುದ್ರಿಸುವುದರಿಂದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ. ಚಾಕೋಲೇಟ್ ತಿಂದ ನಂತರ ಆ ಕವರ್ ಅನ್ನು ರಸ್ತೆಗಳು, ಚರಂಡಿ ಮತ್ತು ಡಸ್ಟ್‌ಬಿನ್‌ಗಳಲ್ಲಿ ಜನರು ಬಿಸಾಡುತ್ತಾರೆ. ಇದರಿಂದ ದೇವರಿಗೆ ಅವಮಾನ ಮಾಡಿದಂತಾಗುತ್ತದೆ. ಹೀಗಾಗಿ, ಚಾಕೋಲೇಟ್ ಕವರ್ ಮೇಲಿನ ದೇವರ ಚಿತ್ರಗಳನ್ನು ತೆಗೆದುಹಾಕಲು ಎಫ್‌ಎಂಸಿಜಿ ಬ್ರಾಂಡ್‌ಗೆ ನೆಟ್ಟಿಗರು ವಿನಂತಿಸಿದ್ದಾರೆ.

ದಯವಿಟ್ಟು ನಿಮ್ಮ ಕಿಟ್​ಕ್ಯಾಟ್​ ಚಾಕೊಲೇಟ್ ಕವರ್‌ನಲ್ಲಿರುವ ಭಗವಾನ್ ಜಗನ್ನಾಥ, ಬಲಭದ್ರ ಮತ್ತು ಮಾತಾ ಸುಭದ್ರಾ ಫೋಟೋಗಳನ್ನು ತೆಗೆದುಹಾಕಿ. ಜನರು ಚಾಕೊಲೇಟ್ ಅನ್ನು ತಿಂದ ನಂತರ ಕವರ್ ಅನ್ನು ರಸ್ತೆ, ಚರಂಡಿ, ಡಸ್ಟ್‌ಬಿನ್ ಇತ್ಯಾದಿಗಳ ಮೇಲೆ ಎಸೆಯುತ್ತಾರೆ. ಆದ್ದರಿಂದ ದಯವಿಟ್ಟು ಫೋಟೋಗಳನ್ನು ತೆಗೆದುಹಾಕಿ” ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.

ಧಾರ್ಮಿಕ ಭಾವನೆಗಳನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ನೆಸ್ಲೆ ಕಂಪನಿಯನ್ನು ಟೀಕಿಸಿದ ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು, ಭಾರತದ ಎಲ್ಲಾ ಬಹು ರಾಷ್ಟ್ರೀಯ ಕಂಪನಿಗಳು ಹಿಂದೂಗಳ ಧಾರ್ಮಿಕ ಭಾವನೆಯನ್ನು ಲಘುವಾಗಿ ಪರಿಗಣಿಸಿವೆ. ಇದೇ ರೀತಿ ಬೇರೆ ಧರ್ಮದ ದೇವರಿಗೆ ಅವಮಾನ ಮಾಡಿದರೆ ಏನಾಗುತ್ತದೆ ಎಂದು ಒಮ್ಮೆ ಪ್ರಯತ್ನಿಸಿ ನೋಡಿ!! ಎಂದು ಟೀಕಿಸಿದ್ದಾರೆ.

ಭಾರತದ ಕಲೆ ಮತ್ತು ಅದರ ಕುಶಲಕರ್ಮಿಗಳ ಬಗ್ಗೆ ತಿಳಿದುಕೊಳ್ಳಲು ಜನರನ್ನು ಪ್ರೋತ್ಸಾಹಿಸಲು ನಾವು ಬಯಸುತ್ತೇವೆ. ನಾವು ಈ ವಿಷಯದ ಸೂಕ್ಷ್ಮತೆಯನ್ನು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಅಜಾಗರೂಕತೆಯಿಂದ ಜನರ ಭಾವನೆಗಳಿಗೆ ನೋವಾಗಿದ್ದರೆ ಅದಕ್ಕಾಗಿ ವಿಷಾದಿಸುತ್ತೇವೆ ಎಂದು ನೆಸ್ಲೆ ಇಂಡಿಯಾ ಕಂಪನಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: Shocking Video: ಗರ್ಭಿಣಿಯಾಗಿದ್ದ ಫಾರೆಸ್ಟ್​ ರೇಂಜರ್​ ಕೂದಲು ಹಿಡಿದೆಳೆದು, ಥಳಿಸಿದ ದಂಪತಿ; ಶಾಕಿಂಗ್ ವಿಡಿಯೋ ವೈರಲ್

Shocking Video: ಕೊರೊನಾ ಲಸಿಕೆಯಿಂದ ಪಾರಾಗಲು ಮರವೇರಿ ಕುಳಿತ ವ್ಯಕ್ತಿ; ವೈರಲ್ ವಿಡಿಯೋ ಇಲ್ಲಿದೆ