AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬುಲ್ಲಿ ಬಾಯ್ ಪ್ರಕರಣ: ಮೂವರು ಆರೋಪಿಗಳಿಗೆ ಮುಂಬೈ ನ್ಯಾಯಾಲಯ ಜಾಮೀನು ನಿರಾಕರಣೆ

Bulli Bai ಈ ವಾರದ ಆರಂಭದಲ್ಲಿ ಮುಂಬೈ ಪೊಲೀಸರ ಸೈಬರ್ ಸೆಲ್ ಮೂವರ ಜಾಮೀನು ಅರ್ಜಿಗಳನ್ನು ವಿರೋಧಿಸಿತ್ತು. ತನಿಖೆಯು ಆರೋಪಿಗಳು 'ಸುಲ್ಲಿ ಡೀಲ್ಸ್' (Sulli Deals)ಆ್ಯಪ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಅದು ಹೇಳಿತ್ತು

ಬುಲ್ಲಿ ಬಾಯ್ ಪ್ರಕರಣ: ಮೂವರು ಆರೋಪಿಗಳಿಗೆ ಮುಂಬೈ ನ್ಯಾಯಾಲಯ ಜಾಮೀನು ನಿರಾಕರಣೆ
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jan 20, 2022 | 6:44 PM

Share

ಮುಂಬೈ: ವಿವಾದಾತ್ಮಕ ‘ಬುಲ್ಲಿ ಬಾಯ್’ (Bulli Bai case)ಪ್ರಕರಣದಲ್ಲಿ ಆರೋಪಿಗಳಾಗಿದ್ದ ಮತ್ತು ಈ  ಪ್ರಕರಣಕ್ಕೆ  ಸಂಬಂಧಿಸಿದಂತೆ ಮುಂಬೈ ಪೊಲೀಸರು ಬಂಧಿಸಿರುವ ವಿಶಾಲ್ ಕುಮಾರ್ ಝಾ, ಶ್ವೇತಾ ಸಿಂಗ್ ಮತ್ತು ಮಯಾಂಕ್ ರಾವತ್ ಅವರ ಜಾಮೀನು ಅರ್ಜಿಯನ್ನು ಮುಂಬೈ ನ್ಯಾಯಾಲಯವು ಗುರುವಾರ ತಿರಸ್ಕರಿಸಿದೆ. ಈ ವಾರದ ಆರಂಭದಲ್ಲಿ ಮುಂಬೈ ಪೊಲೀಸರ ಸೈಬರ್ ಸೆಲ್ ಮೂವರ ಜಾಮೀನು ಅರ್ಜಿಗಳನ್ನು ವಿರೋಧಿಸಿತ್ತು. ತನಿಖೆಯು ಆರೋಪಿಗಳು ‘ಸುಲ್ಲಿ ಡೀಲ್ಸ್’ (Sulli Deals)ಆ್ಯಪ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಅದು ಹೇಳಿತ್ತು. ಅಣಕು ಹರಾಜಿಗಾಗಿ ಆನ್‌ಲೈನ್‌ನಲ್ಲಿ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಹಾಕುವುದಕ್ಕಾಗಿ ಈ ತಿಂಗಳ ಆರಂಭದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವನ್ನು ಉಂಟುಮಾಡಿದ ಬುಲ್ಲಿ ಬಾಯ್ ಅಪ್ಲಿಕೇಶನ್ ಅನ್ನು ಕೋಡ್-ಹಂಚಿಕೆ ವೇದಿಕೆ ಗಿಟ್ ಹಬ್ ನಲ್ಲಿ GitHub ನಲ್ಲಿ ಹೋಸ್ಟ್ ಮಾಡಲಾಗಿದೆ. ಪ್ರಸ್ತುತ ಮುಂಬೈ ಪೊಲೀಸರು ಈ ಪ್ರಕರಣ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ವೋಕಲ್ ಆರ್ಟಿಸ್ಟ್ ಮತ್ತು ಉನ್ನತ ವೃತ್ತಿಪರರು ಸೇರಿದಂತೆ ನೂರಾರು ಮುಸ್ಲಿಂ ಮಹಿಳೆಯರನ್ನು “ಹರಾಜಿಗೆ” ಪಟ್ಟಿ ಮಾಡಲಾಗಿದೆ. ಅಷ್ಟೇ ಅಲ್ಲದೆ ಅವರ ಛಾಯಾಚಿತ್ರಗಳನ್ನು ತಿರುಚಿ ಅನುಮತಿಯಿಲ್ಲದೆ ಅಪ್ ಲೋಡ್ ಮಾಡಲಾಗಿತ್ತು . ನಿಜವಾದ “ಹರಾಜು” ಅಥವಾ “ಮಾರಾಟ” ಇಲ್ಲದಿದ್ದರೂ, ಆ್ಯಪ್‌ನ ಉದ್ದೇಶವು ಉದ್ದೇಶಿತ ಮಹಿಳೆಯರನ್ನು ಅವಮಾನಿಸುವುದು ಮತ್ತು ಬೆದರಿಸುವುದು ಎಂದು ತೋರುತ್ತಿದೆ, ಅವರಲ್ಲಿ ಹಲವರು ಸಕ್ರಿಯ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ವಿವಾದಾತ್ಮಕ ಅಪ್ಲಿಕೇಶನ್‌ನ ರಚನೆಕಾರರನ್ನು ಆಲ್ಟ್-ರೈಟ್ ಗುಂಪುಗಳಿಗೆ ಲಿಂಕ್ ಮಾಡಿದ್ದಾರೆ. ಈ ಪ್ರಕರಣದಲ್ಲಿ ಅವರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ – ವಿಶಾಲ್ ಕುಮಾರ್ ಝಾ (ಬೆಂಗಳೂರಿನಲ್ಲಿ), ಶ್ವೇತಾ ಸಿಂಗ್ (ಉತ್ತರಾಖಂಡದಲ್ಲಿ), ಮಯಾಂಕ್ ರಾವಲ್ (ಉತ್ತರಾಖಂಡದಲ್ಲಿ), ಮತ್ತು ನೀರಜ್ ಬಿಷ್ಣೋಯ್ (ಅಸ್ಸಾಂನ ಜೋರ್ಹತ್‌ನಲ್ಲಿ), ಅವರೆಲ್ಲರೂ ಕಾಲೇಜು ವಿದ್ಯಾರ್ಥಿಗಳಾಗಿದ್ದು ಜತೆಯಾಗಿ ಆ್ಯಪ್‌ ಕ್ರಿಯೇಟ್ ಮಾಡಿದ್ದರು ಎಂದು ಹೇಳಲಾಗುತ್ತದೆ.

ಗುರುವಾರ ಒಡಿಶಾದಿಂದ ಐದನೇ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ನೀರಜ್ ಸಿಂಗ್ ಎಂದು ಗುರುತಿಸಲಾಗಿದ್ದು, ಪ್ರಕರಣದಲ್ಲಿ ಆರೋಪಿಯಾಗಿರುವ ಇತ್ತೀಚಿನ ವ್ಯಕ್ತಿ ಎಂಬಿಎ ಪದವಿ ಪಡೆದವರು ಎಂದು ಹೇಳಲಾಗುತ್ತದೆ ಮತ್ತು ಪ್ರಮುಖ ಅಪರಾಧಿಗಳೊಂದಿಗೆ ಅಪ್ಲಿಕೇಶನ್‌ನ ಯೋಜನೆಯಲ್ಲಿ ಭಾಗಿಯಾಗಿದ್ದರು.

ಏತನ್ಮಧ್ಯೆ, ಬುಲ್ಲಿ ಬಾಯ್ ಆ್ಯಪ್‌ನ ಮಾಸ್ಟರ್ ಮೈಂಡ್ ನೀರಜ್ ಬಿಷ್ಣೋಯ್ ಮತ್ತು ಪ್ರಕರಣದ ಸಹ ಆರೋಪಿ ಸುಲ್ಲಿ ಡೀಲ್ಸ್ ಆ್ಯಪ್ ಸೃಷ್ಟಿಕರ್ತ ಔಮ್ಕಾರೇಶ್ವರ್ ಠಾಕೂರ್ ಅವರನ್ನು ನಗರದ ಸೈಬರ್ ಪೊಲೀಸರು ಮುಂಬೈಗೆ ಕರೆತಂದಿದ್ದಾರೆ ಮತ್ತು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಬಾಂದ್ರಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜನವರಿ 27 ರವರೆಗೆ ಇಬ್ಬರನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.

ಇದನ್ನೂ ಓದಿ: ಉತ್ತರಪ್ರದೇಶದ ಮೈನ್‌ಪುರಿ ಜಿಲ್ಲೆಯ ಕರ್ಹಾಲ್ ಕ್ಷೇತ್ರದಿಂದ ಅಖಿಲೇಶ್ ಯಾದವ್ ಸ್ಪರ್ಧೆ?