ಉತ್ತರಪ್ರದೇಶದ ಮೈನ್‌ಪುರಿ ಜಿಲ್ಲೆಯ ಕರ್ಹಾಲ್ ಕ್ಷೇತ್ರದಿಂದ ಅಖಿಲೇಶ್ ಯಾದವ್ ಸ್ಪರ್ಧೆ?
UP Assembly Elections 2022 ಇದು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಖಿಲೇಶ್ ಅವರ ಚೊಚ್ಚಲ ಪ್ರವೇಶವಾಗಿದೆ. ಅವರು ಪ್ರಸ್ತುತ ಸಂಸತ್ ನಲ್ಲಿ ಆಜಂಗಢವನ್ನು ಪ್ರತಿನಿಧಿಸುತ್ತಿದ್ದಾರೆ. 2012ರಲ್ಲಿ, ಯಾದವ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದಾಗ ಅವರು ವಿಧಾನ ಪರಿಷತ್ತಿಗೆ ಆಯ್ಕೆಯಾದರು.
ಲಖನೌ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav)ಅವರು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ(UP Assembly Elections 2022 )ಮೈನ್‌ಪುರಿ ಜಿಲ್ಲೆಯ ಕರ್ಹಾಲ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ. ಕರ್ಹಾಲ್ ಕ್ಷೇತ್ರವು ಮಧ್ಯ ಉತ್ತರ ಪ್ರದೇಶದ ಯಾದವ್ ಪ್ರಾಬಲ್ಯದ ಪ್ರದೇಶದಲ್ಲಿ ಬರುತ್ತದೆ. ಕಳೆದ ಎರಡು ದಶಕಗಳ ಹಿಂದೆ ಬಿಜೆಪಿ ಈ ಕ್ಷೇತ್ರವನ್ನು ಗೆದ್ದಿತ್ತು. ಅಂದಿನಿಂದ, ಈ ಸ್ಥಾನವು ಸಮಾಜವಾದಿ ಪಕ್ಷದ ಭದ್ರಕೋಟೆಯಾಗಿದೆ. ಇದು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಖಿಲೇಶ್ ಅವರ ಚೊಚ್ಚಲ ಪ್ರವೇಶವಾಗಿದೆ. ಅವರು ಪ್ರಸ್ತುತ ಸಂಸತ್ ನಲ್ಲಿ ಆಜಂಗಢವನ್ನು ಪ್ರತಿನಿಧಿಸುತ್ತಿದ್ದಾರೆ. 2012ರಲ್ಲಿ, ಯಾದವ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದಾಗ ಅವರು ವಿಧಾನ ಪರಿಷತ್ತಿಗೆ ಆಯ್ಕೆಯಾದರು. ಮೈನ್‌ಪುರಿ ಲೋಕಸಭಾ ಕ್ಷೇತ್ರದ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಕರ್ಹಾಲ್‌ಗೆ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
समाजवादी पार्टी प्रमुख अखिलेश यादव मैनपुरी के करहल विधानसभा क्षेत्र से चुनाव लड़ेंगे: सूत्र#UPAssemblyElections2022
— ANI_HindiNews (@AHindinews) January 20, 2022
ಉತ್ತರ ಪ್ರದೇಶ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದರೆ ಆಜಂಗಢದ ಜನರಿಂದ ಅನುಮತಿ ಪಡೆಯುವುದಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥರು ಬುಧವಾರ ಹೇಳಿದ್ದರು. ನಾನು ಆಜಂಗಢದಲ್ಲಿ ಜನರ ಅನುಮತಿ ಪಡೆದು ಅಲ್ಲಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ಅಖಿಲೇಶ್ ಎರಡು ಸ್ಥಾನಗಳಿಂದ ಸ್ಪರ್ಧಿಸಬಹುದು. ಆಜಂಗಢದ ಗೋಪಾಲ್‌ಪುರ ಎರಡನೇ ಕ್ಷೇತ್ರವಾಗಿರಬಹುದು ಎಂಬ ಊಹಾಪೋಹಗಳು ಕೂಡಾ ಕೇಳಿ ಬಂದಿವೆ. ಪ್ರಸ್ತುತ ಸಮಾಜವಾದಿ ಪಕ್ಷದ ಸೊಬರನ್ ಸಿಂಗ್ ಯಾದವ್ ಕರ್ಹಾಲ್ ಶಾಸಕರಾಗಿದ್ದಾರೆ. ಸಮಾಜವಾದಿ ಪಕ್ಷವು 1993 ರಿಂದ ಏಳು ಬಾರಿ ಈ ಸ್ಥಾನವನ್ನು ಗೆದ್ದಿದೆ. 2002 ರ ಚುನಾವಣೆಯಲ್ಲಿ ಬಿಜೆಪಿ ಕರ್ಹಾಲ್ ಅವರನ್ನು ಗೆದ್ದುಕೊಂಡಿತ್ತು.
ಏತನ್ಮಧ್ಯೆ, ಉತ್ತರ ಪ್ರದೇಶದ ಬಿಜೆಪಿಯ ಯೋಗಿ ಆದಿತ್ಯನಾಥ ಅವರು ಗೋರಖ್‌ಪುರ ನಗರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಇದೇ ಕ್ಷೇತ್ರದಿಂದ ಭೀಮ್ ಆರ್ಮಿಯ ಚಂದ್ರಶೇಖರ್ ಆಜಾದ್ ಕೂಡ ಸ್ಪರ್ಧಿಸಲಿದ್ದಾರೆ.
ಇದನ್ನೂ ಓದಿ: Fact check ಯೋಗಿ ಸರ್ಕಾರ ಆಯ್ಕೆಯಾದರೆ ಉತ್ತರ ಪ್ರದೇಶ ಸಮೃದ್ಧಿ ಕಾಣಲಿದೆ ಎಂದು ಹೇಳಿದ್ದಾರೆಯೇ ಅಖಿಲೇಶ್ ಯಾದವ್?
Published On - 5:46 pm, Thu, 20 January 22