ಪ್ರೀತಿಸಿ 5 ತಿಂಗಳ ಹಿಂದೆ ಮದುವೆಯಾಗಿದ್ದರು, ಬೇಡವೆಂದರೂ ಹೊರಗೆ ಹೋದ ಗಂಡನ ಬಗ್ಗೆ ಕೋಪಗೊಂಡ ಪತ್ನಿ ಏನು ಮಾಡಿದಳು ನೋಡಿ
ಮೊನ್ನೆ ಬುಧವಾರ ಮನೆಯಿಂದ ಹೊರಗೆ ಹೋಗುವುದಾಗಿ ಭಾಷಾ, ತನ್ನ ಪತ್ನಿ ಜೋತ್ನ್ಸಾಗೆ ಹೇಳಿ ಹೋಗಿದ್ದರು. ಆದರೆ ಅದಕ್ಕೆ ಚಕಾರವೆತ್ತಿದ ಪತ್ನಿ ಜೋತ್ನ್ಸಾ, ಮನೆಯಿಂದ ಹೊರಗೆ ಹೋಗಬೇಡಿ ಎಂದು ಹೇಳಿದ್ದಾರೆ. ಆದಾಗ್ಯೂ ಭಾಷಾ ತನಗೆ ಕೆಲಸವಿರುವುದರಿಂದ ಹೊರಗೆ ಹೋಗುವುದಾಗಿ ಹಠ ಹಿಡಿದಿದ್ದಾನೆ. ಹೆಂಡತಿಯ ಮನವಿಯನ್ನು ಕೇಳದೆ ಹೊರಗೆ ಹೋಗಿದ್ದಾರೆ. ಇದರಿಂದ ಜೋತ್ನ್ಸಾ ತೀವ್ರ ಮನನೊಂದಿದ್ದಾರೆ.
Guntur (AP): ಪತಿ-ಪತ್ನಿಯರ ನಡುವೆ ಸಣ್ಣ ಪುಟ್ಟ ಜಗಳ ಸಹಜ.. ಆದರೆ ಈಗಿನ ಕಾಲದಲ್ಲಿ ಸಣ್ಣಪುಟ್ಟ ಜಗಳವೇ ಗಂಡ-ಹೆಂಡತಿ ಬೇರೆಯಾಗುವುದಕ್ಕೆ ಕಾರಣವಾಗುತ್ತಿದೆ. ಇನ್ನು ಕೆಲವರು ಆತ್ಮಹತ್ಯೆಗೂ ಸಿದ್ಧವಾಗಿಬಿಡುತ್ತಿದ್ದಾರೆ. ಇಂತಹದೊಂದು ಘಟನೆ ಗುಂಟೂರು ನಗರದಲ್ಲಿ ನಡೆದಿದೆ. ಅವರು ಪ್ರೀತಿಸಿ ಮದುವೆಯಾದವರು. ಇರುವಷ್ಟು ಕಾಲ ಶಾಶ್ವತವಾಗಿ ಒಟ್ಟಿಗೆ ಇರಲು ಪ್ರತಿಜ್ಞೆ ಮಾಡಿದ್ದರು. ಆದರೆ ಮದುವೆ ಆದ ಹೊಸತು, ಮನೆಯಿಂದ ಹೊರಗೆ ಹೋಗಬೇಡಿ ಎಂದು ತನ್ನ ಗಂಡನಿಗೆ ಹೆಂಡತಿ ಹೇಳಿದ್ದಾರೆ. ಆದರೆ ಆತ ಅದೇನು ಅರ್ಜೆಂಟಿತ್ತೂ ಹೊರಗೆ ಹೋದಾಗ, ಇತ್ತ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತನ ಹೆಸರು ನಾಗೂರ್ ಭಾಷಾ.. ಆಕೆಯ ಹೆಸರು ಜೋತ್ನ್ಸಾ.. ಇಬ್ಬರೂ ಕಲ್ಯಾಣಿ ನಗರದಲ್ಲಿ ವಾಸಿಸುತ್ತಿದ್ದರು. ಇಬ್ಬರೂ ಇವೆಂಟ್ ಮ್ಯಾನೇಜ್ಮೆಂಟ್ ಕಾರ್ಯಕ್ರಮಗಳನ್ನು ಆಯೋಜಿಸುವ ಕೆಲಸ ಮಾಡುತ್ತಿದ್ದರು. ವೃತ್ತಿಯ ಭಾಗವಾಗಿ ಏರ್ಪಟ್ಟ ಪರಿಚಯ ಇಬ್ಬರ ನಡುವೆ ಪ್ರೀತಿಗೆ ತಿರುಗಿತ್ತು. ಎರಡೂ ಮನೆಯವರು ಒಪ್ಪಿ ಐದು ತಿಂಗಳ ಹಿಂದೆ ವಿವಾಹವಾಗಿದ್ದರು. ಇಬ್ಬರೂ ಪರಸ್ಪರ ಪ್ರೀತಿ ವೀಶ್ವಾಸದಿಂದ ಬದುಕುತ್ತಿದ್ದರು. ಆದರೆ, ಒಂದು ಸಣ್ಣ ಘಟನೆ ಅವರಿಬ್ಬರ ಜೀವನದಲ್ಲಿ ತೀರದ ದುಃಖವನ್ನುಂಟು ಮಾಡಿದೆ.
ಮೊನ್ನೆ ಬುಧವಾರ ಮನೆಯಿಂದ ಹೊರಗೆ ಹೋಗುವುದಾಗಿ ಭಾಷಾ, ತನ್ನ ಪತ್ನಿ ಜೋತ್ನ್ಸಾಗೆ ಹೇಳಿ ಹೋಗಿದ್ದರು. ಆದರೆ ಅದಕ್ಕೆ ಚಕಾರವೆತ್ತಿದ ಪತ್ನಿ ಜೋತ್ನ್ಸಾ, ಮನೆಯಿಂದ ಹೊರಗೆ ಹೋಗಬೇಡಿ ಎಂದು ಹೇಳಿದ್ದಾರೆ. ಆದಾಗ್ಯೂ ಭಾಷಾ ತನಗೆ ಕೆಲಸವಿರುವುದರಿಂದ ಹೊರಗೆ ಹೋಗುವುದಾಗಿ ಹಠ ಹಿಡಿದಿದ್ದಾನೆ. ಹೆಂಡತಿಯ ಮನವಿಯನ್ನು ಕೇಳದೆ ಹೊರಗೆ ಹೋಗಿದ್ದಾರೆ. ಇದರಿಂದ ಜೋತ್ನ್ಸಾ ತೀವ್ರ ಮನನೊಂದಿದ್ದಾರೆ.
Also read: ದುರಾಸೆಯ ಫಲ – ಇತ್ತೀಚೆಗೆ ಮದುವೆಯಾಗಿದ್ದ ಟೆಕ್ಕಿ ಪ್ರಾಣ ಕಳೆದುಕೊಂಡ- ಎಲ್ಲಿ, ಏನಾಗಿತ್ತು?
ಹೊರಗೆ ಹೋದ ನಾಗೂರ್ ಭಾಷಾ ಸಂಜೆಯವರೆಗೂ ಮನೆಗೆ ಬಂದಿರಲಿಲ್ಲ. ಇತ್ತ, ಮುದ್ದಿನ ಮಡದಿ ಜೋತ್ಸ್ನಾಗೆ ಅವರ ತಾಯಿ ಕರೆ ಮಾಡಿದ್ದಾರೆ. ಆದರೆ ಜೋತ್ಸ್ನಾ ಫೋನ್ ಎತ್ತಲಿಲ್ಲ. ಅನುಮಾನ ಬಂದು ಜೋತ್ಸ್ನಾ ತಾಯಿ ತಕ್ಷಣ ಅಳಿಯನಿಗೆ ಕರೆ ಮಾಡಿ ಕೇಳಿದ್ದಾರೆ. ಇದರಿಂದ ಗಾಬರಿಗೆ ಬಿದ್ದ ನಾಗೂರ್ ಭಾಷಾ ಮನೆಗೆ ಓಡೋಡಿ ಬಂದಿದ್ದಾರೆ. ಆದರೆ ಹೆಂಡತಿಯಾದವಳು ಬಾಗಿಲು ತಟ್ಟಿದರೂ ತೆರೆಯಲಿಲ್ಲ. ಅನುಮಾನಗೊಂಡ ನಾಗೂರ್, ಅಕ್ಕಪಕ್ಕದವರ ನೆರವಿನೊಂದಿಗೆ ಬಾಗಿಲು ಒಡೆದು ಒಳ ಹೋಗಿ ನೊಡಿದ್ದಾರೆ.
ಅದಾಗಲೇ ಜೋತ್ಸ್ನಾ ನೇಣು ಬಿಗಿದುಕೊಂಡಿರುವ ಭೀಕರ ದೃಸ್ಯ ಅಲ್ಲಿ ಕಾಣಿಸಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಅದಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅಷ್ಟೊಂದು ಸಣ್ಣ ವಿಚಾರಕ್ಕೆ ಜೋತ್ಸ್ನಾ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಆಕೆಯ ಪತಿ ನಾಗೂರ್ ಭಾಷಾ ಮತ್ತು ಜೋತ್ನಾಳ ಪೋಷಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ