ಡಾರ್ಜಿಲಿಂಗ್ ಮಾಲ್‌ನಲ್ಲಿ ಕುಳಿತು ಕಾಂಚನಜುಂಗಾದ ಸೌಂದರ್ಯ ಸವಿದ ಪ್ರವಾಸಿಗರು; ಅದೃಷ್ಟವಂತರಿಗೆ ಮಾತ್ರ ಈ ಅವಕಾಶ!
ಡಾರ್ಜಿಲಿಂಗ್ ಎಂದರೆ ಬಂಗಾಳಿಗಳಿಗೆ ವಿಭಿನ್ನ ಭಾವನೆ. ಡಾರ್ಜಿಲಿಂಗ್ ವರ್ಷವಿಡೀ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ. ಇಂದು ಮಾಲ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪ್ರವಾಸಿಗರು ದಿಢೀರನೆ ಕಾಂಚನಜುಂಗಾದ ಸೌಂದರ್ಯವನ್ನು ನೋಡಿ ಕಣ್ತುಂಬಿಕೊಂಡರು.

ಡಾರ್ಜಿಲಿಂಗ್: ನವೆಂಬರ್ ಮಧ್ಯಭಾಗ ಕಳೆದಿದೆ. ಚಳಿಗಾಲದ ಈ ಸಮಯದಲ್ಲಿ ಪರ್ವತಗಳನ್ನು ನೋಡಲು ಬಹಳ ಅದ್ಭುತವಾಗಿರುತ್ತದೆ, ಆಕಾಶ ಸ್ವಚ್ಛವಾಗಿ ಕಾಣುತ್ತದೆ. ಇದು ಪ್ರಕೃತಿಯ ರಮಣೀಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಡಾರ್ಜಿಲಿಂಗ್ ಮಾಲ್‌ನಲ್ಲಿ ಕುಳಿತು ಈಗ ಸ್ಪಷ್ಟ ಮತ್ತು ಮೋಡರಹಿತ ಆಕಾಶದಲ್ಲಿ ಕಾಂಚನಜುಂಗಾದ ಶಿಖರವನ್ನು ನೋಡಬಹುದು. ಮಾಲ್ ರಸ್ತೆಯ ಉದ್ದಕ್ಕೂ ಈ ದೃಶ್ಯವನ್ನು ಸೆರೆಹಿಡಿಯಲು ಪ್ರವಾಸಿಗರು ಮುಗಿಬಿದ್ದರು.
ಡಾರ್ಜಿಲಿಂಗ್ ಎಂದರೆ ಬಂಗಾಳಿಗಳಿಗೆ ವಿಭಿನ್ನ ಭಾವನೆ. ಡಾರ್ಜಿಲಿಂಗ್ ವರ್ಷವಿಡೀ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ. ಇಂದು ಮಾಲ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪ್ರವಾಸಿಗರು ದಿಢೀರನೆ ಕಾಂಚನಜುಂಗಾದ ಸೌಂದರ್ಯವನ್ನು ನೋಡಿ ಕಣ್ತುಂಬಿಕೊಂಡರು. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಇದನ್ನೂ ಓದಿ: Belly Fat: ಸುಲಭವಾಗಿ ನಿಮ್ಮ ಹೊಟ್ಟೆಯ ಬೊಜ್ಜು ಕರಗಿಸುವ 7 ಆಹಾರಗಳಿವು
ಅಂದಹಾಗೆ, ದಿನವೂ ಈ ದೃಶ್ಯವನ್ನು ನೋಡಲು ಸಾಧ್ಯವಿಲ್ಲ. ಏಕೆಂದರೆ, ಮೋಡ ಸಂಪೂರ್ಣವಾಗಿ ಸರಿದಾಗ, ಪ್ರಕೃತಿ ಸ್ಪಷ್ಟವಾದ ವಾತಾವರಣವನ್ನು ನಿರ್ಮಿಸಿಕೊಂಡಾಗ ಮಾತ್ರ ಈ ಕಾಂಚನಜುಂಗಾ ಡಾರ್ಜಿಲಿಂಗ್ನಲ್ಲಿ ಕಾಣುತ್ತದೆ. ಡಾರ್ಜಿಲಿಂಗ್ ಮಾಲ್‌ನಿಂದ ಸ್ಲೀಪಿಂಗ್ ಬುದ್ಧ ಶ್ರೇಣಿ ಅಥವಾ ಕಾಂಚನಜುಂಗಾವನ್ನು ವೀಕ್ಷಿಸುವಷ್ಟು ಅದೃಷ್ಟವು ಪ್ರತಿದಿನವೂ ಸಿಗುವುದಿಲ್ಲ. ಈ ಶಿಖರವು ವಿಶ್ವದ ಮೂರನೇ ಅತಿ ಎತ್ತರದ ಶಿಖರವಾಗಿದೆ. ಇದು ಮೋಡಗಳಿಂದ ಆವೃತವಾಗಿರುತ್ತದೆ.
ಕಾಂಚನಜುಂಗಾದ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಕೆಲವೊಮ್ಮೆ ರಿಶಾಪ್‌ಗೆ, ಕೆಲವೊಮ್ಮೆ ಸಂದಕ್‌ಫು ಅಥವಾ ಫಲುತ್‌ಗೆ ಓಡಬೇಕಾಗುತ್ತದೆ. ಸಂದಕ್ಫು-ಫಲುತ್ ಚಾರಣಿಗರಿಗೆ ಅಚ್ಚುಮೆಚ್ಚಿನ ಸ್ಥಳವಾಗಿದೆ. ಈ ಎರಡೂ ಸ್ಥಳಗಳಿಂದ ಕಾಂಚನಜುಂಗಾ ಸೇರಿದಂತೆ ಇಡೀ ಸ್ಲೀಪಿಂಗ್ ಬುದ್ಧ ಶ್ರೇಣಿಯನ್ನು ವರ್ಷವಿಡೀ ಕಾಣಬಹುದು.
ಇದನ್ನೂ ಓದಿ: ಏನಿದು ಐಸ್ ವಾಟರ್ ಬಾತ್?; ಸೆಲೆಬ್ರಿಟಿಗಳಿಂದ ಜನಪ್ರಿಯವಾಯ್ತು ಹೊಸ ಥೆರಪಿ
ಆದರೆ, ಡಾರ್ಜಿಲಿಂಗ್ ನಗರದಲ್ಲಿ ಕುಳಿತು ಮಾಲ್ ರಸ್ತೆಯಲ್ಲಿ ಒಂದು ಕಪ್ ಚಹಾ ಹೀರುತ್ತಾ ಕಾಂಚನಜುಂಗಾ ನೋಡಲು ಅದೃಷ್ಟ ಬೇಕು. ನವೆಂಬರ್-ಡಿಸೆಂಬರ್ ಆಗಸವು ಸ್ಪಷ್ಟ ಮತ್ತು ಮೋಡರಹಿತವಾಗಿರುವ ಸಮಯವಾದ್ದರಿಂದ ಕಾಂಚನಜುಂಗಾದ ದೃಶ್ಯವನ್ನು ನೋಡುವ ಅದೃಷ್ಟ ಈ ಸಮಯದಲ್ಲಿ ಸಿಕ್ಕರೂ ಸಿಗಬಹುದು. ನಿಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ನೀವು ಕೂಡ ಡಾರ್ಜಿಲಿಂಗ್ ಟ್ರಿಪ್ ಪ್ಲಾನ್ ಮಾಡಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ