AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲಾ ಹೆದ್ದಾರಿಗಳ ಟೋಲ್​ ಶುಲ್ಕ ಶೇ.5ರಷ್ಟು ಹೆಚ್ಚಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ದೇಶಾದ್ಯಂತ ಹೆದ್ದಾರಿಗಳನ್ನು ಬಳಕೆ ಮಾಡುವ ವಾಹನ ಚಾಲಕರು ಸೋಮವಾರದಿಂದ ಟೋಲ್​ಗಳಲ್ಲಿ ಹೆಚ್ಚಿನ ಶುಲ್ಕಗಳನ್ನು ನೀಬೇಕಾಗುತ್ತದೆ. ಶೇ.5ಷ್ಟು ಶುಲ್ಕವನ್ನು ಹೆಚ್ಚಳ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ.

ಎಲ್ಲಾ ಹೆದ್ದಾರಿಗಳ ಟೋಲ್​ ಶುಲ್ಕ ಶೇ.5ರಷ್ಟು ಹೆಚ್ಚಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ನಯನಾ ರಾಜೀವ್
|

Updated on: Jun 03, 2024 | 8:28 AM

Share

ಎಲ್ಲಾ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಹೆಚ್ಚಳ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ. ಈ ಆದೇಶವು ಇಂದಿನಿಂದಲೇ ಜಾರಿಗೆ ಬರಲಿದೆ. ಸಾಮಾನ್ಯವಾಗಿ ಟೋಲ್​ ಶುಲ್ಕ ಪ್ರತಿ ವರ್ಷ ಹೆಚ್ಚಾಗುತ್ತದೆ. ಇದರಂತೆ ಏಪ್ರಿಲ್​ 1ರಿಂದ ಪರಿಷ್ಕೃತ ಶುಲ್ಕ ಜಾರಿಯಾಗಬೇಕಿತ್ತು, ಆದರೆ, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪರಿಷ್ಕರಣೆ ಶುಲ್ಕ ಜಾರಿಗೆ ತಡವಾಗಿತ್ತು.

ರಾಷ್ಟ್ರೀಯ ಹೆದ್ದಾರಿ ಜಾಲದಲ್ಲಿ ಸರಿಸುಮಾರು 855 ಟೋಲ್ ಪ್ಲಾಜಾಗಳಿವೆ. ಇವುಗಳ ಮೇಲೆ ರಾಷ್ಟ್ರೀಯ ಹೆದ್ದಾರಿ ಶುಲ್ಕ ಕಾಯ್ದೆ, 2008ಕ್ಕೆ ಅನುಗುಣವಾಗಿ ಶುಲ್ಕ ವಿಧಿಸಲಾಗುತ್ತದೆ.

ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನ ಶನಿವಾರ ಮುಕ್ತಾಯಗೊಂಡಿದೆ. ಜೂನ್ 4ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

ಮತ್ತಷ್ಟು ಓದಿ: ಏಪ್ರಿಲ್ 1 ರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್‌ ದರ ಹೆಚ್ಚಳ, ವಿವರ ಇಲ್ಲಿದೆ

ಹೊಸ ದರಗಳು ಜೂನ್​ 3, 2024ರಿಂದ ಅನ್ವಯವಾಗುತ್ತವೆ, ಟೋಲ್​ ತೆರಿಗೆ ಎಂಬುದು ಕೆಲವು ಅಂತಾರಾಜ್ಯ ಎಕ್ಸ್​ಪ್ರೆಸ್​ವೇಗಳು, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ದಾಟುವಾಗ ಚಾಲಕರು ಪಾವತಿಸಬೇಕಾದ ಶುಲ್ಕ. ಇವುಗಳು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಡಿಯಲ್ಲಿ ಬರುತ್ತವೆ.

ದ್ವಿಚಕ್ರ ವಾಹನ ಸವಾರರಿಗೆ ಟೋಲ್​ ಶುಲ್ಕದಿಂದ ರಿಯಾಯಿತಿ ನೀಡಲಾಗಿದೆ. ಹಾಗೆಯೇ ಅಮುಲ್ ಹಾಲಿನ ಬೆಲೆಯನ್ನೂ ಹೆಚ್ಚಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ