ಲಖ್​​ಬೀರ್​​ನ್ನು ಸಿಂಘು ಗಡಿಗೆ ಕರೆದೊಯ್ದಿದ್ದು ಮೊದಲು ಬಂಧಿತನಾದ ಆರೋಪಿ ನಿಹಾಂಗ್ : ಪಂಜಾಬ್ ಪೊಲೀಸ್

ಕೈ ಕತ್ತರಿಸಿದ ಮತ್ತು ಹೆಚ್ಚು ಗಾಯಗಳೊಂದಿಗೆ  ಲಖ್​​ಬೀರ್ ಸಿಂಗ್ ಮೃತದೇಹ  ಸಿಂಘು ಗಡಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣದ ಆರೋಪಿ ಸರಬ್ಜಿತ್ ಸಿಂಗ್ ಲಖ್​​ಬೀರ್ ಸಿಂಗ್​​ನೊಂದಿಗೆ ಸಂಪರ್ಕದಲ್ಲಿದ್ದ.

ಲಖ್​​ಬೀರ್​​ನ್ನು ಸಿಂಘು ಗಡಿಗೆ ಕರೆದೊಯ್ದಿದ್ದು ಮೊದಲು ಬಂಧಿತನಾದ ಆರೋಪಿ ನಿಹಾಂಗ್ : ಪಂಜಾಬ್ ಪೊಲೀಸ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Oct 22, 2021 | 12:12 PM

ದೆಹಲಿ: ದೆಹಲಿಯ ಸಿಂಘು ಗಡಿಯಲ್ಲಿ ರೈತರ ಪ್ರತಿಭಟನಾ ಸ್ಥಳದಲ್ಲಿ ಕಳೆದ ವಾರ ಸಿಖ್ಖರ ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸಿದ ಆರೋಪದಲ್ಲಿ 35 ವರ್ಷದ ರೈತನ ಹತ್ಯೆ ನಡೆದಿತ್ತು.ಈ ಪ್ರಕರಣದಲ್ಲಿ ಮೊದಲು ಬಂಧಿತನಾದ ನಿಹಾಂಗ್ ಸಿಖ್ (Nihang Sikh)ಲಖ್​​ಬೀರ್​​ನ್ನು(Lakhbir ) ಅಲ್ಲಿಗೆ ಕರೆದೊಯ್ದನು ಎಂದು ಪಂಜಾಬ್ ಪೊಲೀಸ್ ಅಧಿಕಾರಿಯೊಬ್ಬರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ಕೈ ಕತ್ತರಿಸಿದ ಮತ್ತು ಹೆಚ್ಚು ಗಾಯಗಳೊಂದಿಗೆ  ಲಖ್​​ಬೀರ್ ಸಿಂಗ್ ಮೃತದೇಹ  ಸಿಂಘು ಗಡಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣದ ಆರೋಪಿ ಸರಬ್ಜಿತ್ ಸಿಂಗ್ ಲಖ್​​ಬೀರ್ ಸಿಂಗ್​​ನೊಂದಿಗೆ ಸಂಪರ್ಕದಲ್ಲಿದ್ದ. ನಿಹಾಂಗ್ ಸಿಖ್ ಪಂಜಾಬಿನ ತರನ್ ತರನ್​​ನಲ್ಲಿರುವ ಲಖ್​​ಬೀರ್​​ನ ಗ್ರಾಮ ಚೀಮಾ ಕಲಾನ್ ಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.

ಪೋಲಿಸರ ಪ್ರಕಾರ ಸರಬ್ಜಿತ್ ತನ್ನ ತಾಯಿಯ ಚಿಕ್ಕಪ್ಪನ ಜೊತೆ ಗುರುದಾಸಪುರದ ಖುಜಾಲಾ ಗ್ರಾಮದಲ್ಲಿ ಐದರಿಂದ ಆರು ವರ್ಷದವನಿದ್ದಾಗ ವಾಸಿಸಲು ಆರಂಭಿಸಿದ. ಸರಬ್ಜಿತ್ ಅವರ 75 ವರ್ಷದ ತಂದೆ ಮತ್ತು 70 ವರ್ಷದ ತಾಯಿ ಹತ್ತಿರದ ವಿಠ್ವಾನ್ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಸರಬ್ಜಿತ್ ನಾಲ್ಕು-ಐದು ವರ್ಷಗಳ 10 ನೇ ತರಗತಿಯ ನಂತರ ದುಬೈಗೆ ತೆರಳಿದ್ದರು. ಈ ಅವಧಿಯಲ್ಲಿ, ಸರಬ್ಜಿತ್ ಅವರ ಚಿಕ್ಕಪ್ಪ ತಮ್ಮ ನಿವಾಸವನ್ನು ಬಟಾಲಾದ ಸುಖಮಣಿ ಕಾಲೋನಿಗೆ ಬದಲಾಯಿಸಿದರು ಮತ್ತು ದುಬೈನಿಂದ ಹಿಂದಿರುಗಿದ ನಂತರ, ಅವರು ಅಲ್ಲಿ ವಾಸಿಸಲು ಪ್ರಾರಂಭಿಸಿದರು. “ಸರಬ್ಜಿತ್ 2007 ರಲ್ಲಿ ಮಹಿಳೆಯನ್ನು ವಿವಾಹವಾದರು, ಆದರೆ ಮದುವೆಯು 2017 ರಲ್ಲಿ ವಿಚ್ಛೇದನದಲ್ಲಿ ಕೊನೆಗೊಂಡಿತು. ಅದೇ ವರ್ಷ, ಅವರು ನಾಂದೇಡ್‌ನ ಹಜೂರ್ ಸಾಹಿಬ್‌ಗೆ ಹೋಗಿದ್ದರು, ದೀಕ್ಷಾಸ್ನಾನ ಪಡೆದು ನಿಹಾಂಗ್ ಆಗಿದ್ದಾರೆ” ಎಂದು ಹೇಳಿದರು.

ಸರಬ್ಜಿತ್ ಕೊನೆಯದಾಗಿ ಎರಡು ವರ್ಷಗಳ ಹಿಂದೆ ಅವರ ಚಿಕ್ಕಪ್ಪನ ಮಗನ ಮದುವೆಗೆ ಹಾಜರಾಗಲು ಬಟಾಲಾಕ್ಕೆ ಭೇಟಿ ನೀಡಿದ್ದರು. ಅಲ್ಲಿಯವರ ಪ್ರಕಾರ ಸರಬ್ಜಿತ್‌ಗೆ 45 ವರ್ಷದ ಸಹೋದರನಿದ್ದಾನೆ. ಅವನು “ಬುದ್ಧಿ ಭ್ರಮಣೆಗೊಳಗಾಗಿದ್ದು”ವಿತ್ವಾನ್‌ನಲ್ಲಿ ವಾಸಿಸುತ್ತಾನೆ. ಮೂವರು ಸಹೋದರಿಯರಿಗೆ ಮದುವೆಯಾಗಿದೆ.

ಏತನ್ಮಧ್ಯೆ, ಬಾಬಾ ಮನ್ ಸಿಂಗ್ ನೇತೃತ್ವದ ಬುಧ ದಳ ನಿಹಾಂಗ್ ಪಂಗಡ ನಿಹಾಂಗ್ ನಾಯಕ ಅಮನ್ ಸಿಂಗ್ ಅವರಿಂದ ಅಂತರ ಕಾಯ್ದುಕೊಂಡಿದೆ. ಅಮನ್ ಸಿಂಗ್ ಅವರ ಫೋಟೋ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಜೊತೆ ಕಾಣಿಸಿಕೊಂಡಿದೆ. ಅಮನ್ ಸಿಂಗ್ ತನ್ನದೇ ಆದ ಪ್ರತ್ಯೇಕ ಗುಂಪನ್ನು ರಚಿಸಿಕೊಂಡಿದೆ ಮತ್ತು ಬುಧದಳ ಹೆಸರನ್ನು ಬಳಸದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಸಿಹಾಂಗ್ ಪಂಗಡ ಹೇಳಿದೆ. ಸಿಂಘು ಗಡಿಯಲ್ಲಿ “ದುಷ್ಟರನ್ನು” ಶಿಕ್ಷಿಸುವವರನ್ನು ನಾವು ಗೌರವಿಸುತ್ತೇವೆ ಮತ್ತು ಕಾನೂನು ಹೋರಾಟದಲ್ಲಿ ಅವರಿಗೆ ಸಹಾಯ ಮಾಡುವುದಾಗಿ ಬುಧ ದಳ ವಿಡಿಯೊದಲ್ಲಿ ಹೇಳಿದೆ.

ವಿಡಿಯೊ ಕುರಿತು ಕೇಳಿದಾಗ, ಅಮನ್ ಸಿಂಗ್ “ಜಡೋನ್ ವಕ್ತ್ ಪೈಂಡಾ ಸಾರಥ್ ಚಡ್ ದಿಂಡೆ (ಕಷ್ಟದ ಸಮಯದಲ್ಲಿ, ಒಬ್ಬ ವ್ಯಕ್ತಿಯನ್ನು ಎಲ್ಲರೂ ಬಿಟ್ಟು ಹೋಗುತ್ತಾರೆ) ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ನಿಹಾಂಗ್ ಮುಖ್ಯಸ್ಥ ಬಾಬಾ ಅಮನ್ ಸಿಂಗ್ ಜತೆ ಕೇಂದ್ರ ಸಚಿವ ನರೇಂದ್ರ ತೋಮರ್ ಫೋಟೊ; ವಿವಾದ ಸೃಷ್ಟಿ

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ