ನಿಹಾಂಗ್ ಮುಖ್ಯಸ್ಥ ಬಾಬಾ ಅಮನ್ ಸಿಂಗ್ ಜತೆ ಕೇಂದ್ರ ಸಚಿವ ನರೇಂದ್ರ ತೋಮರ್ ಫೋಟೊ; ವಿವಾದ ಸೃಷ್ಟಿ
ಅದೇ ವೇಳೆ ಸಿಖ್ ಧಾರ್ಮಿಕ ಮುಖಂಡ ಸಿಂಘು ಗಡಿಯಲ್ಲಿನ ರೈತರ ಪ್ರತಿಭಟನಾ ಸ್ಥಳವನ್ನು ಬಿಡಲು ನಿಹಾಂಗ್‌ಗಳಿಗೆ ಕೇಂದ್ರವು ಹಣದ ಆಮಿಷ ಒಡ್ಡಿದೆ ಎಂದು ಆರೋಪಿಸಿದರು.
ದೆಹಲಿ: ನಿಹಾಂಗ್ ಪಂಗಡದ ಮುಖ್ಯಸ್ಥ ಬಾಬಾ ಅಮನ್ ಸಿಂಗ್ (Baba Aman Singh) ಅವರು ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ ( Narendra Tomar)ಜತೆ ಇರುವ ಛಾಯಾಚಿತ್ರವು ಮಂಗಳವಾರ ವಿವಾದಕ್ಕೆ ಕಾರಣವಾಗಿದೆ. ಅದೇ ವೇಳೆ ಸಿಖ್ ಧಾರ್ಮಿಕ ಮುಖಂಡ ಸಿಂಘು ಗಡಿಯಲ್ಲಿನ ರೈತರ ಪ್ರತಿಭಟನಾ ಸ್ಥಳವನ್ನು ಬಿಡಲು ನಿಹಾಂಗ್‌ಗಳಿಗೆ ಕೇಂದ್ರವು ಹಣದ ಆಮಿಷ ಒಡ್ಡಿದೆ ಎಂದು ಆರೋಪಿಸಿದರು. ಆ ಫೋಟೊದಲ್ಲಿ ಸೇವೆಯಿಂದ ವಜಾಗೊಳಿಸಲ್ಪಟ್ಟ ಮತ್ತು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಪಂಜಾಬ್‌ನ ಮಾಜಿ ಪೊಲೀಸ್ ಅಧಿಕಾರಿ ಗುರ್ಮೀತ್ ಸಿಂಗ್ ಪಿಂಕಿ ಮತ್ತು ಬಿಜೆಪಿ ನಾಯಕ ಹರ್ವಿಂದರ್ ಗಾರೆವಾಲ್ ಇದ್ದಾರೆ. ಇದು ಎರಡು ತಿಂಗಳ ಹಿಂದೆ ನಡೆದ ಸಭೆಯ ಫೋಟೊ ಎಂದು ಭಾವಿಸಲಾಗಿದೆ. ಅಮನ್ ಸಿಂಗ್ ಪಂಗಡದ ಒಬ್ಬ ಸದಸ್ಯ ದಲಿತ ಸಿಖ್ನ್ನು ಸಿಂಘ ಗಡಿಯಲ್ಲಿ ಹತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಘಟನೆಯ ನಂತರ ಅಮನ್ ಸಿಂಗ್ ತನ್ನ ಹೇಳಿಕೆಯಲ್ಲಿ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದಾನೆ.
ರೈತರ ಪ್ರತಿಭಟನಾ ಸ್ಥಳವನ್ನು ತೊರೆದಿದ್ದಕ್ಕಾಗಿ ನನಗೆ 10 ಲಕ್ಷ ರೂ. ನನ್ನ ಸಂಸ್ಥೆಗೆ 1 ಲಕ್ಷ ರೂ ಆಮಿಷ ಒಡ್ಡಲಾಗಿದೆ. ಆದರೆ ನಮ್ಮನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಅಮನ್ ಸಿಂಗ್ ಮಂಗಳವಾರ ಹೇಳಿದ್ದಾರೆ. ನಿಹಾಂಗ್ ಸಂಘಟನೆಗಳು ಅಕ್ಟೋಬರ್ 27 ರಂದು ಸಿಂಘುವಿನಲ್ಲಿ ಉಳಿಯಬೇಕೋ ಬೇಡವೋ ಎಂಬ ಬಗ್ಗೆ ನಿರ್ಧಾರ ಮಾಡುತ್ತವೆ ಎಂದು ಅವರು ಹೇಳಿದರು.
ಕೃಷಿ ಸಚಿವಾಲಯವು ಈ ವಿಷಯದ ಕುರಿತು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲಿಲ್ಲ.
“ನನಗೆ ಬಾಬಾ ಅಮನ್ ಗೊತ್ತಿರುವುದು ನಿಜ, ಮತ್ತು ನಾವು ಆಗಸ್ಟ್‌ನಲ್ಲಿ ಸಚಿವರ ಮನೆಗೆ ಹೋದೆವು. ಆದರೆ ಭೇಟಿಯ ಉದ್ದೇಶವೇ ಬೇರೆಯಾಗಿತ್ತು. ನಾನು ಕೆಲವು ವೈಯಕ್ತಿಕ ಕೆಲಸಗಳಿಗೆ ಹೋಗಿದ್ದೆ. ನಿಹಾಂಗ್ ಪಂಥದ ಮುಖ್ಯಸ್ಥರು ಕೃಷಿ ಕಾಯ್ದೆಗಳಳ ಬಗ್ಗೆ ಮಾತನಾಡುತ್ತಿದ್ದರು. ಆದರೆ ನನ್ನ ಮುಂದೆ ಅವನಿಗೆ ಹಣದ ಪ್ರಸ್ತಾಪ ಮಾಡಿಲ್ಲ. ಅವರು ಮತ್ತು ತೋಮರ್ ನಡುವೆ ಏನಾಯಿತು ಎಂದು ನನಗೆ ಗೊತ್ತಿಲ್ಲ ಎಂದು ಗುರ್ಮೀತ್ ಸಿಂಗ್ ಹೇಳಿದ್ದಾರೆ.
ತೋಮರ್ ರೈತ ಪ್ರತಿಭಟನಾ ನಾಯಕರನ್ನು ಭೇಟಿ ಮಾಡಿ ಕೃಷಿ ಕಾನೂನು ಬಿಕ್ಕಟ್ಟಿನ ಪರಿಹಾರದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಏತನ್ಮಧ್ಯೆ ಪಂಜಾಬ್ ಡೆಪ್ಯುಟಿ ಸಿಎಂ ಸುಖಜಿಂದರ್ ಸಿಂಗ್ ರಾಂಧವಾ ಮಂಗಳವಾರ ನಿಹಾಂಗ್ ನಾಯಕನೊಂದಿಗೆ ತೋಮರ್ ಅವರ ಫೋಟೊ “ಜನರ ಮನಸ್ಸಿನಲ್ಲಿ ಸಂಶಯವನ್ನು” ಹುಟ್ಟುಹಾಕಿದೆ ಎಂದು ಹೇಳಿದ್ದಾರೆ.
ಯಾವುದೇ ಹೆಸರನ್ನು ಉಲ್ಲೇಖಿಸದೆ, ಅದೇ ನಿಹಾಂಗ್ ನಾಯಕನು ಹತ್ಯೆಯ ಪ್ರಮುಖ ಆರೋಪಿಯನ್ನು “ರಕ್ಷಿಸುತ್ತಾನೆ” ಎಂದು ರಾಂಧವಾ ಹೇಳಿದ್ದಾರೆ. ಸಿಖ್ ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸಿದ್ದಕ್ಕಾಗಿ ಆ ಹತ್ಯೆ ಮಾಡಿದೆ ಎಂದು ನಿಹಾಂಗ್ ಗುಂಪು ಹೇಳಿತ್ತು.
ನಿಹಾಂಗ್ ನಾಯಕರಲ್ಲಿ ಒಬ್ಬರು ಕೃಷಿ ಸಚಿವ ಎನ್ ಎಸ್ ತೋಮರ್ ಅವರೊಂದಿಗೆ ಈಗಾಗಲೇ ಸಂಪರ್ಕದಲ್ಲಿದ್ದ ಕಾರಣ ಈ ಹತ್ಯೆ ಪ್ರಕರಣ ಈಗ ಸಂಪೂರ್ಣವಾಗಿ ವಿಭಿನ್ನ ತಿರುವು ಪಡೆದುಕೊಂಡಿದೆ “ಎಂದು ರಾಂಧವಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ರೈತರ ಚಳುವಳಿಯನ್ನು ದೂಷಿಸಲು ಆಳವಾಗಿ ಬೇರೂರಿದ ಪಿತೂರಿ ಕಂಡುಬಂದಿದೆ” ಎಂದು ಸಚಿವರು ಹೇಳಿಕೊಂಡಿದ್ದಾರೆ.
ತರನ್ ತರನ್ ಜಿಲ್ಲೆಯ ಚೀಮಾ ಕಲಾನ್ ಗ್ರಾಮಕ್ಕೆ ಸೇರಿದ ದಲಿತ ಲಖ್ಬೀರ್ ಸಿಂಗ್ ತುಂಬಾ ಬಡವ ಎಂದು ಅವರು ಹೇಳಿದರು. “ಆತನನ್ನು ಸಿಂಘು ಗಡಿಗೆ ಆಮಿಷವೊಡ್ಡಿದವರು ಯಾರು? ಊಟಕ್ಕೆ ಹಣ ಇಲ್ಲದೇ ಇದ್ದ ಆ ವ್ಯಕ್ತಿಯ ಪ್ರಯಾಣಕ್ಕೆ ಹಣ ನೀಡಿದ್ದು ಯಾರು ಎಂಬುದವನ್ನ ನಾವು ಪತ್ತೆ ಮಾಡಬೇಕಾಗಿದೆ” ಎಂದು ಪಂಜಾಬ್ ಸಚಿವರು ಹೇಳಿದರು.
ಯಾವ ಪರಿಸ್ಥಿತಿಯಲ್ಲಿ ಆ ವ್ಯಕ್ತಿಯನ್ನು ತನ್ನ ಮನೆಯಿಂದ ಸಿಂಘು ಗಡಿಗೆ ಕರೆದೊಯ್ಯಲಾಗಿದೆ ಎಂಬುದನ್ನು ಪತ್ತೆ ಮಾಡಲು ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ್ದೇನೆ ಎಂದು ಉಪ ಮುಖ್ಯಮಂತ್ರಿ ಹೇಳಿದರು. ಲಭ್ಯವಿರುವ ಇತ್ತೀಚಿನ ಛಾಯಾಚಿತ್ರ ಸಾಕ್ಷ್ಯಗಳ ದೃಷ್ಟಿಯಿಂದ, ನಿಹಾಂಗ್ ನಾಯಕ ಕೇಂದ್ರ ಕೃಷಿ ಸಚಿವ ಎನ್ ಎಸ್ ತೋಮರ್ ಅವರನ್ನು ಯಾವ ರೀತಿ ಭೇಟಿಯಾಗಿದ್ದರು ಮತ್ತು ಮೂರು ಕಪ್ಪು ಕೃಷಿ ಕಾನೂನುಗಳ ವಿರುದ್ಧ ಪ್ರಚಾರವನ್ನು ಮುನ್ನಡೆಸುತ್ತಿರುವ ರೈತ ಸಂಘಟನೆಗಳಿಂದ ಅವರು ಇದನ್ನು ಮಾಡಲು ಆದೇಶಿಸಿದ್ದಾರೆಯೇ ಎಂಬುದನ್ನು ವಿವರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
“ನಿಹಾಂಗ್ ನಾಯಕ” ಕ್ಯಾಂಪ್ ಮಾಡುತ್ತಿದ್ದ ಸ್ಥಳದ ಪ್ರಾಮುಖ್ಯತೆಯನ್ನು ಗಮನಿಸಿದರೆ, “ಕೇಂದ್ರ ಸಚಿವರೊಂದಿಗಿನ ಅವರ ಸಭೆಗಳ ಬಗ್ಗೆ ರೈತ ಸಂಘಗಳಿಗೆ ಮಾಹಿತಿ ನೀಡುವುದು ಮತ್ತು ನವೀಕರಿಸುವುದು ಅವರ ಕಡೆಯಿಂದ ಕಡ್ಡಾಯವಾಗಿದೆ” ಎಂದು ರಾಂಧವಾ ಹೇಳಿದರು. “ಇದು ಜನರ ಮನಸ್ಸಿನಲ್ಲಿ ನಿಜವಾದ ಅನುಮಾನ ಮತ್ತು ಸಂದೇಹ ಹುಟ್ಟುಹಾಕಿದೆ ಮತ್ತು ಇವುಗಳನ್ನು ಪರಿಹರಿಸಬೇಕಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ನೀವೇನು ಕೆಲಸ ಮಾಡಿದ್ದೀರಿ ಎಂದು ಕೇಳಿದ ವ್ಯಕ್ತಿಯ ಕಪಾಳಕ್ಕೆ ಹೊಡೆದ ಪಂಜಾಬ್ ಕಾಂಗ್ರೆಸ್ ಶಾಸಕ