ಮಧ್ಯಪ್ರದೇಶ: ವ್ಯಾನ್ ಮೇಲೆ ಉರುಳಿ ಬಿದ್ದ ಟ್ರಕ್, 9 ಮಂದಿ ಸಾವು, ಇಬ್ಬರಿಗೆ ಗಾಯ

ಸಿಮೆಂಟ್ ತುಂಬಿದ್ದ ಟ್ರಕ್ ವ್ಯಾನ್​ ಮೇಲೆ ಉರುಳಿ ಬಿದ್ದ ಪರಿಣಾಮ 9 ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಝಬುವಾದಲ್ಲಿ ನಡೆದಿದೆ. ಒಂದೇ ಕುಟುಂಬದ 9 ಸದಸ್ಯರು ಪ್ರಾಣ ಕಳೆದುಕೊಂಡಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ಝಬುವಾ ಜಿಲ್ಲೆಯ ಮೇಘನಗರ ತಹಸಿಲ್​ನ ಸಂಜೆಲಿ ರೈಲ್ವೆ ಕ್ರಾಸಿಂಗ್ ಬಳಿ ಬೆಳಗಿನ ಜಾವ 2.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

ಮಧ್ಯಪ್ರದೇಶ: ವ್ಯಾನ್ ಮೇಲೆ ಉರುಳಿ ಬಿದ್ದ ಟ್ರಕ್, 9 ಮಂದಿ ಸಾವು, ಇಬ್ಬರಿಗೆ ಗಾಯ
ಅಪಘಾತ

Updated on: Jun 04, 2025 | 11:27 AM

ಝಬುವಾ, ಜೂನ್ 04: ಸಿಮೆಂಟ್ ತುಂಬಿದ್ದ ಟ್ರಕ್ ವ್ಯಾನ್​ ಮೇಲೆ ಉರುಳಿ ಬಿದ್ದ ಪರಿಣಾಮ 9 ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಝಬುವಾದಲ್ಲಿ ನಡೆದಿದೆ. ಒಂದೇ ಕುಟುಂಬದ 9 ಸದಸ್ಯರು ಪ್ರಾಣ ಕಳೆದುಕೊಂಡಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ಝಬುವಾ ಜಿಲ್ಲೆಯ ಮೇಘನಗರ ತಹಸಿಲ್​ನ ಸಂಜೆಲಿ ರೈಲ್ವೆ ಕ್ರಾಸಿಂಗ್ ಬಳಿ ಬೆಳಗಿನ ಜಾವ 2.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

ತಾತ್ಕಾಲಿಕ ರಸ್ತೆ ಮೂಲಕ ನಿರ್ಮಾಣ ಹಂತದಲ್ಲಿರುವ ರೈಲು ಮೇಲ್ಸೇತುವೆ ದಾಟುತ್ತಿದ್ದ ಟ್ರಕ್ ಸಮತೋಲನ ಕಳೆದುಕೊಂಡು ಬಿದ್ದಿದೆ. ಮೇಘನಗರ ಬಳಿ ಟ್ರಕ್ ಪಲ್ಟಿಯಾಗಿ ಅವರ ವಾಹನದ ಮೇಲೆ ಬಿದ್ದಿದೆ. ಅಧಿಕಾರಿಗಳ ಪ್ರಕಾರ, ಅಪಘಾತ ಸಂಭವಿಸಿದಾಗ ಅವರು ಮದುವೆ ಸಮಾರಂಭದಿಂದ ಮನೆಗೆ ಹಿಂತಿರುಗುತ್ತಿದ್ದರು.

ಒಂಬತ್ತು ಮಂದಿ ವ್ಯಾನ್‌ನಲ್ಲಿ ಪ್ರಯಾಣಿಸುತ್ತಿದ್ದರು, ಅದು ಟ್ರಕ್‌ನ ಭಾರಕ್ಕೆ ನಜ್ಜುಗುಜ್ಜಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಮತ್ತಷ್ಟು ಓದಿ: ಹಾವೇರಿಯಲ್ಲಿ ಭೀಕರ ಅಪಘಾತ: ಆಡಿ ಕಾರು ಅಪ್ಪಚ್ಚಿ, ದುಬಾರಿ ಕಾರಿನ ಭಯಾನಕ ಫೋಟೋಗಳು

ಬೆಂಗಳೂರಿನ ಮಾರ್ಕೆಟ್ ಫ್ಲೈ ಓವರ್ ಮೇಲೆ ಭೀಕರ ಅಪಘಾತ, ಇಬ್ಬರು ಬಲಿ
ಬೈಕ್ ಅಪಘಾತದಲ್ಲಿ ಇಬ್ಬರು  ಸ್ಥಳದಲ್ಲೇ ಜೀವ ಬಿಟ್ಟಿರುವ ಘಟನೆ ಮೈಸೂರು ರಸ್ತೆಯ ಮಾರ್ಕೆಟ್ ಫ್ಲೈ ಓವರ್​ನಲ್ಲಿ ತಡರಾತ್ರಿ 1 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಎರಡು ಬೈಕ್​ಗಳ ನಡುವೆ ಅಪಘಾತವಾದ ಪರಿಣಾಮ ಆಕಾಶ್ ಹಾಗೂ ಅಫ್ಜಲ್ (25) ಮೃತಪಟ್ಟಿದ್ದಾರೆ.

ಮೃತ ಆಕಾಶ್​ ಕೆ.ಪಿ ಅಗ್ರಹಾರ‌ ನಿವಾಸಿಯಾಗಿದ್ದ, ಗ್ರೈಂಡರ್ ಮೆಕಾನಿಕ್ ಆಗಿ ಕೆಲಸ‌ ಮಾಡುತ್ತಿದ್ದ. ಆದ್ರೆ ಸ್ನೇಹಿತ ಮಣಿ ಜೊತೆ ರಾತ್ರಿ ಊಟ ಮಾಡಲು ಬಂದಿದ್ದ. ಇನ್ನೂ ಮತ್ತೊಬ್ಬ ಬೈಕ್​ ಸವಾರ ಅಫ್ಜಲ್ ಮಂಗಳೂರು ನಿವಾಸಿಯಾಗಿದ್ದ. ವಿಜಯನಗರದಲ್ಲಿ ವಾಸವಾಗಿದ್ದ. ಅಫ್ಜಲ್ ವಿಜಯನಗರದ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡ್ತಿದ್ದ.

ಸ್ನೇಹಿತ ಆಶಿಮ್‌ ಜೊತೆ ಕೆಲಸಕ್ಕೆ ಹೋಗುತ್ತಿದ್ದಾಗ ಮುಂದೆ ಹೋಗ್ತಿದ್ದ ಎಲೆಕ್ಟ್ರಿಕ್​ ಬೈಕ್​ಗೆ ಹಿಂಬದಿಯಿಂದ ಬಂದ ಎಕ್ಸ್ ಪಲ್ಸ್ ಬೈಕ್ ಗುದ್ದಿದೆ. ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಜೀವಬಿಟ್ಟಿದ್ದಾರೆ. ಈ ಘಟನೆ ಸಂಬಂಧ ಸಿಟಿ ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ