AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂದೆ ಮುಸ್ಲಿಂ, ತಾಯಿ ಹಿಂದೂ, ಮಗನಿಗೆ ಇಸ್ಲಾಂ ಇಷ್ಟವಿಲ್ಲ, ಕೋರ್ಟ್​ ಕೊಟ್ಟ ತೀರ್ಪೇನು?

ತಂದೆ ಮುಸ್ಲಿಂ(Muslim), ತಾಯಿ ಹಿಂದೂ(Hindu), ಮಗನಿಗೆ ಇಸ್ಲಾಂ ಧರ್ಮ ಇಷ್ಟವಿಲ್ಲ, ಹೀಗಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಘಟನೆ ಕೇರಳದಲ್ಲಿ ನಡೆದಿದೆ. ತನ್ನ ದಾಖಲೆಗಳಲ್ಲಿ ಧರ್ಮವನ್ನು ಬದಲಾಯಿಸುವ ಸಂದರ್ಭದಲ್ಲಿ ಸಾಕಷ್ಟು ಅಡತಡೆಗಳನ್ನು ಎದುರಿಸಿದರು.ಕೊನೆಗೆ ಈ ಪ್ರಕರಣ ಕೇರಳ ಹೈಕೋರ್ಟ್​ ಮೆಟ್ಟಿಲೇರಿತು. ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದೆ.

ತಂದೆ ಮುಸ್ಲಿಂ, ತಾಯಿ ಹಿಂದೂ, ಮಗನಿಗೆ ಇಸ್ಲಾಂ ಇಷ್ಟವಿಲ್ಲ, ಕೋರ್ಟ್​ ಕೊಟ್ಟ ತೀರ್ಪೇನು?
ಕೇರಳ ಹೈಕೋರ್ಟ್​
ನಯನಾ ರಾಜೀವ್
|

Updated on: Jun 04, 2025 | 12:34 PM

Share

ತಿರುವನಂತಪುರಂ, ಜೂನ್ 04: ತಂದೆ ಮುಸ್ಲಿಂ(Muslim), ತಾಯಿ ಹಿಂದೂ(Hindu), ಮಗನಿಗೆ ಇಸ್ಲಾಂ ಧರ್ಮ ಇಷ್ಟವಿಲ್ಲ, ಹೀಗಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಘಟನೆ ಕೇರಳದಲ್ಲಿ ನಡೆದಿದೆ. ತನ್ನ ದಾಖಲೆಗಳಲ್ಲಿ ಧರ್ಮವನ್ನು ಬದಲಾಯಿಸುವ ಸಂದರ್ಭದಲ್ಲಿ ಸಾಕಷ್ಟು ಅಡತಡೆಗಳನ್ನು ಎದುರಿಸಿದರು.ಕೊನೆಗೆ ಈ ಪ್ರಕರಣ ಕೇರಳ ಹೈಕೋರ್ಟ್​ ಮೆಟ್ಟಿಲೇರಿತು. ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದೆ.

ವಾಸ್ತವವಾಗಿ, ಕೇರಳ ಹೈಕೋರ್ಟ್​​ ಇತ್ತೀಚೆಗೆ, ಸ್ವಇಚ್ಛೆಯಿಂದ ತನ್ನ ಧರ್ಮವನ್ನು ಬದಲಾಯಿಸುವ ವ್ಯಕ್ತಿಗೆ ಸಂವಿಧಾನದ 25ನೇ ವಿಧಿಯ ಅಡಿಯಲ್ಲಿ ತನ್ನ ಧಾರ್ಮಿಕ ಮತಾಂತರವನ್ನು ಅಧಿಕೃತ ಶಾಲಾ ದಾಖಲೆಗಳಲ್ಲಿ ದಾಖಲಿಸುವ ಮೂಲಭೂತ ಹಕ್ಕಿದೆ ಎಂದು ತೀರ್ಪು ನೀಡಿದೆ. 25ನೇ ವಿಧಿಯ ಅಡಿಯಲ್ಲಿ ನಾಗರಿಕರು ಅಧಿಕೃತ ದಾಖಲೆಗಳಲ್ಲಿ ಬದಲಾವಣೆಗಳನ್ನು ದಾಖಲಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ನ್ಯಾಯಮೂರ್ತಿ ಡಿಕೆ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ ಏನು ಹೇಳಿದೆ? ಯಾವುದೇ ಒತ್ತಡ, ವಂಚನೆ, ಅನಗತ್ಯ ಪ್ರಭಾವವಿಲ್ಲದೆ ಯಾವುದೇ ವ್ಯಕ್ತಿ ತನ್ನ ಧರ್ಮವನ್ನು ಬದಲಾಯಿಸಿದರೆ, ಅವರು ಭಾರತದ ಸಂವಿಧಾನದ 25ನೇ ವಿಧಿಯಡಿಯಲ್ಲಿ ರಕ್ಷಣೆ ಪಡೆಯುತ್ತದೆ ಎಂದು ಹೈಕೋರ್ಟ್​ ತನ್ನ ತೀರ್ಪಿನಲ್ಲಿ ಹೇಳಿದೆ.

ಪ್ರತಿಯೊಬ್ಬ ವ್ಯಕ್ತಿಯು ತನ್ನ ಆಯ್ಕೆಯ ಧಾರ್ಮಿಕ ನಂಬಿಕೆಯನ್ನು ಅನುಸರಿಸುವ ಮೂಲಭೂತ ಹಕ್ಕನ್ನು ಹೊಂದಿರುವುದಲ್ಲದೆ, ಇತರರ ಧಾರ್ಮಿಕ ಹಕ್ಕುಗಳು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸದ ರೀತಿಯಲ್ಲಿ ಈ ನಂಬಿಕೆ ಮತ್ತು ವಿಚಾರಗಳನ್ನು ಪ್ರದರ್ಶಿಸುವ ಹಕ್ಕನ್ನು ಸಹ ಹೊಂದಿರುತ್ತಾನೆ.

ಮತ್ತಷ್ಟು ಓದಿ: ಧರ್ಮ, ಜನಾಂಗದ ನಡುವೆ ದ್ವೇಷ ಹಬ್ಬಿಸುವ ವಿಡಿಯೋ ಪೋಸ್ಟ್: ಯಾದಗಿರಿ ನಿವಾಸಿ ಜಾಫರ್ ಖಾನ್ ಬಂಧನ

ವ್ಯಕ್ತಿಯೊಬ್ಬರು ಕೇರಳ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ತನ್ನ ತಂದೆ ಮುಸ್ಲಿಂ ಮತ್ತು ತಾಯಿ ಹಿಂದೂ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು, ತನ್ನ ತಾಯಿ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಹಿಂದೂ ಪದ್ಧತಿಗಳ ಪ್ರಕಾರ ತನ್ನನ್ನು ಬೆಳೆಸಿದ್ದರು. ಶಾಲೆಯಲ್ಲಿ ತನ್ನ ಹೆಸರನ್ನು ಮೊಹಮ್ಮದ್ ರಿಯಾಜುದ್ದೀನ್ ಸಿಎಸ್ ಎಂದು ನೋಂದಾಯಿಸಲಾಗಿತ್ತು.

ತಾನು ಇಸ್ಲಾಂನಲ್ಲಿ ನಂಬಿಕೆ ಇಡುವುದಿಲ್ಲ ಮತ್ತು ಹಿಂದೂ ಧರ್ಮವನ್ನು ಅನುಸರಿಸಲು ಬಯಸಿದ್ದೇನೆ ಎಂದು ಹೇಳಿದ್ದಾರೆ. ಆತ ಆರ್ಯ ಸಮಾಜದ ಮೂಲಕ ಅಧಿಕೃತವಾಗಿ ಧರ್ಮ ಬದಲಾಯಿಸಿದ್ದಾರೆ ಮತ್ತು ತನ್ನ ಹೊಸ ಹೆಸರನ್ನು ಸುಧೀನ್ ಕೃಷ್ಣ ಸಿಎಸ್ ಮತ್ತು ಧರ್ಮವನ್ನು ಹಿಂದೂ ಎಂದು ನಮೂದಿಸಿದ್ದಾರೆ ಎಂದು ಹೇಳಿದ್ದಾರೆ.

ಅವರು ತನ್ನ ಎಸ್​ಎಸ್​ಎಲ್​ಸಿ ದಾಖಲೆ ನವೀಕರಿಸಲು ಬಯಸಿದ್ದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಶಾಲಾ ದಾಖಲೆಗಳಲ್ಲಿ ಜಾತಿ ಮತ್ತು ಧರ್ಮವನ್ನು ಬದಲಾಯಿಸಲು ಕೇರಳ ಶಿಕ್ಷಣ ಕಾಯ್ದೆ ಮತ್ತು ನಿಯಮಗಳಲ್ಲಿ ಯಾವುದೇ ಅವಕಾಶವಿಲ್ಲ ಎಂದು ಶಾಲೆಯು ವಾದಿಸಿತು. ನಂತರ ಅವರು ಹೈಕೋರ್ಟ್​ ಮೆಟ್ಟಿಲೇರಿದ್ದರು, ಈಗ ತೀರ್ಪು ಅವರ ಪರವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ