ನೀರವ್​ ಮೋದಿ ಹಗರಣಕ್ಕೆ ಸಂಬಂಧಿಸಿದಂತೆ ಆತನ ಸಹೋದರಿಯೇ ಪ್ರಮುಖ ಸಾಕ್ಷಿ

ಅಕ್ರಮ ಹಣ ವರ್ಗಾವಣೆ ನಿಯಂತ್ರಣಾ ಕಾಯ್ದೆ (PMLA) ಅಡಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದ ವಿಶೇಷ ನ್ಯಾಯಾಧೀಶರು ಪೂರ್ವಿ ಮೋದಿಯನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಲು ಅನುಮತಿ ಸೂಚಿಸಿದ್ದಾರೆ.

ನೀರವ್​ ಮೋದಿ ಹಗರಣಕ್ಕೆ ಸಂಬಂಧಿಸಿದಂತೆ ಆತನ ಸಹೋದರಿಯೇ ಪ್ರಮುಖ ಸಾಕ್ಷಿ
ನೀರವ್​ ಮೋದಿ ( ಸಂಗ್ರಹ ಚಿತ್ರ)
Edited By:

Updated on: Jan 06, 2021 | 6:58 PM

ಮುಂಬೈ: ದೇಶ ಬಿಟ್ಟು ಓಡಿ ಹೋಗಿರುವ ವಜ್ರ ವ್ಯಾಪಾರಿ ನೀರವ್​ ಮೋದಿ ಸಹೋದರಿ ಪೂರ್ವಿ ಮೋದಿಯನ್ನು ಹಗರಣದ ಪ್ರಮುಖ ಸಾಕ್ಷ್ಯವಾಗಿಸುವುದಕ್ಕೆ ಮುಂಬೈ ವಿಶೇಷ ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ. ಅಕ್ರಮ ಹಣ ವರ್ಗಾವಣೆ ನಿಯಂತ್ರಣಾ ಕಾಯ್ದೆ (PMLA) ಅಡಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದ ವಿಶೇಷ ನ್ಯಾಯಾಧೀಶರು ಪೂರ್ವಿ ಮೋದಿಯನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಲು ಅನುಮತಿ ಸೂಚಿಸಿದ್ದಾರೆ.

ಬೆಲ್ಜಿಯನ್​ ಪ್ರಜೆಯಾಗಿರುವ ಪೂರ್ವಿ ಮೋದಿಯನ್ನು ಪ್ರಕರಣದ ಆರೋಪಿಯೆಂದು ಜಾರಿ ನಿರ್ದೇಶನಾಲಯ ಪರಿಗಣಿಸಿದೆ. ಆದರೆ, ಕ್ಷಮಾಪಣೆ ಅರ್ಜಿ ಸಲ್ಲಿಸಿರುವ ಪೂರ್ವಿ, ತಾನು ಈ ಪ್ರಕರಣದಲ್ಲಿ ನೇರವಾಗಿ ಭಾಗಿ ಆಗಿಲ್ಲವೆಂದೂ, ತನ್ನನ್ನು ಸಾಕ್ಷಿ ಎಂದು ಪರಿಗಣಿಸಬೇಕೆಂದೂ ಮನವಿ ಮಾಡಿದ್ದರು. ಸದ್ಯ ಇದಕ್ಕೆ ಅಸ್ತು ಎಂದಿರುವ ನ್ಯಾಯಾಲಯ ವಿದೇಶದಲ್ಲಿರುವ ಪೂರ್ವಿ ಪ್ರಕರಣದ ವಿಚಾರಣೆ ಸಂದರ್ಭ ಹಾಜರಾಗಬೇಕೆಂದು ಆದೇಶಿಸಿದೆ.

ನ್ಯೂಯಾರ್ಕ್​ನಲ್ಲಿ ₹ 19 ಕೋಟಿ ಮೌಲ್ಯದ ವಂಚನೆ: ನೀರವ್ ಮೋದಿ ಸೋದರ ನೆಹಾಲ್ ವಿರುದ್ಧ ಆರೋಪ