ಕಾರಿನ ಹಿಂಬದಿ ಸೀಟಿನಲ್ಲಿ ಕೂರುವವರು ಸೀಟ್​​​ ಬೆಲ್ಟ್​​​ನ ಅಗತ್ಯ ಇಲ್ಲ ಎಂದು ಭಾವಿಸುತ್ತಾರೆ: ನಿತಿನ್ ಗಡ್ಕರಿ

Nitin Gadkari ಜನಸಾಮಾನ್ಯರನ್ನು ಮರೆತುಬಿಡಿ, ನಾನು ನಾಲ್ಕು ಮುಖ್ಯಮಂತ್ರಿಗಳ ಕಾರಿನಲ್ಲಿ ಪ್ರಯಾಣಿಸಿದ್ದೇನೆ, ಅವರ ಹೆಸರನ್ನು ಕೇಳಬೇಡಿ, ನಾನು ಮುಂದಿನ ಸೀಟಿನಲ್ಲಿದ್ದೆ, ನೀವು ಬೆಲ್ಟ್ ಧರಿಸದಿದ್ದರೆ ಅಲಾರಾಂ ಇದೆ.

ಕಾರಿನ ಹಿಂಬದಿ ಸೀಟಿನಲ್ಲಿ ಕೂರುವವರು ಸೀಟ್​​​ ಬೆಲ್ಟ್​​​ನ ಅಗತ್ಯ ಇಲ್ಲ ಎಂದು ಭಾವಿಸುತ್ತಾರೆ: ನಿತಿನ್ ಗಡ್ಕರಿ
ನಿತಿನ್ ಗಡ್ಕರಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 06, 2022 | 5:07 PM

ದೆಹಲಿ: ಕಾರು ಅಪಘಾತದಲ್ಲಿ ಸೈರಸ್ ಮಿಸ್ತ್ರಿ (Cyrus Mistry) ಅವರ ಸಾವು ಕಾರು ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಸೋಮವಾರ ರಸ್ತೆ ಅಪಘಾತಗಳನ್ನು ಪರಿಶೀಲಿಸುವ ಯಾವುದೇ ಪ್ರಯತ್ನವು ಜನರ ಸಹಕಾರವಿಲ್ಲದೆ ಫಲಪ್ರದವಾಗುವುದಿಲ್ಲ ಎಂದು ಹೇಳಿದ್ದಾರೆ. 54 ವರ್ಷದ ಸೈರಸ್ ಮಿಸ್ತ್ರಿ ಅವರು ಅಹಮದಾಬಾದ್‌ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಕಾರು ಅತಿವೇಗದಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷರು ಹಿಂದಿನ ಸೀಟಿನಲ್ಲಿದ್ದರು ಮತ್ತು ಸೀಟ್ ಬೆಲ್ಟ್ ಧರಿಸಿರಲಿಲ್ಲ. ಹಿಂಬದಿ ಸೀಟಿನಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಜಹಾಂಗೀರ್ ಪಾಂಡೋಲೆ ಕೂಡ ಸಾವನ್ನಪ್ಪಿದ್ದಾರೆ. “ಹಿಂದೆ ಕುಳಿತುಕೊಳ್ಳುವವರು ಸೀಟ್ ಬೆಲ್ಟ್ ಧರಿಸಬೇಕಿಂದಿಲ್ಲ ಎಂದು ಜನರು ಭಾವಿಸುತ್ತಾರೆ. ಯಾವುದೇ ಅಪಘಾತದ ಬಗ್ಗೆ ನಾನು ಯಾವುದೇ ಕಾಮೆಂಟ್ ಮಾಡಲು ಬಯಸುವುದಿಲ್ಲ. ಆದರೆ ಹಿಂಭಾಗದಲ್ಲಿರುವ ಜನರು ಮುಂಭಾಗದ ಸೀಟಿನವರು ಮಾತ್ರ ಬೆಲ್ಟ್ ಧರಿಸಬೇಕೆಂದು ಭಾವಿಸುತ್ತಾರೆ. ಮುಂಭಾಗದ ಆಸನಗಳಲ್ಲಿರುವವರಿಗೂ ಹಿಂಬದಿಯಲ್ಲಿ ಕುಳಿತವರಿಗೂ ಸೀಟ್ ಬೆಲ್ಟ್ ಅಗತ್ಯವಿದೆ ಎಂದು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಐಎಎಯ ಜಾಗತಿಕ ಶೃಂಗಸಭೆಯಲ್ಲಿ ಮಾತನಾಡುತ್ತಿದ್ದರವರು. ಮುಖ್ಯಮಂತ್ರಿಗಳು ಕೂಡ ಕಾರು ಸುರಕ್ಷತಾ ನಿಯಮಗಳನ್ನು ಪಾಲಿಸುವುದಿಲ್ಲ ಎಂದಿದ್ದಾರೆ ಗಡ್ಕರಿ.

“ಜನಸಾಮಾನ್ಯರನ್ನು ಮರೆತುಬಿಡಿ, ನಾನು ನಾಲ್ಕು ಮುಖ್ಯಮಂತ್ರಿಗಳ ಕಾರಿನಲ್ಲಿ ಪ್ರಯಾಣಿಸಿದ್ದೇನೆ, ಅವರ ಹೆಸರನ್ನು ಕೇಳಬೇಡಿ, ನಾನು ಮುಂದಿನ ಸೀಟಿನಲ್ಲಿದ್ದೆ, ನೀವು ಬೆಲ್ಟ್ ಧರಿಸದಿದ್ದರೆ ಅಲಾರಾಂ ಇದೆ. ಇಲ್ಲಿ ನಮಗೆ ಸಹಕಾರ ಬೇಕು. ನಾಲ್ವರು ಮುಖ್ಯಮಂತ್ರಿಗಳ ಕಾರುಗಳಲ್ಲಿ ನಾನು ಇದನ್ನು ನೋಡಿರುವೆ. ನಾನು ಈ ಅಭ್ಯಾಸವನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದೇನೆ” ಎಂದು ಗಡ್ಕರಿ ಹೇಳಿದರು. ತಮ್ಮ ಸಚಿವಾಲಯವು ಕಾರುಗಳಿಗೆ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಪ್ರಯತ್ನದಲ್ಲಿದೆ ಎಂದು ಅವರು ಹೇಳಿದರು. ಆರು ಏರ್‌ಬ್ಯಾಗ್‌ಗಳು ಕಡಿಮೆ ಬೆಲೆಯ ಕಾರುಗಳ ಬೆಲೆಯನ್ನು ಹೆಚ್ಚಿಸುತ್ತವೆ ಮತ್ತು ಮಾರಾಟವನ್ನು ಕಡಿಮೆ ಮಾಡುತ್ತವೆ ಎಂದು ಭಾರತೀಯ ತಯಾರಕರು ಹೇಳಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಗಡ್ಕರಿ ಅವರು ವಿದೇಶದಲ್ಲಿ ಇದನ್ನು ಅನುಸರಿಸುತ್ತಾರೆ. ಭಾರತದಲ್ಲಿ ಬಡವರ ಜೀವನವು ಯಾವುದಕ್ಕೂ ಯೋಗ್ಯವಾಗಿಲ್ಲವೇ?” ಪ್ರತಿ ಏರ್‌ಬ್ಯಾಗ್‌ಗೆ ₹ 900 ಹೆಚ್ಚುವರಿ ವೆಚ್ಚವಾಗಲಿದೆ ಎಂದು ಅವರು ಹೇಳಿದರು.

“ನಾನು ಉದ್ಯಮದವರಲ್ಲಿ ಹೇಳಿದ್ದೇನೆ. ಜನರು ಸಾಯುತ್ತಿದ್ದಾರೆ. ನನಗೇ ಅಪಘಾತ ಸಂಭವಿಸಿದೆ. ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಾನದಂಡಗಳಿವೆ. ನಾವು ಅದರಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಜೀವ ಉಳಿಸುವುದು ನಮ್ಮ ಹೆಚ್ಚಿನ ಆದ್ಯತೆಯಾಗಿದೆ ಎಂದಿದ್ದಾರೆ. ಗಡ್ಕರಿ ಅವರು ಸೈರಸ್ ಮಿಸ್ತ್ರಿ ಅವರ ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಅವರು ನನಗೆ ಉತ್ತಮ ಸ್ನೇಹಿತರಾಗಿದ್ದರು. ನಿಜವಾಗಿಯೂ ಇದು ದೇಶಕ್ಕೆ ದೊಡ್ಡ ಆಘಾತವಾಗಿದೆ. ನಮ್ಮ ಸಮಸ್ಯೆ ಏನೆಂದರೆ ಪ್ರತಿ ವರ್ಷ ಐದು ಲಕ್ಷ ಅಪಘಾತಗಳು ಮತ್ತು 1,50,000 ರಸ್ತೆ ಅಪಘಾತಗಳಿಂದ ಸಾವುಗಳು ಸಂಭವಿಸುತ್ತವೆ. ಅಹಮದಾಬಾದ್-ಮುಂಬೈ ಹೆದ್ದಾರಿಗೆ ಅತ್ಯಂತ ಅಪಾಯಕಾರಿ ಎಂದಿದ್ದಾರೆ ಗಡ್ಕರಿ.

ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ