ಕೊವ್ಯಾಕ್ಸಿನ್ ಲಸಿಕೆಯಲ್ಲಿ ಕರುವಿನ ಸೀರಮ್ ಬಳಸಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ಕೊವ್ಯಾಕ್ಸಿನ್ ಲಸಿಕೆಯನ್ನು ರೂಪಿಸುವಾಗ ನಡೆದ ಪ್ರಯೋಗಗಳಲ್ಲಿ, ಸಿದ್ಧತೆಯ ಹಂತದಲ್ಲಿ ಮಾತ್ರ ಕರುಗಳ ಸೀರಮ್‌ ಬಳಕೆಯಾಗಿತ್ತು. ಆದರೆ ಅಂತಿಮ ಹಂತದಲ್ಲಿ ಹೊರಬಂದಿರುವ ಕೊವ್ಯಾಕ್ಸಿನ್ ಲಸಿಕೆಗಳಲ್ಲಿ ಕರುವಿನ ರಕ್ತದ ಕಣಗಳು ಇರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

  • Updated On - 6:04 pm, Wed, 16 June 21 Edited By: Ghanashyam D M | ಡಿ.ಎಂ.ಘನಶ್ಯಾಮ
ಕೊವ್ಯಾಕ್ಸಿನ್ ಲಸಿಕೆಯಲ್ಲಿ ಕರುವಿನ ಸೀರಮ್ ಬಳಸಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ
ಸಾಂದರ್ಭಿಕ ಚಿತ್ರ

ದೆಹಲಿ: ಕೊವ್ಯಾಕ್ಸಿನ್ ಲಸಿಕೆಯಲ್ಲಿ ಕರುವಿನ ಅಂಗಾಂಗಳಿಂದ ಬೇರ್ಪಡಿಸಿದ ದ್ರವ (ಸೀರಮ್) ಬಳಕೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಬುಧವಾರ ಸ್ಪಷ್ಟನೆ ನೀಡಿದೆ. ಕೊವ್ಯಾಕ್ಸಿನ್ ಲಸಿಕೆಯನ್ನು ರೂಪಿಸುವಾಗ ನಡೆದ ಪ್ರಯೋಗಗಳಲ್ಲಿ, ಸಿದ್ಧತೆಯ ಹಂತದಲ್ಲಿ ಮಾತ್ರ ಕರುಗಳ ಸೀರಮ್‌ ಬಳಕೆಯಾಗಿತ್ತು. ಆದರೆ ಅಂತಿಮ ಹಂತದಲ್ಲಿ ಹೊರಬಂದಿರುವ ಕೊವ್ಯಾಕ್ಸಿನ್ ಲಸಿಕೆಗಳಲ್ಲಿ ಕರುವಿನ ರಕ್ತದ ಕಣಗಳು ಇರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಕೊವ್ಯಾಕ್ಸಿನ್ ಅಂತಿಮ ಹಂತದ ಲಸಿಕೆಯಲ್ಲಿ ಕರುವಿನ ಸೀರಮ್‌ ಇರುವುದಿಲ್ಲ. ನವಜಾತ ಕರುಗಳ ಸೀರಮ್ ಅನ್ನು ವೆರೊ ಜೀವಕೋಶಗಳ ಬೆಳವಣಿಗೆಗೆ ಮಾತ್ರ ಬಳಕೆ ಮಾಡಲಾಗುತ್ತದೆ. ಈ ತಂತ್ರಜ್ಞಾನ ಹಲವು ದಶಕಗಳಿಂದ ಬಳಕೆಯಲ್ಲಿದೆ. ಪೋಲಿಯೊ, ರೇಬಿಸ್‌ ಸೇರಿದಂತೆ ಹಲವು ಲಸಿಕೆಗಳಲ್ಲಿಯೂ ಈ ತಂತ್ರ ಬಳಕೆಯಾಗುತ್ತಿದೆ. ನೀರು, ಕೆಮಿಕಲ್‌ನಿಂದ ವೆರೊ ಜೀವಕೋಶ ತೊಳೆದ ಬಳಿಕ ಜೀವಕೋಶಗಳಿಗೆ ವೈರಾಣು ಸೋಂಕು ತಗುಲಿಸಲಾಗುತ್ತೆ ಎಂದು ಕೇಂದ್ರ ಹೇಳಿದೆ.

ವೈರಾಣುವಿನ ಬೆಳವಣಿಗೆ ಪ್ರಕ್ರಿಯೆಯಲ್ಲಿ ಜೀವಕೋಶಗಳನ್ನು ನಾಶ ಮಾಡಲಾಗುತ್ತೆ. ಜೀವಂತ ವೈರಾಣುಗಳನ್ನು ಪರಿಶುದ್ಧಗೊಳಿಸಿದ ಬಳಿಕವೇ ಕೊರೊನಾ ಲಸಿಕೆ ಸಿದ್ಧವಾಗುತ್ತದೆ. ಅಂತಿಮ ಹಂತದ ಕೊರೊನಾ ಲಸಿಕೆಯಲ್ಲಿ ಕರುವಿನ ಸೀರಮ್‌ ಇರುವುದಿಲ್ಲ ಎಂದು ಈ ಸಂಬಂಧ ಹರಡಿದ್ದ ವದಂತಿಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ. ಕೊವ್ಯಾಕ್ಸಿನ್ ಲಸಿಕೆಯ ಸಿದ್ಧತೆಯ ಹಂತದಲ್ಲಿ ಮಾತ್ರ ಕರುಗಳ ಸಿರಮ್ ಬಳಕೆಯಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಹಸು ಮತ್ತು ಇತರ ಪ್ರಾಣಿಗಳ ಸೀರಮ್​ ಅನ್ನು ವೆರೊ ಕೋಶಗಳ ಬೆಳವಣಿಗೆಗೆ ವಿಶ್ವದ ಹಲವು ದೇಶಗಳು ಪೌಷ್ಟಿಕಾಂಶದ ವಸ್ತುವಾಗಿ (ಇನ್‌ಗ್ರೇಡಿಯಂಟ್‌) ಬಳಸುತ್ತಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

(No Calf Serum Residue in Covaxin Vaccine Says Govt of India)

ಇದನ್ನೂ ಓದಿ: ವೆಚ್ಚ ತೂಗಿಸಿಕೊಳ್ಳಲು ಖಾಸಗಿ ಮಾರುಕಟ್ಟೆಯಲ್ಲಿ ಕೊವ್ಯಾಕ್ಸಿನ್ ಲಸಿಕೆ ದರ ಹೆಚ್ಚು ಮಾಡುವುದು ಅನಿವಾರ್ಯ: ಭಾರತ್ ಬಯೋಟೆಕ್​

ಇದನ್ನೂ ಓದಿ: ಲಸಿಕೆ ಕೊರತೆ, ನಿಷ್ಕ್ರಿಯತೆ ಮುಚ್ಚಿ ಹಾಕಲು ಮೋದಿ ಸರ್ಕಾರ ಸುಳ್ಳು ಹೇಳುತ್ತಿದೆ; ರಾಹುಲ್ ಗಾಂಧಿ ಟ್ವೀಟ್