AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

7ವರ್ಷಗಳ ನಂತರ ಸೆರೆಯಾಯ್ತು ಹುಲಿಯ ಫೋಟೋ; ಕಣ್ಣಿಗೆ ಸ್ವಲ್ಪ ಕೆಲಸಕೊಟ್ಟು ಈ ಫೋಟೋದಲ್ಲಿ ಹುಲಿಯೆಲ್ಲಿದೆ ಹುಡುಕಿ!

ಇನ್ನು ಈ ಕ್ಯಾಮರಾವನ್ನು ಇಟ್ಟಿದ್ದು ಅರಣ್ಯ ರಕ್ಷಕ ಜುಖುಮಾ ಡಾನ್​ ಎಂದು Sanctuary Asia ತಿಳಿಸಿದೆ. ಇವರು ಹಿರಿಯ ಅರಣ್ಯ ಸಂರಕ್ಷಣಾ ಸಿಬ್ಬಂದಿಯಾಗಿದ್ದು, ಡಂಪಾದ ಅರಣ್ಯಗಳಲ್ಲಿ ಹಲವು ವರ್ಷಗಳಿಂದಲೂ ಗಸ್ತು ತಿರುಗುವ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

7ವರ್ಷಗಳ ನಂತರ ಸೆರೆಯಾಯ್ತು ಹುಲಿಯ ಫೋಟೋ; ಕಣ್ಣಿಗೆ ಸ್ವಲ್ಪ ಕೆಲಸಕೊಟ್ಟು ಈ ಫೋಟೋದಲ್ಲಿ ಹುಲಿಯೆಲ್ಲಿದೆ ಹುಡುಕಿ!
ಈ ಚಿತ್ರದಲ್ಲಿರುವ ಹುಲಿಯನ್ನು ಹುಡುಕಿ
TV9 Web
| Edited By: |

Updated on:Jun 16, 2021 | 8:50 PM

Share

ಈ ಫೋಟೋವನ್ನು ಸುಮ್ಮನೆ ನೋಡಿ..ಬಿಡಬೇಡಿ. ಅಯ್ಯೋ..ಇದರಲ್ಲೇನಿದೆ? ಕಪ್ಪು-ಬಿಳುಪು ಫೋಟೊ ಎಂದುಕೊಳ್ಳಬೇಡಿ. ಇದೊಂದು ಐತಿಹಾಸಿಕ ಚಿತ್ರ ಮತ್ತು ತಾಳ್ಮೆಯಿಂದ, ಸೂಕ್ಷ್ಮವಾಗಿ ಗಮನಿಸಿದರೆ ಫೋಟೋದಲ್ಲಿ ಹುಲಿಯೊಂದು ನಿಮಗೆ ಕಾಣಿಸುತ್ತದೆ. ಹಾಗಂತ ಇದು ಬುದ್ದಿಗೆ ಕಸರತ್ತು ನೀಡುವ ಪೇಂಟಿಂಗ್​ ಅಲ್ಲ. ಮಿಜೋರಾಂನ ಡಂಪಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸೆರೆ ಹಿಡಿದ ಫೋಟೋ. ಹಾಗೂ ಬರೋಬ್ಬರಿ 7 ವರ್ಷಗಳ ಬಳಿಕ ಇಲ್ಲೊಂದು ಹುಲಿಯ ಫೋಟೋ ಸೆರೆಯಾಗಿದ್ದು ಇನ್ನಷ್ಟು ವಿಶೇಷವಾಗಿದೆ.

2014ರಲ್ಲಿ ಈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಯೊಂದು ಫೋಟೋಕ್ಕೆ ಸಿಕ್ಕಿತ್ತು. ಅದಾದ ನಂತರ ಇಲ್ಲಿ ಒಂದೇ ಒಂದು ಹುಲಿಯ ಚಿತ್ರವನ್ನೂ ಸೆರೆ ಹಿಡಿಯಲು ಸಾಧ್ಯವಾಗಿರಲಿಲ್ಲ. ಏಳುವರ್ಷಗಳ ಬಳಿಕ ಇದೇ ಮೊದಲಬಾರಿಗೆ ಈಗೊಂದು ಹುಲಿ ಫೋಟೋದಲ್ಲಿ ಸೆರೆಸಿಕ್ಕಿದೆ. ಹಾಗೇ ಚಿತ್ರವನ್ನು Sanctuary Asia ತನ್ನ ಇನ್​​ಸ್ಟಾಗ್ರಾಂ ಪೇಜ್​​ನಲ್ಲಿ ಪೋಸ್ಟ್​ ಮಾಡಿದೆ. ಇದನ್ನೊಂದು ಐತಿಹಾಸಿಕ ಚಿತ್ರ ಎಂದು ಉಲ್ಲೇಖಿಸಿರುವ Sanctuary Asia, ನಿಮಗೆ ಇದರಲ್ಲಿ ಹುಲಿ ಕಾಣಿಸದೆ ಇದ್ದರೆ, ಇನ್ನಷ್ಟು ಹತ್ತಿರ ಹಿಡಿದು ನೋಡಿ ಎಂದೂ ಹೇಳಿದೆ. ಈ ಕಪ್ಪು-ಬಿಳುಪಿನ ಫೋಟೋದಲ್ಲಿ ನೀವು ಮರಗಿಡ, ಪೊದೆಗಳನ್ನು ಕಾಣಬಹುದು. ಆದರೆ ಹತ್ತಿರದಲ್ಲಿ ಹಿಡಿದು ನೋಡಿದಾಗ ಎಡಭಾಗದ ಮೂಲೆಯಲ್ಲಿ ಎರಡು ಕಣ್ಣುಗಳು ಹೊಳೆಯುತ್ತಿರುವುದು ಕಾಣುತ್ತದೆ.

ಮಂಗಳವಾರ ಫೋಟೋವನ್ನು ಪೋಸ್ಟ್​ ಮಾಡಲಾಗಿದ್ದು, 5 ಸಾವಿರಕ್ಕೂ ಹೆಚ್ಚು ಲೈಕ್ಸ್​​ ಪಡೆದುಕೊಂಡಿದೆ. ನೂರಾರು ಜನರು ಕಾಮೆಂಟ್​ ಮಾಡಿದ್ದಾರೆ. ಕೆಲವರು ನಮಗೆ ಪತ್ತೆಯಾಯಿತು ಎಂದು ಕಾಮೆಂಟ್ ಬರೆದಿದ್ದರೆ, ಇನ್ನೂ ಕೆಲವರು..ನಮಗೇನೂ ಕಾಣಿಸುತ್ತಿಲ್ಲ ಎಂದಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ, ನನಗೆ 20-25 ಸೆಕೆಂಡ್​ ಬೇಕಾಯಿತು ಹುಲಿಯನ್ನು ಪತ್ತೆ ಹಚ್ಚಲು ಎಂದಿದ್ದಾರೆ. ಏಳುವರ್ಷಗಳ ಬಳಿಕ ಹುಲಿಯ ಫೋಟೋ ಸೆರೆಯಾಗಿದ್ದಕ್ಕೆ, ಕ್ಯಾಮರಾವನ್ನು ಅಲ್ಲಿಟ್ಟಿದ್ದ ಅರಣ್ಯ ಸಿಬ್ಬಂದಿಗೆ ಹಲವರು ಶುಭಕೋರಿದ್ದಾರೆ.

ಇನ್ನು ಈ ಕ್ಯಾಮರಾವನ್ನು ಇಟ್ಟಿದ್ದು ಅರಣ್ಯ ರಕ್ಷಕ ಜುಖುಮಾ ಡಾನ್​ ಎಂದು Sanctuary Asia ತಿಳಿಸಿದೆ. ಇವರು ಹಿರಿಯ ಅರಣ್ಯ ಸಂರಕ್ಷಣಾ ಸಿಬ್ಬಂದಿಯಾಗಿದ್ದು, ಡಂಪಾದ ಅರಣ್ಯಗಳಲ್ಲಿ ಹಲವು ವರ್ಷಗಳಿಂದಲೂ ಗಸ್ತು ತಿರುಗುವ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಫೆಬ್ರುವರಿಯಲ್ಲಿ ಕ್ಯಾಮರಾವನ್ನು ನಿಗದಿತ ಸ್ಥಳದಲ್ಲಿ ಇಟ್ಟಿದ್ದರು. ನಂತರ ಮೇ ತಿಂಗಳಲ್ಲಿ ಅದನ್ನು ತೆಗೆದಿದ್ದರು. ಮೂರು ತಿಂಗಳಲ್ಲಿ ಕ್ಯಾಮರಾದಲ್ಲಿ ಸೆರೆಯಾದ ಫೋಟೋವನ್ನು ನೋಡುತ್ತಿದ್ದ ಅವರಿಗೆ ಈ ಪೋಟೋದಲ್ಲಿ ಹುಲಿ ಕಾಣಿಸಿತು. ಆದರೆ ಅದನ್ನು ದೃಢಪಡಿಸುವುದಕ್ಕೋಸ್ಕ ಮೇಲಧಿಕಾರಿಗಳಿಗೆ ಕಳಿಸಿದ್ದರು. ಇದೀಗ ಭಾರತದ ಅಳಿವನಂಚಿನಲ್ಲಿರುವ ಪ್ರಭೇದಗಳ ನಿರ್ವಹಣಾ ಇಲಾಖೆಯ ವನ್ಯಜೀವಿ ಇನ್​ಸ್ಟಿಟ್ಯೂಶನ್​ ಪ್ರಸ್ತುತ ಫೋಟೋದಲ್ಲಿ ಇರುವುದು ಹುಲಿ ಎಂಬುದನ್ನು ದೃಢಪಡಿಸಿದೆ. ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.

ರೌಂಡ್ ಮಾರ್ಕ್​ ಮಾಡಿದಲ್ಲಿದೆ ಹುಲಿ

Can You Spot The Tiger In This Image from Dampa Tiger Reserve Sanctuary of Mizoram

Published On - 4:49 pm, Wed, 16 June 21

Follow Us
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಎರಡು ಸಿಂಹಗಳನ್ನು ಧೈರ್ಯವಾಗಿ ಎದುರಿಸಿದ ಬಸವ
ಎರಡು ಸಿಂಹಗಳನ್ನು ಧೈರ್ಯವಾಗಿ ಎದುರಿಸಿದ ಬಸವ
ಕಾರು ಡಿಕ್ಕಿಯಾದ ರಭಸಕ್ಕೆ ಮೇಲೆ ಹಾರಿ ಹತ್ತಾರು ಅಡಿ ದೂರಕ್ಕುರುಳಿದ ಮಹಿಳೆ
ಕಾರು ಡಿಕ್ಕಿಯಾದ ರಭಸಕ್ಕೆ ಮೇಲೆ ಹಾರಿ ಹತ್ತಾರು ಅಡಿ ದೂರಕ್ಕುರುಳಿದ ಮಹಿಳೆ
ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಮೇಲೆ ಹಾರಿ ನೆಲಕ್ಕೆ ಬಿದ್ದ ಗಂಡ-ಹೆಂಡತಿ
ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಮೇಲೆ ಹಾರಿ ನೆಲಕ್ಕೆ ಬಿದ್ದ ಗಂಡ-ಹೆಂಡತಿ
ಈ ಬಾರಿ ಅಸ್ಸಾಂನಲ್ಲಿ ಎನ್​ಡಿಎ ಹ್ಯಾಟ್ರಿಕ್​ಗೆ ಸಿದ್ಧವಾಗಿದೆ: ಮೋದಿ
ಈ ಬಾರಿ ಅಸ್ಸಾಂನಲ್ಲಿ ಎನ್​ಡಿಎ ಹ್ಯಾಟ್ರಿಕ್​ಗೆ ಸಿದ್ಧವಾಗಿದೆ: ಮೋದಿ
ಜನರ ಮೇಲೆ ನುಗ್ಗಿದ ಬಸ್, ಭಯಾನಕ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆ
ಜನರ ಮೇಲೆ ನುಗ್ಗಿದ ಬಸ್, ಭಯಾನಕ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆ
ಸಿಲಿಂಡರ್​​ ಸಮಸ್ಯೆ ನಡುವೆ ಅಚ್ಚರಿ ಹೇಳಿಕೆ ಕೊಟ್ಟ ಸಚಿವ ಮುನಿಯಪ್ಪ!
ಸಿಲಿಂಡರ್​​ ಸಮಸ್ಯೆ ನಡುವೆ ಅಚ್ಚರಿ ಹೇಳಿಕೆ ಕೊಟ್ಟ ಸಚಿವ ಮುನಿಯಪ್ಪ!
ಬೆಂಗಳೂರಿನಲ್ಲಿ ಆಟೋ ಗ್ಯಾಸ್​ಗಾಗಿ ಕಿ.ಮೀ ದೂರ ಫುಲ್ ಕ್ಯೂ!
ಬೆಂಗಳೂರಿನಲ್ಲಿ ಆಟೋ ಗ್ಯಾಸ್​ಗಾಗಿ ಕಿ.ಮೀ ದೂರ ಫುಲ್ ಕ್ಯೂ!