AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Visakhapatnam Encounter: ವಿಶಾಖಪಟ್ಟಣಂನಲ್ಲಿ 6 ಮಂದಿ ನಕ್ಸಲರ ಹತ್ಯೆ ಮಾಡಿದ ಗ್ರೇಹೌಂಡ್ಸ್ ಪೊಲೀಸ್​ ಪಡೆ; ಬೆಳಗ್ಗೆಯಿಂದಲೂ ಕಾರ್ಯಾಚರಣೆ

Naxal in Andhra Pradesh: ಪೊಲೀಸ್​ ಸಿಬ್ಬಂದಿ ಜೀವಕ್ಕೆ ಯಾವುದೇ ಅಪಾಯವಾಗಿಲ್ಲ. ಈ ಎನ್​ಕೌಂಟರ್ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಇಂದು ಸಂಜೆ ವೇಳೆಗೆ ತಿಳಿಸಲಾಗುವುದು ಎಂದು ಎಸ್​ಪಿ ಬಿವಿ ಕೃಷ್ಣರಾವ್​ ತಿಳಿಸಿದ್ದಾರೆ.

Visakhapatnam Encounter: ವಿಶಾಖಪಟ್ಟಣಂನಲ್ಲಿ 6 ಮಂದಿ ನಕ್ಸಲರ ಹತ್ಯೆ ಮಾಡಿದ ಗ್ರೇಹೌಂಡ್ಸ್ ಪೊಲೀಸ್​ ಪಡೆ; ಬೆಳಗ್ಗೆಯಿಂದಲೂ ಕಾರ್ಯಾಚರಣೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jun 16, 2021 | 3:50 PM

Share

ವಿಶಾಖಪಟ್ಟಣಂನಲ್ಲಿ ಇಂದು ಆರು ಮಂದಿ ನಕ್ಸಲರನ್ನು ಗ್ರೇಹೌಂಡ್ಸ್ ಪೊಲೀಸ್​ ಪಡೆ ಹೊಡೆದುರುಳಿಸಿದೆ. ಇಂದು ಬೆಳಗ್ಗೆಯಿಂದಲೂ ಮಾವೋವಾದಿಗಳು ಮತ್ತು ಪೊಲೀಸ್​ ಸಿಬ್ಬಂದಿ ನಡುವೆ ಗುಂಡಿನ ವಿನಿಮಯ ನಡೆಯುತ್ತಿತ್ತು. ಈ ಎನ್​ಕೌಂಟರ್​​ನಲ್ಲಿ ಆರು ಮಂದಿ ನಕ್ಸಲರನ್ನು ಗ್ರೇಹೌಂಡ್ಸ್​ ಪೊಲೀಸರು ಹತ್ಯೆಗೈದಿದ್ದಾರೆ ಎಂದು ವಿಶಾಖ ಗ್ರಾಮೀಣ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ.ಕೃಷ್ಣರಾವ್​ ತಿಳಿಸಿದ್ದಾರೆ.

ಆ್ಯಂಟಿ ನಕ್ಸಲ್​ ವಿಶೇಷ ಪಡೆ ಗ್ರೇಹೌಂಡ್ಸ್​ ಪೊಲೀಸರು ಮತ್ತು ಸಿಪಿಐ (ಮಾವೋವಾದಿಗಳು) ಸಿಬ್ಬಂದಿ ನಡುವೆ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಮಾಂಪಾದಲ್ಲಿರುವ ಕೊಯಿರು ಸುತ್ತಲಿನ ಅರಣ್ಯಪ್ರದೇಶವಾದ ತೀಲಗಮೆಟ್ಟದಲ್ಲಿ ಬೆಳಗ್ಗೆ ಗುಂಡಿನಚಕಮಕಿ ನಡೆದಿತ್ತು. ಆರು ಮಂದಿ ಮೃತಪಟ್ಟವರಲ್ಲಿ ಮಹಿಳಾ ನಕ್ಸಲರೂ ಸೇರಿದ್ದಾರೆ. ಮೃತಪಟ್ಟವರ ಬಳಿಯಿದ್ದ ಒಂದು ಎಕೆ 47, ಮೂರು 303 ರೈಫಲ್ಸ್​, ಒಂದು ಎಸ್​ಎಲ್​ಆರ್​ ಸೇರಿ ಹಲವು ವಿಧದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೃಷ್ಣರಾವ್​ ಮಾಹಿತಿ ನೀಡಿದ್ದಾರೆ.

ಪೊಲೀಸ್​ ಸಿಬ್ಬಂದಿ ಜೀವಕ್ಕೆ ಯಾವುದೇ ಅಪಾಯವಾಗಿಲ್ಲ. ಈ ಎನ್​ಕೌಂಟರ್ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಇಂದು ಸಂಜೆ ವೇಳೆಗೆ ತಿಳಿಸಲಾಗುವುದು ಎಂದು ಹೇಳಿದ್ದಾರೆ. ಇತ್ತೀಚೆಗೆ ನಕ್ಸಲರ ಹಾವಳಿ ಜಾಸ್ತಿಯಾಗುತ್ತಿದೆ. ಛತ್ತೀಸ್​ಗಢ್​​ನಲ್ಲಂತೂ ನಕ್ಸಲರ ದಾಳಿಗೆ ಅದೆಷ್ಟೋ ಪೊಲೀಸರು ಜೀವಕಳೆದುಕೊಳ್ಳುತ್ತಿದ್ದಾರೆ. ಈ ಮಧ್ಯೆ ಆ್ಯಂಟಿ ನಕ್ಸಲ್​​ ಪಡೆಗಳು ತಮ್ಮ ಕಾರ್ಯವನ್ನು ಚುರುಕುಗೊಳಿಸಿವೆ.

ಇದನ್ನೂ ಓದಿ: ಡ್ರಗ್ಸ್ ವಿಚಾರದಲ್ಲಿ ನನ್ನನ್ನು 100 % ಟಾರ್ಗೆಟ್ ಮಾಡಲಾಗಿದೆ; ನನಗೆ ಕಾಸ್ಟಿಂಗ್ ಕೌಚ್ ಎಕ್ಸ್​​ಪೀರಿಯನ್ಸ್ ಆಗಿಲ್ಲ: ರಾಗಿಣಿ ದ್ವಿವೇದಿ

Six Naxals killed in by Greyhounds police in Visakhapatnam

2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ