‘ಕಳೆದ 2 ದಿನದಿಂದ ಕೊವಿಡ್ ಪ್ರಕರಣಗಳ ಸಂಖ್ಯೆ ಹಾಗೂ ಸಾವಿನ ಪ್ರಮಾಣದಲ್ಲಿ ಇಳಿಕೆ’

ಮಹಾರಾಷ್ಟ್ರ, ಗುಜರಾತ್, ದೆಹಲಿ, ಮಧ್ಯಪ್ರದೇಶ, ಉತ್ತರಪ್ರದೇಶಲ್ಲಿ ಕೊವಿಡ್ ಕೇಸ್ ಕಡಿಮೆಯಾಗುತ್ತಿವೆ. ಆದರೆ, ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ, ಗೋವಾ, ತಮಿಳುನಾಡಿನಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಲವ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

‘ಕಳೆದ 2 ದಿನದಿಂದ ಕೊವಿಡ್ ಪ್ರಕರಣಗಳ ಸಂಖ್ಯೆ ಹಾಗೂ ಸಾವಿನ ಪ್ರಮಾಣದಲ್ಲಿ ಇಳಿಕೆ’
ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್
Edited By:

Updated on: Aug 23, 2021 | 12:38 PM

ದೆಹಲಿ: ಕಳೆದ 2 ದಿನದಿಂದ ಕೊವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಕೊವಿಡ್ ಸಾವಿನ ಪ್ರಮಾಣದಲ್ಲಿಯೂ ಇಳಿಕೆಯಾಗುತ್ತಿದೆ ಎಂಬ ಸಮಾಧಾನಕರ ಅಂಶವನ್ನು ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಇಂದು (ಮೇ 11) ಹೇಳಿದ್ದಾರೆ. ದೇಶದ 13 ರಾಜ್ಯಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಕೇಸ್‌ಗಳಿವೆ. 18 ರಾಜ್ಯಗಳಲ್ಲಿ ಕೊವಿಡ್ ಕೇಸ್‌ಗಳು ಇಳಿಕೆಯಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಮಹಾರಾಷ್ಟ್ರ, ಗುಜರಾತ್, ದೆಹಲಿ, ಮಧ್ಯಪ್ರದೇಶ, ಉತ್ತರಪ್ರದೇಶಲ್ಲಿ ಕೊವಿಡ್ ಕೇಸ್ ಕಡಿಮೆಯಾಗುತ್ತಿವೆ. ಆದರೆ, ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ, ಗೋವಾ, ತಮಿಳುನಾಡಿನಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಲವ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ಲಸಿಕೆ ನೀಡಿಕೆ ಕುರಿತು ಮಾತನಾಡಿದ ಅವರು, 17.27 ಕೋಟಿ ಡೋಸ್‌ ರಾಜ್ಯಗಳಿಗೆ ವಿತರಿಸಲಾಗಿದೆ. 13.55 ಕೋಟಿ ಮೊದಲ‌ ಡೋಸ್ ನೀಡಲಾಗಿದೆ. 3.72 ಕೋಟಿ ಎರಡನೇ ಡೋಸ್ ನೀಡಲಾಗಿದೆ. 18-44 ವರ್ಷ ವಯಸ್ಸಿನ 25.59 ಲಕ್ಷ ಜನರಿಗೆ ಮೊದಲ ಡೋಸ್‌ ಲಸಿಕೆ ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಪಿಎಂ ಕೇರ್ಸ್ ಫಂಡ್​ನಿಂದ 1 ಲಕ್ಷ ಆಕ್ಸಿಜನ್ ಕಾನ್ಸಂಟ್ರೇಟರ್ ಖರೀದಿ
ಪಿಎಂ ಕೇರ್ಸ್‌ ಫಂಡ್‌ನಿಂದ 1ಲಕ್ಷ ಆಕ್ಸಿಜನ್ ಕಾನ್ಸಂಟ್ರೇಟರ್‌ ಖರೀದಿಗೆ ನಿರ್ಧರಿಸಲಾಗಿದೆ. ದೇಶದಲ್ಲಿ ಮೆಡಿಕಲ್ ಆಕ್ಸಿಜನ್ ಉತ್ಪಾದನೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಪ್ರೆಷರ್ ಸ್ವಿಂಗ್ ಅಬ್ಸರ್ಪ್‌ಷನ್ ಪ್ಲಾಂಟ್ ಸ್ಥಾಪಿಸಿ ವೈದ್ಯಕೀಯ ಆಮ್ಲಜನಕ ಉತ್ಪಾದನೆ ಹೆಚ್ಚಿಸುತ್ತೇವೆ. ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಆಮದು ಮೂಲಕ ಪೂರೈಕೆ ಮಾಡುತ್ತೇವೆ. ಆಕ್ಸಿಜನ್ ಟ್ಯಾಂಕರ್, ಕಂಟೇನರ್‌ ಆಮದು ಮಾಡಿಕೊಳ್ಳುತ್ತೇವೆ ಎಂದು ಕೇಂದ್ರದ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೇಶೀಯವಾಗಿ ಆಕ್ಸಿಜನ್‌ ಟ್ಯಾಂಕರ್‌ಗಳ ಉತ್ಪಾದನೆ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ರೈಲು, ವಾಯು ಮಾರ್ಗದ ಮೂಲಕ ಟ್ಯಾಂಕರ್ ಸಾಗಾಟ ಮಾಡುತ್ತೇವೆ. ವೈದ್ಯಕೀಯ ಆಕ್ಸಿಜನ್ ಟ್ಯಾಂಕರ್ ಸಾಗಾಟ ಅವಧಿ ಇಳಿಕೆ ಮಾಡಲು ಕ್ರಮ ಕೈಗೊಳ್ಳುತ್ತೇವೆ. ಮೆಡಿಕಲ್ ಆಕ್ಸಿಜನ್ ಸಿಲಿಂಡರ್‌ಗಳನ್ನು ಖರೀದಿಸಲಾಗುವುದು. ಆಕ್ಸಿಜನ್ ಟ್ಯಾಂಕರ್‌ಗಳನ್ನು ಜಿಪಿಎಸ್ ಮೂಲಕ ಮಾನಿಟರಿಂಗ್ ಮಾಡಲಾಗುವುದು. ಆಕ್ಸಿಜನ್ ಸಾಗಣೆ, ಹಂಚಿಕೆಗೆ ಸೆಂಟ್ರಲ್ ಕಂಟ್ರೋಲ್ ರೂಂ ಮಾಡಲಾಗುವುದು ಎಂದು ಕೂಡ ಕೇಂದ್ರದ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಲಸಿಕೆ ಇಲ್ಲದೆ ಲಸಿಕಾ ಅಭಿಯಾನಕ್ಕೆ ಚಾಲನೆ, ಸರ್ಕಾರ ಭ್ರಮೆ ಹುಟ್ಟಿಸುವ ಕೆಲಸ ಮಾಡಬಾರದು: ಸಿದ್ದರಾಮಯ್ಯ

ಆಹಾರ ಭದ್ರತೆ ಒದಗಿಸಲು ಹೈಕೋರ್ಟ್ ಸೂಚನೆ; ಮೇ 24ರವರೆಗೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಊಟ

Published On - 6:27 pm, Tue, 11 May 21