ಅನೈತಿಕ ಸಂಬಂಧದ ಶಂಕೆ; ಹೆಂಡತಿಯ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಂದ ಗಂಡ

ನೊಯ್ಡಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಅನೈತಿಕ ಸಂಬಂಧದ ಅನುಮಾನದ ಮೇಲೆ 55 ವರ್ಷದ ವ್ಯಕ್ತಿ ತನ್ನ ಪತ್ನಿಯ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಇವರಿಬ್ಬರೂ 2005ರಲ್ಲಿ ವಿವಾಹವಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರ ಮಗ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರೆ, ಅವರ ಮಗಳು 8ನೇ ತರಗತಿಯಲ್ಲಿ ಓದುತ್ತಿದ್ದಾರೆ. ಈ ಆಘಾತಕಾರಿ ಘಟನೆ ಉತ್ತರ ಪ್ರದೇಶವನ್ನು ಬೆಚ್ಚಿ ಬೀಳಿಸಿದೆ.

ಅನೈತಿಕ ಸಂಬಂಧದ ಶಂಕೆ; ಹೆಂಡತಿಯ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಂದ ಗಂಡ
Noida Crime News

Updated on: Apr 05, 2025 | 5:55 PM

ನೊಯ್ಡಾ, ಏಪ್ರಿಲ್ 5: ನೊಯ್ಡಾದಲ್ಲಿ 55 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ವಿವಾಹೇತರ ಸಂಬಂಧವಿದೆ (Extramarital Affair) ಎಂಬ ಅನುಮಾನದಿಂದ ಆಕೆಯನ್ನು ಹೊಡೆದು ಕೊಂದಿದ್ದಾನೆ. ಆರೋಪಿ ನೂರುಲ್ಲಾ ಹೈದರ್ ತನ್ನ ಹೆಂಡತಿಯ ಜೊತೆ ಜಗಳವಾಡಿದ ನಂತರ ಆಕೆಯ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ನೊಯ್ಡಾದ ಸೆಕ್ಟರ್ 15 ಪ್ರದೇಶದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. 42 ವರ್ಷದ ಆಸ್ಮಾ ಖಾನ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ನೊಯ್ಡಾದ (Noida) ಸೆಕ್ಟರ್ 62ರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಮೊದಲು ದೆಹಲಿಯಲ್ಲಿ ವಾಸಿಸುತ್ತಿದ್ದರು. ಜಾಮಿಯಾ ಮಿಲಿಯಾ ಇಸ್ಲಾಮಿಯಾದಿಂದ ಎಂಜಿನಿಯರಿಂಗ್ ಪದವೀಧರೆಯಾಗಿದ್ದ ಆಕೆ ಇತ್ತೀಚೆಗೆ ನೊಯ್ಡಾಗೆ ಶಿಫ್ಟ್ ಆಗಿದ್ದರು. ಆಕೆಯ ಗಂಡ ಬಿಹಾರದವನಾಗಿದ್ದು, ಎಂಜಿನಿಯರಿಂಗ್ ಪದವೀಧರನೂ ಆಗಿದ್ದ. ಆದರೆ ಆತನಿಗೆ ಸದ್ಯಕ್ಕೆ ಕೆಲಸ ಇರಲಿಲ್ಲ. ನಿರುದ್ಯೋಗಿಯಾಗಿದ್ದ ಆತನಿಗೆ ತನ್ನ ಹೆಂಡತಿ ಆಫೀಸಿನಲ್ಲಿ ಬೇರೆಯವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂಬ ಅನುಮಾನ ಉಂಟಾಗಿತ್ತು.

ಇವರಿಬ್ಬರೂ 2005ರಲ್ಲಿ ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಮಗ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರೆ, ಅವರ ಮಗಳು 8ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಈ ದಂಪತಿಯ ಮಗ ಎಮರ್ಜೆನ್ಸಿ ನಂಬರ್ 112 ಅನ್ನು ಡಯಲ್ ಮಾಡುವ ಮೂಲಕ ಪೊಲೀಸರಿಗೆ ಘಟನೆಯ ಬಗ್ಗೆ ವರದಿ ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಕೊಲೆಯ ಮಾಹಿತಿ ಬಂದ ತಕ್ಷಣ ನಮ್ಮ ತಂಡ ಮತ್ತು ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ತಲುಪಿದರು. ನಾವು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಮೃತ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಪೊಲೀಸ್ ಉಪ ಆಯುಕ್ತ ರಂಬದನ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಹತ್ಯೆಗೆ ಸುಪಾರಿ: ಗಂಡನ ಕೊಲೆಯನ್ನು ವಿಡಿಯೋ ಕಾಲ್​ನಲ್ಲಿ ನೋಡಿ ಆನಂದಪಟ್ಟ ಹೆಂಡ್ತಿ!

ಇದನ್ನೂ ಓದಿ
ಬ್ಯಾಡ್ಮಿಂಟನ್ ಕೋಚ್​ನಿಂದ ಬಾಲಕಿ ಮೇಲೆ ಅತ್ಯಾಚಾರ: ವಿಡಿಯೋಗಳು ಪತ್ತೆ!
ಕೌಟುಂಬಿಕ ಕಲಹದ ವೇಳೆ ಮನೆಯ ಛಾವಣಿ ಕುಸಿದು 10 ಜನರ ಸ್ಥಿತಿ ಗಂಭೀರ
ಮದುವೆ ಬೇಡವೆಂದು ವರನನ್ನು ಕೊಲ್ಲಲು ಸುಪಾರಿಕೊಟ್ಟ ವಧು
ಬೆಂಗಳೂರು: ಬಿಹಾರದ ಯುವತಿಯ ಅಪಹರಿಸಿ ಅತ್ಯಾಚಾರ, ಇಬ್ಬರ ಬಂಧನ

ಪ್ರಾಥಮಿಕ ತನಿಖೆಯಲ್ಲಿ ಹೈದರ್ ತನ್ನ ಪತ್ನಿಗೆ ವಿವಾಹೇತರ ಸಂಬಂಧವಿದೆ ಎಂದು ಅನುಮಾನಿಸುತ್ತಿದ್ದರು ಎಂದು ತಿಳಿದುಬಂದಿದೆ. ಹೈದರ್ ತನ್ನ ಪತ್ನಿ ಆಸ್ಮಾಗೆ ಸುತ್ತಿಗೆಯಿಂದ ಹೊಡೆಯುವಾಗ ದಿಂಬಿನಿಂದ ಮುಖ ಮುಚ್ಚಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ದಿ ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಶುಕ್ರವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ, ಅಸ್ಮಾ ತನ್ನ ಸಹೋದರಿಗೆ ಕರೆ ಮಾಡಿ ತಾನು ಮತ್ತು ಹೈದರ್ ರಾತ್ರಿಯಿಂದ ಜಗಳವಾಡುತ್ತಿರುವುದಾಗಿ ತಿಳಿಸಿದ್ದಳು. ನನ್ನ ಗಂಡನ ಅನುಮಾನದಿಂದ ನನಗೂ ಸಾಕಾಗಿದೆ. ನೀನೇ ಒಮ್ಮೆ ಬಂದು ಆತನ ಜೊತೆ ಮಾತನಾಡು ಎಂದು ಕೂಡ ಹೇಳಿದ್ದಳು ಎನ್ನಲಾಗಿದೆ. ಆದರೆ, ಆಕೆ ಮನೆಗೆ ಬರುವಷ್ಟರೊಳಗೆ ಕೊಲೆ ನಡೆದಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ