AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಕಿ ಮೇಲೆ ಬ್ಯಾಡ್ಮಿಂಟನ್ ಕೋಚ್​ ಅತ್ಯಾಚಾರ: ಫೋನ್​ನಲ್ಲಿ ಹಲವು ಹುಡುಗಿಯರ ವಿಡಿಯೋ ಪತ್ತೆ

ಕೋಚಿಂಗ್ ಪಡೆಯಲು ಬರುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೋಚಿಂಗ್ ನೀಡುವ ನೆಪದಲ್ಲಿ ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ. ಕ್ರೀಡಾ ತರಬೇತಿ ಕೇಂದ್ರದಲ್ಲಿ ಹಲವು ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ನೀಡಿದ್ದು, ಕೋಚ್​ ಮೊಬೈಲ್​ನಲ್ಲಿ 13 ರಿಂದ 16 ವರ್ಷ ವಯಸ್ಸಿನ ಹಲವು ಹುಡುಗಿಯರ ನಗ್ನ ಫೋಟೋಗಳು ಹಾಗೂ ವೀಡಿಯೋಗಳು ಪತ್ತೆಯಾಗಿವೆ.

ಬಾಲಕಿ ಮೇಲೆ ಬ್ಯಾಡ್ಮಿಂಟನ್ ಕೋಚ್​ ಅತ್ಯಾಚಾರ: ಫೋನ್​ನಲ್ಲಿ ಹಲವು ಹುಡುಗಿಯರ ವಿಡಿಯೋ ಪತ್ತೆ
Badminton Coach
ರಾಮು, ಆನೇಕಲ್​
| Edited By: |

Updated on:Apr 05, 2025 | 5:25 PM

Share

ಬೆಂಗಳೂರು, (ಏಪ್ರಿಲ್ 05): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೊಂದು (Bengaluru) ಬೆಚ್ಚಿ ಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಬ್ಯಾಡ್ಮಿಂಟನ್ ತರಬೇತುದಾರ​ (badminton Coach) ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಮಿಳುನಾಡು ಮೂಲದ ಸುರೇಶ್ ಬಾಲಾಜಿ (26) ಬ್ಯಾಡ್ಮಿಂಟನ್ ಕೋಚ್ ಆಗಿದ್ದು,  ಬ್ಯಾಡ್ಮಿಂಟನ್ ಹೇಳಿಕೊಡುವ ನೆಪದಲ್ಲಿ ಅಪ್ರಾಪ್ತ ಬಾಲಕಿಯರನ್ನು ಕೋಚ್‌ ಲೈಂಗಿಕವಾಗಿ ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ. ಕಳೆದ ಎರಡು ವರ್ಷಗಳ ಹಿಂದೆ ಬ್ಯಾಡ್ಮಿಂಟನ್ ಕೋಚಿಂಗ್​ ಸೇರಿದ್ದ ಬಾಲಕಿಯನ್ನು ಆಗಾಗ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಯಾರ ಬಳಿಯೂ ಬಾಯಿ ಬಿಡದಂತೆ ಬಾಲಕಿಗೆ ಹೇಳಿದ್ದ.

ಹೀಗೆ ಒಂದು ದಿನ ಬಾಲಕಿ ರಜೆಗೆ ಅಜ್ಜಿಯ ಮನೆಗೆ ಬಂದಾಗ ಮೊಬೈಲ್ ನಿಂದ ತನ್ನ ನಗ್ನ ಪೋಟೋವನ್ನು ಸುರೇಶ್​ಗೆ ಶೇರ್ ಮಾಡಿದ್ದಾಳೆ. ಬಳಿಕ ಮೊಬೈಲ್​ ನೋಡಿದಾಗ ಕೋಚ್​ಗೆ ನಗ್ನ ಫೋಟೋ ಕಳುಹಿಸಿರುವುದು ಪತ್ತೆಯಾಗಿದೆ. ಇದನ್ನು ನೋಡಿ ಅಜ್ಜಿ ಶಾಕ್ ಆಗಿದ್ದಾಳೆ. ಬಾಲಕಿ ತನ್ನ ನಗ್ನ ಫೋಟೋವನ್ನು ಕೋಚ್​ಗೆ ಕಳುಹಿಸಿರುವುದನ್ನು ಕಂಡು ಬೆಚ್ಚಿಬಿದ್ದಿರುವ ಅಜ್ಜಿ ಕೂಡಲೇ ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಆಗ ಬಾಲಕಿಯನ್ನ ವಿಚಾರಿಸಿದಾಗ ಕೋಚ್​ ಸುರೇಶನ ಕಾಮದಾಟ ಬಟಾಬಯಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇದೆಂಥಾ ಕೃತ್ಯ: ಯುವತಿಯ ಖಾಸಗಿ ಭಾಗ ಮುಟ್ಟಿ ಬರ್ತಿಯಾ ಎಂದ ಕಾಮುಕರು!

ಬಳಿಕ ಪೋಷಕರು ಕೋಚ್ ಸುರೇಶ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಇದೇ ವೇಳೆ ಆರೋಪಿ ಮೊಬೈಲ್​ ಪರಿಶೀಲನೆ ಮಾಡಿದಾಗ ಕ್ರೀಡಾ ತರಬೇತಿ ಕೇಂದ್ರದಲ್ಲಿ ಹಲವು ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಕಿರುಕುಳ ನೀಡಿರುವುದು ಕಂಡುಬಂದಿದೆ.

ಇದನ್ನೂ ಓದಿ
Image
ಗಂಡನ ಕೊಲೆಯನ್ನು ವಿಡಿಯೋ ಕಾಲ್​ನಲ್ಲಿ ನೋಡಿ ಆನಂದಪಟ್ಟ ಹೆಂಡ್ತಿ!
Image
ಬೆಂಗಳೂರು: ಬಿಹಾರದ ಯುವತಿಯ ಅಪಹರಿಸಿ ಅತ್ಯಾಚಾರ, ಇಬ್ಬರ ಬಂಧನ
Image
ಅತ್ಯಾಚಾರವೆಸಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಂದು ಮತ್ತೆ ಬಾಲಕಿಯ ಅಪಹರಿಸಿದ
Image
ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್, ವಿಡಿಯೋ ವೈರಲ್

ಅಲ್ಲದೇ ಮೊಬೈಲ್​ನಲ್ಲಿ 13 ರಿಂದ 16 ವರ್ಷ ವಯಸ್ಸಿನ ಹಲವು ಹುಡುಗಿಯರ ನಗ್ನ ಫೋಟೋಗಳು ಮತ್ತು ವೀಡಿಯೊಗಳು ಸಹ ಪತ್ತೆಯಾಗಿವೆ. ಹೀಗಾಗಿ ಇನ್ನಷ್ಟು ತನಿಖೆ ನಡೆಸಲು ಪೊಲೀಸರು, ಆರೋಪಿ ಸುರೇಶ್ ಬಾಲಾಜಿ ಕೋರ್ಟ್​ ಮೂಲಕ ಎಂಟು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಬ್ಯಾಡ್ಮಿಂಟನ್ ಕೋಚಿಂಗ್ ಬರುತ್ತಿದ್ದ ಬಾಲಕಿಯರೊಂದಿಗೆ ತನ್ನ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ. ಇದನ್ನು ಯಾರಿಗೂ ಹೇಳದಂತೆ ಹೆದರಿಸಿದ್ದ. ಹೀಗಾಗಿ ಇದುವರೆಗೂ ಬಾಲಕಿಯರು ಬಾಯ್ಬಿಟ್ಟಿಲ್ಲ. ಆದ್ರೆ, ಓರ್ವ ಬಾಲಕಿ ಅಜ್ಜಿ ಮೊಬೈಲ್​ನಿಂದ ತನ್ನ  ನಗ್ನ ಫೋಟೋವನ್ನು ಕಳುಹಿಸಿದಾಗ ಕೋಚರ್​ ಸುರೇಶನ ನವರಂಗಿ ಆಟ ಬಯಲಿಗೆ ಬಿದ್ದಿದ್ದು, ಬಳಿಕ ಇನ್ನುಳಿದ ಬೇರೆ ಬಾಲಕಿಯರ ಮೇಲೆ ಲೈಂಗಿಕದ ದೌರ್ಜನ್ಯ ಎಸಗಿರುವುದು ಗೊತ್ತಾಗಿದೆ.  ಹೀಗಾಗಿ ಪೊಲೀಸರು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತೆ ಬಾಲಕಿಯರ ಹೇಳಿಕೆ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:08 pm, Sat, 5 April 25

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್